ಆರ್ಥಿಕವಾಗಿ ಸ್ವತಂತ್ರರಾಗಿರುವ ಪತ್ನಿಗೆ ವಿಚ್ಛೇದನದ ಬಳಿಕ ಜೀವನಾಂಶ ಕೇಳುವ ಹಕ್ಕಿಲ್ಲ : ಹೈಕೋರ್ಟ್ ಮಹತ್ವದ ಆದೇಶ

Divorce: ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಜೀವನ ಸಂಗಾತಿಗೆ ವಿಚ್ಛೇದನದ ಬಳಿಕ ಶಾಶ್ವತ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜೀವನಾಂಶ ಎನ್ನುವುದು ಆರ್ಥಿಕ ಸಮಾನತೆಯ ಸಾಧನವಲ್ಲ, ಇದೊಂದು ಸಾಮಾಜಿಕ ನ್ಯಾಯದ ಅಡಿಯಲ್ಲಿ ನೀಡುವ ಪರಿಹಾರ ಮಾತ್ರ ಎಂದು ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಅನಿಲ್​ ಕ್ಷೇತ್ರರ್ಪಾಲ್​ ಮತ್ತು ಹರೀಶ್​ ವೈದ್ಯನಾಥನ್​ ಶಂಕರ್​ ಅವರ ನೇತೃತ್ವದ ವಿಭಾಗೀಯ ಪೀಠವು, ಜೀವನಾಂಶ ಬಯಸುವ ವ್ಯಕ್ತಿಯು ತನಗೆ ಆರ್ಥಿಕ ಸಹಾಯದ ನಿಜವಾದ ಅವಶ್ಯಕತೆಯನ್ನು ಪ್ರದರ್ಶಿಸಬೇಕೆಂದು ಕಾನೂನು ಹೇಳುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.

ಅರ್ಜಿದಾರರು ಆರ್ಥಿಕವಾಗಿ ಸ್ವಾವಲಂಬಿ ಹಾಗೂ ಸ್ವತಂತ್ರರಾಗಿದ್ದಲ್ಲಿ ಜೀವನಾಂಶ ನೀಡಲು ಹಿಂದೂ ವಿವಾಹ ಕಾಯ್ದೆ 25ರ ಅಡಿಯಲ್ಲಿ ನ್ಯಾಯಾಂಗ ವಿವೇಚನೆಯನ್ನು ಬಳಸುವುದಿಲ್ಲ. ಅರ್ಜಿದಾರನು ಆರ್ಥಿಕ ದುರ್ಬಲತೆಯನ್ನು ಕೋರ್ಟ್​ನ ಎದುರು ಸಾಬೀತುಪಡಿಸಲು ವಿಫಲರಾದಲ್ಲಿ ಅಂತಹ ಸಂಗಾತಿಗೆ ವಿಚ್ಛೇದನವಾಗಿದೆ ಎಂಬ ಒಂದೇ ಕಾರಣಕ್ಕೆ ಜೀವನಾಂಶ ಒದಗಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Also Read: 23ನೇ ವರ್ಷದಲ್ಲಿ ಎಸಗಿದ ಅಪರಾಧಕ್ಕೆ 81ನೇ ಪ್ರಾಯದಲ್ಲಿ ಜಾಮೀನು ಪಡೆದ ವ್ಯಕ್ತಿ..!

ಮಹಿಳೆಯೊಬ್ಬರಿಗೆ ಶಾಶ್ವತ ಜೀವನಾಂಶ ನಿರಾಕರಿಸಿ, ಕೌಟುಂಬಿಕ ದೌರ್ಜನ್ಯದ ಆಧಾರದ ಮೇಲೆ ಪತಿಗೆ ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯವು ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

ವಕೀಲರಾಗಿ ವೃತ್ತಿ ನಿರತರಾಗಿರುವ ಪತಿ ಹಾಗೂ ಇಂಡಿಯನ್​ ರೈಲ್ವೆ ಟ್ರಾಫಿಕ್​ ಸರ್ವೀಸ್​​ನಲ್ಲಿ ಅಧಿಕಾರಿಯಾಗಿರುವ ಪತ್ನಿ 2010ರಲ್ಲಿ ವಿವಾಹವಾಗುವ ಮುನ್ನವೇ ಬೇರೊಂದು ಮದುವೆಯಿಂದ ವಿಚ್ಛೇದನ ಪಡೆದಿದ್ದರು. 2ನೇ ಮದುವೆಯಾದ 14 ತಿಂಗಳಲ್ಲಿ ಈ ಮದುವೆಯೂ ಮುರಿದುಬಿದ್ದಿದೆ.

ಈ ಮದುವೆಯಿಂದ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯಾಗಿದೆ ಎಂದು ಪತಿ ಆರೋಪಿಸಿದ್ದರು. ಇದರಲ್ಲಿ ನಿಂದನಾತ್ಮಕ ಭಾಷಾ ಪ್ರಯೋಗ, ಅವಮಾನಕರ ಸಂದೇಶಗಳು, ಸಾಮಾಜಿಕ ಹಾಗೂ ವೃತ್ತಿ ರಂಗದಲ್ಲಿ ಅವಮಾನ ಸೇರಿದಂತೆ ಹಲವು ವಿಷಯಗಳು ಇದ್ದವು. ಆದರೆ ಪತ್ನಿ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಹಾಗೂ ಪತಿಯ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು.

ವಿಚ್ಚೇದನದ ಸಂದರ್ಭದಲ್ಲಿ ಪತ್ನಿಯು 50 ಲಕ್ಷ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ಆಗ್ರಹಿಸಿದ್ದರು. ಆದರೆ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ ನ್ಯಾಯಾಲಯವು ಜೀವನಾಂಶವನ್ನು ಕೊಡಿಸಲು ನಿರಾಕರಿಸಿತ್ತು. ಇದೇ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

Also Read: ಸಾಲ ತೀರಿಸದ ಸಹೋದರರು, ಪತ್ನಿಗೂ ವಿಷವುಣಿಸಿ ತಾನೂ ಆತ್ಮ*ಹತ್ಯೆಗೆ ಶರಣಾದ ಅಣ್ಣ..!

ಪತ್ನಿಯು ತನ್ನ ಪತಿ ಹಾಗೂ ಅವರ ತಾಯಿಯ ಮೇಲೆ ಅಶ್ಲೀಲ ಭಾಷಾ ಪ್ರಯೋಗ ಮಾಡಿರುವುದನ್ನು ಗಮನಿಸಿದ ನ್ಯಾಯಾಲವು ಪತ್ನಿಯ ನಡುವಳಿಕೆಯು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ ವೃತ್ತಿಯ ಸರ್ಕಾರಿ ಹಿರಿಯ ಅಧಿಕಾರಿಯಾಗಿರುವ ಮಹಿಳೆಯರು ಗಣನೀಯ ಆದಾಯ ಗಳಿಸುತ್ತಿದ್ದರು. ಹಾಗೂ ಆರ್ಥಿಕವಾಗಿ ಸಂಪೂರ್ಣ ಸ್ವತಂತ್ರರಿದ್ದರು. ಇದನ್ನು ಗಮನಿಸಿದ ಹೈಕೋರ್ಟ್ ಮಹಿಳೆಗೆ ಜೀವನಾಂಶ ಒದಗಿಸಲು ನಿರಾಕರಿಸಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories