ಜನಸಾಮಾನ್ಯರಿಗೆ ಬಿಗ್ ಶಾಕ್! ಸನ್ ಫ್ಲವರ್ ಆಯಿಲ್ ದರ ಕೇಳಿದ್ರೆ ಶಾಕ್ ಆಗ್ತೀರಾ! ಎಷ್ಟು ಏರಿಕೆಯಾಗಿದೆ ಗೊತ್ತಾ?
ಎಲ್ಪಿಜಿ ಸಿಲಿಂಡರ್ ದರ, ಚಿನ್ನ - ಬೆಳ್ಳಿ ದರ, ತರಕಾರಿ ದರ ಹೀಗೆ ಒಂದಿಲ್ಲೊಂದು ವಸ್ತುವಿನ ದರ ಏರಿಕೆಯಾಗುತ್ತಲೇ ಇದೆ.

ದಿನಬೆಳಗಾದರೆ ಸಾಕು ಒಂದಿಲ್ಲೊಂದು ವಸ್ತುವಿನ ಬೆಲೆ ಏರಿಕೆಯ ಸುದ್ದಿಯೇ ಕಣ್ಮುಂದೆ ಬರುತ್ತಿದೆ. ಎಲ್ಪಿಜಿ ಸಿಲಿಂಡರ್ ದರ, ಚಿನ್ನ – ಬೆಳ್ಳಿ ದರ, ತರಕಾರಿ ದರ ಹೀಗೆ ಒಂದಿಲ್ಲೊಂದು ವಸ್ತುವಿನ ದರ ಏರಿಕೆಯಾಗುತ್ತಲೇ ಇದೆ. ಮುಂದಿನ ವಾರದಲ್ಲಿ ಪೆಟ್ರೋಲ್ – ಡೀಸೆಲ್ ದರವೂ ಏರಿಕೆಯಾಗಬಹುದು ಎಂಬ ಮುನ್ಸೂಚನೆ ಕೂಡ ದೊರಕಿದೆ. ಈ ಎಲ್ಲದರ ನಡುವೆ ಸದ್ದಿಲ್ಲದೇ ಅಡುಗೆ ಎಣ್ಣೆ ದರದಲ್ಲಿಯೂ ಶೇಕಡಾ 22ರಷ್ಟು ಏರಿಕೆ ಕಂಡು ಬಂದಿದ್ದು, ಜನಸಾಮಾನ್ಯರು ಬೆಲೆಏರಿಕೆಯ ಬಿಸಿಗೆ ಕಂಗಾಲಾಗಿ ಹೋಗಿದ್ದಾರೆ.
ಜನಸಾಮಾನ್ಯರು ಬಳಕೆ ಮಾಡುವ ಸನ್ಫ್ಲವರ್ ಅಡುಗೆ ಎಣ್ಣೆಯು ಸಾಮಾನ್ಯವಾಗಿ ಉಕ್ರೇನ್ ಹಾಗೂ ರಷ್ಯಾದಿಂದಲೇ ಭಾರತಕ್ಕೆ ಆಮದಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಕ್ಕಟ್ಟಿನಿಂದಾಗಿ ಅಡುಗೆ ಎಣ್ಣೆಯ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗುತ್ತಿದೆ. ಹೀಗಾಗಿ ಅಡುಗೆ ಎಣ್ಣೆ ದರದಲ್ಲಿ ಏರಿಕೆಯಾಗುತ್ತಿದೆ ಎಂಬುದು ವ್ಯಾಪಾರಿಗಳ ಮಾತಾಗ
ಇದನ್ನೂ ಓದಿ: ಬ್ರಹ್ಮಾವರ: ತಾಯಿಯ ಅಂತ್ಯಸಂಸ್ಕಾರದ ವೇಳೆ ಮನೆಯಲ್ಲಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು
ಇನ್ನು ಅಡುಗೆ ಎಣ್ಣೆ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಬೆಲೆ ಏರಿಕೆಯಾಗುತ್ತಿರುವುದು ಒಂದೆಡೆಯಾದರೆ ಇದನ್ನೇ ಬಂಡವಾಳವಾಗಿಸಿಕೊಂಡು ಅಡುಗೆ ಎಣ್ಣೆಗಳಿಗೆ ನಕಲಿ ಅಭಾವ ಸೃಷ್ಠಿ ಮಾಡುತ್ತಿರುವ ಘಟನೆ ಕೂಡ ಬೆಳಕಿಗೆ ಬರುತ್ತಿದೆ. ಅಡುಗೆ ಎಣ್ಣೆ ದಾಸ್ತಾನಿನಲ್ಲಿ ನಕಲಿ ಅಭಾವ ಸೃಷ್ಠಿಸಿ ಬಳಿಕ 750 ರೂಪಾಯಿ ಎಣ್ಣೆಯನ್ನು 1100 ರೂಪಾಯಿಗಳಿಗೆ ಮಾರಾಟ ಮಾಡುತ್ತಿರುವ ಆರೋಪ ಕೂಡ ಕೇಳಿ ಬಂದಿದೆ.
ಈ ಎಲ್ಲಾ ಘಟನೆಗಳಿಂದ ರೋಸಿ ಹೋಗಿರುವ ಜನಸಾಮಾನ್ಯರು ತಮ್ಮ ಅಡುಗೆ ಮನೆಗಳಲ್ಲಿ ಸನ್ಫ್ಲವರ್ ಎಣ್ಣೆಗಳಿಗೆ ಗುಡ್ವೈ ಹೇಳುವ ನಿರ್ಧಾರಕ್ಕೆ ಬಂದಂತಿದೆ. ದುಬಾರಿ ದರ ನೀಡಿ ಸನ್ಫ್ಲವರ್ ಎಣ್ಣೆ ಖರೀದಿಸುವ ಬದಲು ಅಡುಗೆಗೆ ಸೋಯಾಬಿನ್ ಅಥವಾ ಕೊಬ್ಬರಿ ಎಣ್ಣೆಗಳನ್ನು ಬಳಕೆ ಮಾಡುವ ಬಗ್ಗೆ ಜನಸಾಮಾನ್ಯರು ಯೋಚಿಸುತ್ತಿದ್ದಾರೆ. ಭವಿಷ್ಯದಲ್ಲಿ ಸನ್ಫ್ಲವರ್ ಎಣ್ಣೆಗೆ ಬೇಡಿಕೆ ಕಡಿಮೆಯಾದಲ್ಲಿ ಪರಿಸ್ಥಿತಿ ತಾನಾಗಿಯೇ ಹತೋಟಿಗೆ ಬರುವ ಸಾಧ್ಯತೆಯಿದೆ.



