ರೈಲಿನಲ್ಲಿ ಸೀಟು ಸಿಗದಕ್ಕೆ ಕೋಪ, ಹುಸಿಬಾಂಬ್​ ಕರೆ ಮಾಡಿ ಸಿಕ್ಕಿಹಾಕಿಕೊಂಡ ಸಹೋದರರು

Fake bomb call: ರೈಲಿನ ಜನರಲ್​ ವಿಭಾಗದಲ್ಲಿ ಸೀಟು ಸಿಗದ ಕಾರಣ ಕೋಪಗೊಂಡಿದ್ದ ಇಬ್ಬರು ಸಹೋದರರು ಸಹಪ್ರಯಾಣಿಕರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದಾದ ಬಳಿಕ ಸಹೋದರರಿಬ್ಬರು ಎಂತಾ ಪ್ಲಾನ್​ ಮಾಡಿದ್ದಾರೆ 40ಕ್ಕೂ ಅಧಿಕ ನಿಮಿಷಗಳ ಕಾಲ ರೈಲೇ ನಿಲ್ಲುವಂತೆ ಮಾಡಿದ್ದಾರೆ.

ಆದರೆ ಇಷ್ಟು ಮಾಡಿ ಕೂಡ ರೈಲಿನಲ್ಲಿ ಪ್ರಯಾಣಿಸುವ ಭಾಗ್ಯ ಅವರದ್ದಾಗಲಿಲ್ಲ. ಸದ್ಯ ಇಬ್ಬರು ಸಹೋದರರು ತಾವು ಮಾಡಿದ ಕುಕೃತ್ಯಕ್ಕೆ ಜೈಲಿನಲ್ಲಿ ಸ್ಥಾನ ಪಡೆಯುವಂತಾಗಿದೆ.

ಲುಧಿಯಾನದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ದೀಪಕ್ ಚೌಹಾಣ್ ಮತ್ತು ನೋಯ್ಡಾದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸಹೋದರ ಅಂಕಿತ್ ಗುರುವಾರ ರಾತ್ರಿ ದೆಹಲಿಯಲ್ಲಿ ಅಮೃತಸರ ಮತ್ತು ಬಿಹಾರದ ಕತಿಹಾರ್ ನಡುವೆ ಚಲಿಸುವ ಅಮ್ರಪಾಲಿ ಎಕ್ಸ್‌ಪ್ರೆಸ್ ಹತ್ತಿದ್ದರು.

ಆದರೆ ಈ ರೈಲಿನಲ್ಲಿ ಅವರಿಗೆ ಕೂರಲು ಆಸನ ದೊರಕಿರಲಿಲ್ಲ, ರೈಲು ಉತ್ತರ ಪ್ರದೇಶದ ಇಟವಾ ತಲುಪುವ ವೇಳೆಗೆ ಸಹ ಪ್ರಯಾಣಿಕರೊಂದಿಗೆ ವಾದಕ್ಕೆ ಇಳಿದಿದ್ದಾರೆ. ಇದಾದ ಬಳಿಕ ಹೇಗಾದರೂ ಮಾಡಿ ಸೀಟು ಪಡೆಯಬೇಕೆಂಬ ಉದ್ದೇಶದಿಂದ ಪೊಲೀಸ್​ ನಿಯಂತ್ರಣ ಕೊಠಡಿಗೆ ಕರೆ ಮಾಡಿ ರೈಲಿನಲ್ಲಿ ಬಾಂಬ್ ್ಇಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ.

Also Read: ಆರ್ಥಿಕವಾಗಿ ಸ್ವತಂತ್ರರಾಗಿರುವ ಪತ್ನಿಗೆ ವಿಚ್ಛೇದನದ ಬಳಿಕ ಜೀವನಾಂಶ ಕೇಳುವ ಹಕ್ಕಿಲ್ಲ : ಹೈಕೋರ್ಟ್ ಮಹತ್ವದ ಆದೇಶ

ಹುಸಿ ಬಾಂಬ್​ ಕರೆ ಬರುತ್ತಿದ್ದಂತೆಯೇ ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳ ಸೇರಿದಂತೆ ಹಲವಾರು ತಂಡಗಳು ಕಾನ್ಪುರ ಸೆಂಟ್ರಲ್ ನಿಲ್ದಾಣವನ್ನು ತಲುಪಿವೆ. ಕೂಡಲೇ ರೈಲನ್ನು ನಿಲ್ಲಿಸಲಾಯಿತು. ಹಾಗೂ ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಯುವಂತೆ ಸೂಚಿಸಲಾಯಿತು.

ಸುಮಾರು 40 ನಿಮಿಷಗಳ ಕಾಲ ಸಂಪೂರ್ಣ ರೈಲನ್ನು ಪರಿಶೀಲಿಸಿ ಬಳಿಕ ಇದು ಹುಸಿ ಬಾಂಬ್​ ಕರೆ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ರೈಲಿನ ಸಂಚಾರ ಮುಂದುವರಿಸಲು ಅನುವು ಮಾಡಿಕೊಡಲಾಯಿತು.

ತಂಡೋಪತಂಡವಾಗಿ ಪೊಲೀಸರು ರೈಲನ್ನು ಪರಿಶೀಲಿಸಲು ಆರಂಭಿಸಿದ ಬಳಿಕ ಭಯಗೊಂಡ ದೀಪಕ್​ ಹಾಗೂ ಅಂಕಿತ್​ ತಮ್ಮ ಫೋನ್​ಗಳನ್ನು ಸ್ವಿಚ್​ ಆಫ್ ಮಾಡಿಕೊಂಡಿದ್ದಾರೆ. ರೈಲು ಹತ್ತದೇ ಕಾನ್ಪುರದ ಫೇಯ್ತಫುಲ್​ ಗಂಜ್​ನಲ್ಲಿ ಅಡಗಿಕೊಳ್ಳಲು ನಿರ್ಧರಿಸಿದ್ದಾರೆ.

Also Read: 23ನೇ ವರ್ಷದಲ್ಲಿ ಎಸಗಿದ ಅಪರಾಧಕ್ಕೆ 81ನೇ ಪ್ರಾಯದಲ್ಲಿ ಜಾಮೀನು ಪಡೆದ ವ್ಯಕ್ತಿ..!

ಪೊಲೀಸರು ಬಳಿಕ ತನಿಖೆ ಆರಂಭಿಸಿದ್ದು ಮೊಬೈಲ್​ ಫೋನ್​ ಪತ್ತೆ ಮಾಡಲು ಆರಂಭಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸುಮಾರಿಗೆ ಸಹೋದರರು ತಮ್ಮ ಮೊಬೈಲ್​ ಫೋನ್​ ಆನ್​ ಮಾಡಿದ್ದು ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಬಂಧಿತ ಸಹೋದರರ ಮೇಲೆ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ, ಆದರೆ, ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಭಯೋತ್ಪಾದನಾ ನಿಗ್ರಹ ದಳ ಕೂಡ ಅವರನ್ನು ವಿಚಾರಣೆ ನಡೆಸುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತರಾದ ಆಕಾಂಕ್ಷಾ ಪಾಂಡೆ ಮಾಹಿತಿ ನೀಡಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories