ರಸ್ತೆ ಅಪಘಾತ ಕೊಲೆಯಲ್ಲಿ ಅಂತ್ಯ : ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ
Road accident: ಬೈಕ್ ಅಪಘಾತದ ಬಳಿಕ ನಡೆದ ಜಗಳ ತಾರಕ್ಕೇರಿದ್ದು ಈ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆಯು ಮಧ್ಯಪ್ರದೇಶದ(Madhyapradesh) ಉಜ್ಜಯಿನಿಯಲ್ಲಿ ಸಂಭವಿಸಿದೆ. 35 ವರ್ಷದ ವ್ಯಕ್ತಿಯನ್ನು ಇರಿದು ಕೊಲೆ ಮಾಡಲಾಗಿದ್ದು ಕೊಲೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣದ ಆರೋಪಿಗಳಿಗಾಗಿ ಪೊಲಿಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸಂದೀಪ್ ರಾಥೋಡ್ ಎಂಬಾತ ತನ್ನ ಸ್ನೇಹಿತ ವಿಕಾಸ್ ಹಾಗೂ ಯುವತಿಯೊಂದಿಗೆ ಬೈಕ್ನಲ್ಲಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಒಂದು ಸಣ್ಣ ಅಪಘಾತ ಸಂಭವಿಸಿದ್ದು ಬೈಕ್ ಸವಾರರ ನಡುವೆ ವಾಗ್ವಾದ ಉಂಟಾಗಿತ್ತು.
Also Read: Kerala: ಅಯ್ಯೋ ಇದೆಂಥಾ ಅವಸ್ಥೆ..! ಆಕಳಿಕೆ ತೆಗೆಯಲೆಂದು ಬಾಯಿ ತೆರೆದವನ ಬಾಯಿ ಮುಚ್ಚಿಸಲು ವೈದ್ಯರೇ ಬರಬೇಕಾಯ್ತು..!
ತನ್ನನ್ನೇ ಹಿಂಬಾಲಿಸಿ ಬರುತ್ತಿದ್ದ ಯುವಕನ ಮೇಲೆ ಸಂದೀಪ್ ಹಲ್ಲೆ ನಡೆಸಿದ್ದ. ಹಲ್ಲೆ ಬಳಿಕ ಯುವಕ ಪರಾರಿಯಾಗಿದ್ದ, ಆದರೆ ಮೂರ್ನಾಲ್ಕು ದಿನ ಬಿಟ್ಟು ಆತ ತನ್ನ ಸಹಚರರೊಂದಿಗೆ ಸಂದೀಪ್ ಎದುರು ಪ್ರತ್ಯಕ್ಷನಾಗಿ ಹಲ್ಲೆ ನಡೆಸಿದ್ದ. ಮಾರಣಾಂತಿಕ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಸಂದೀಪ್ನನ್ನು ಆಸ್ಪತ್ರೆಗೆ ಸೇರಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
ಕೃತ್ಯ ನಡೆದ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ರಾಥೋಡ್ನನ್ನು ಸುತ್ತುವರಿದ ಯುವಕರ ತಂಡ ಕುತ್ತಿಗೆ, ಬೆನ್ನು ಹಾಗೂ ಹೊಟ್ಟೆಗೆ ಅನೇಕ ಬಾರಿ ಇರಿದಿದ್ದರು. ಸಂದೀಪ್ ರಸ್ತೆಯಲ್ಲೇ ಕುಸಿದು ಬಿದ್ದರೆ, ಸಂದೀಪ್ ಸ್ನೇಹಿತ ಸ್ಥಳದಿಂದ ಕಾಲ್ಕಿತ್ತಿದ್ದ.
Also Read: ಐಎನ್ಎಸ್ ವಿಕ್ರಾಂತ್ ಪಾಕಿಸ್ತಾನಿಗಳ ನಿದ್ದೆಗೆಡಿಸಿದೆ, ಭಾರತದೆದುರು ಮಂಡಿಯೂರಿದೆ : ಪ್ರಧಾನಿ ಮೋದಿ
ಬಳಿಕ ಆರೋಪಿಗಳು ಎರಡು ಬೈಕ್ಗಳಲ್ಲಿ ಪರಾರಿಯಾಗಿದ್ದರು. ಆದರೆ ಸಂದೀಪ್ ಇನ್ನೂ ಜೀವಂತವಾಗಿದ್ದಾನೆಯೇ ಎಂದು ಮತ್ತೊಮ್ಮೆ ಪರಿಶೀಲಿಸಲು ಅದೇ ಸ್ಥಳಕ್ಕೆ ಮತ್ತೊಮ್ಮೆ ಹಿಂತಿರುಗಿ ಬಳಿಕ ಎಸ್ಕೇಪ್ ಆಗಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿ ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಬಿಎಸ್ ತೋಮರ್, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮರಾ ದೃಶ್ಯಗಳನ್ನಾಧರಿಸಿ ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.



