Digital fraud: ಡಿಜಿಟಲ್ ವಂಚಕರ ಜಾಲಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ದಿಟ್ಟ ಕ್ರಮ : ಇನ್ಮುಂದೆ ನಡೆಯಲ್ಲ ಸೈಬರ್ ಕಳ್ಳರ ಕಾಟ
Digital fraud: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ನಂತಹ ಸೈಬರ್ ವಂಚನೆ ಜಾಲಗಳು ಬೆಳಕಿಗೆ ಬರುತ್ತಲೇ ಇದೆ. ಸೈಬರ್ ವಂಚನೆಯಿಂದಾಗಿ ಅನೇಕರು ತಮ್ಮ ಜೀವಮಾನದ ಉಳಿತಾಯದ ಮೊತ್ತವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸೈಬರ್ ವಂಚನೆಯ ಜಾಲಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಈ ಸಂಬಂಧ ಹೊಸ ನಿಯಮ ರೂಪಿಸಿರುವ ದೂರ ಸಂಪರ್ಕ ಸಚಿವಾಲಯ (Department of Telecommunications), ದೇಶದಲ್ಲಿ ನ್ಮುಂದೆ ಮಾರಾಟವಾಗುವ ಎಲ್ಲಾ ಹೊಸ ಸ್ಮಾರ್ಟ್ ಫೋನ್ಗಳಲ್ಲಿ ಸಂಚಾರ ಸಾಥ್ ಕಡ್ಡಾಯಗೊಳಿಸಲು ಸೂಚನೆ ನೀಡಿದೆ.
ಈ ಆ್ಯಪ್ನ್ನು ಡಿಲೀಟ್ ಮಾಡಲು ಆಗದ ರೀತಿಯಲ್ಲಿ ಇನ್ಸ್ಟಾಲ್ ಮಾಡುವಂತೆ ಎಲ್ಲಾ ಸ್ಮಾರ್ಟ್ಫೋನ್ ತಯಾರಕಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಈ ಆ್ಯಪ್ನ ಸಹಾಯದಿಂದ ಯಾವುದೇ ಮೊಬೈಲ್ಗಳಲ್ಲಿ ಸೈಬರ್ ವಂಚನೆ ನಡೆಯದಂತೆ ತಡೆಯಬಹುದಾಗಿದೆ.
Also Read: Bombay Name Change : ಐಐಟಿ ಬಾಂಬೆ ಐಐಟಿ ಮುಂಬೈ ಆಗುತ್ತಾ? ಶುರುವಾಗಿದೆ ಹೆಸರು ಬದಲಾವಣೆಯ ಚರ್ಚೆ!
ನವೆಂಬರ್ 28ರಂದು ಈ ಆದೇಶ ನೀಡಲಾಗಿದ್ದು ಸ್ಮಾರ್ಟ್ಫೋನ್ ತಯಾರಕ ಕಂಪನಿಗಳಿಗೆ 90 ದಿನಗಳ ಸಮಯಾವಕಾಶ ನೀಡಿದೆ. ಅಲ್ಲದೇ ಈಗಾಗಲೇ ಮಾರಾಟವಾಗಿರುವ ಮೊಬೈಲ್ಗಳಲ್ಲಿಯೂ ಈ ಆ್ಯಪ್ ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಒಮ್ಮೆ ಈ ಆ್ಯಪ್ ಇನ್ಸ್ಟಾಲ್ ಮಾಡಿದ ಬಳಿಕ ಮತ್ತೆಂದೂ ಡಿಲೀಟ್ ಆಗದ ರೀತಿಯಲ್ಲಿ ಮೊಬೈಲ್ಗಳ ಸಾಫ್ಟ್ವೇರ್ಗಳಲ್ಲಿ ಬದಲಾವಣೆ ತರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.



