ಪೊಲೀಸ್​ ಅಧಿಕಾರಿಯಿಂದ ಸರ್ಕಾರಿ ವೈದ್ಯೆ ಮೇಲೆ ನಿರಂತರ ಅತ್ಯಾ*ಚಾರ : ಅಂಗೈಯಲ್ಲಿ ಡೆತ್​ ನೋಟ್​ ಬರೆದು ಸಂತ್ರಸ್ತೆ ಸಾವು

Government doctor death: ನಿರಂತರ ಅತ್ಯಾಚಾರ ಹಾಗೂ ಮಾನಸಿಕ ಕಿರುಕುಳವನ್ನು ಸಹಿಸಲು ಸಾಧ್ಯವಾಗದೇ ಮಹಿಳಾ ವೈದ್ಯೆಯೊಬ್ಬರು ಹೋಟೆಲ್​ ಕೋಣೆಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಐದು ತಿಂಗಳಿನಿಂದ ಪೊಲೀಸ್ ಅಧಿಕಾರಿಯೊಬ್ಬರು ನನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾರೆ ಹಾಗೂ ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ತಮ್ಮ ಕೈ ಮೇಲೆ ಡೆತ್​ ನೋಟ್​ ಬರೆದಿದ್ದು ವೈದ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ವೈದ್ಯೆ ಈಕೆ ಎಂದು ತಿಳಿದುಬಂದಿದೆ.

ತಮ್ಮ ಕೈ ಮೇಲೆ ಬರೆದುಕೊಂಡಿರುವ ಡೆತ್​ ನೋಟ್​ನಲ್ಲಿ ವೈದ್ಯೆಯು ಪೊಲೀಸ್​ ಅಧಿಕಾರಿ ಗೋಪಾಲ್​ ಬದನೆ ಎಂಬವರೇ ತನ್ನ ಸಾವಿಗೆ ಕಾರಣ ಎಂದು ಬರೆದಿದ್ದಾರೆ. ಐದು ತಿಂಗಳ ಅವಧಿಯಲ್ಲಿ ಈತ ಹಲವು ಬಾರಿ ನನ್ನ ಮೇಲೆ ಅತ್ಯಾಚಾರಗೈದಿದ್ದಾನೆ.

ಈಕೆಯು ಬರೆದಿರುವ ಡೆತ್​ ನೋಟ್​ ಪ್ರಶಾಂತ್​ ಬಂಕರ್​ ಎಂಬ ಮತ್ತೊಬ್ಬ ವ್ಯಕ್ತಿಯ ಹೆಸರೂ ಇದ್ದು ಈತ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಮೃತ ವೈದ್ಯೆ ಉಲ್ಲೇಖಿಸಿದ್ದಾರೆ. ಪ್ರಶಾಂತ್​ ಬಂಕರ್​ ವೈದ್ಯೆ ವಾಸವಿದ್ದ ಬಾಡಿಗೆ ಮನೆಯ ಮಾಲೀಕನ ಪುತ್ರ ಎಂದು ತಿಳಿದುಬಂದಿದೆ. 28 ವರ್ಷದ ಮೃತ ವೈದ್ಯೆ ಬೀಡ್ ಜಿಲ್ಲೆಯವರಾಗಿದ್ದು, ಫಾಲ್ಟನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದರು.

Also Read: ಶಾಲಾ ಸಮವಸ್ತ್ರದಲ್ಲೇ ಸಾರಾಯಿ ಅಂಗಡಿಗೆ ತೆರಳಿ ಮದ್ಯ ಖರೀದಿಸಿದ ವಿದ್ಯಾರ್ಥಿನಿಯರು..!

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವೈದ್ಯೆಯ ಕೈಯಲ್ಲಿ ಬರೆದುಕೊಂಡಿರುವ ಆತ್ಮಹತ್ಯಾ ಪತ್ರದ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯ ತನಿಖೆ ಆರಂಭಿಸಿದೆ. ಈ ಎಲ್ಲದರ ನಡುವೆ ಆರೋಪಿ ಪೊಲೀಸ್​ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹಾಗೂ ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ವಿಚಾರದ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅವರಿಬ್ಬರ ವಿರುದ್ಧ ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪಿಎಸ್​ಐ ಆಗಿದ್ದು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಇಬ್ಬರೂ ಆರೋಪಿಗಳ ಪತ್ತೆಗಾಗಿ ನಮ್ಮ ತಂಡ ಶೋಧ ಕಾರ್ಯ ಚುರುಕುಗೊಳಿಸಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಿಎಂ ದೇವೇಂದ್ರ ಫಡ್ನವಿಸ್​, ಸತಾರಾ ಪೊಲೀಸ್​ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ ಮೃತ ವೈದ್ಯೆಯ ಡೆತ್​ನೋಟ್​ನಲ್ಲಿದ್ದ ಅಧಿಕಾರಿಯನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸುವಂತೆ ಸೂಚನೆ ನೀಡಿದ್ದರು.

ಆದರೆ ಸಂತ್ರಸ್ತೆ ಕುಟುಂಬಸ್ಥರು ಡೆತ್​ನೋಟ್​ನಲ್ಲಿರುವ ವ್ಯಕ್ತಿಗಳು ಅಪರಾಧ ನಡೆಸಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಆಸ್ಪತ್ರೆಯಲ್ಲಿ ತಪ್ಪು ಮರಣೋತ್ತರ ವರದಿಗಳನ್ನು ಸಿದ್ಧಪಡಿಸುವಂತೆ ಆಕೆಯ ಮೇಲೆ ಒತ್ತಡ ಹೇರಲಾಗುತ್ತಿತ್ತು.

Also Read: ಜಾತ್ರೆ ಮುಗಿಸಿ ಬರುತ್ತಿದ್ದ ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾ*ಚಾರ : ಆರೋಪಿಗಳ ಬಂಧನ

ಪೊಲೀಸರು ಹಾಗೂ ರಾಜಕೀಯ ಒತ್ತಡ ಆಕೆಯ ಮೇಲಿರುತ್ತಿತ್ತು. ಈ ಬಗ್ಗೆ ಆಕೆ ದೂರು ನೀಡಲು ಪ್ರಯತ್ನಿಸಿದ್ದಳು. ಆಕೆ ಪ್ರತಿಭಾನ್ವಿತ ವೈದ್ಯೆ. ನಾವು ಬಾಲ್ಯದಿಂದಲೂ ಆಕೆಯನ್ನು ನೋಡಿದ್ದೇವೆ. ಅವಳ ಕಲಿಕೆಗೆ ಬೆಂಬಲ ನೀಡಿದ್ದೇವೆ.

ಆದರೆ ಆಕೆಗೆ ಕೆಲಸದಲ್ಲಿ ತುಂಬಾ ಒತ್ತಡವಿತ್ತು. ಇದೇ ಕಾರಣಕ್ಕೆ ಆಕೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ. ನಮಗೆ ನ್ಯಾಯ ಸಿಗಬೇಕು. ಹಾಗೂ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ಎರಡು ದಿನಗಳ ಹಿಂದೆಯಷ್ಟೇ ತನಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳವಿದೆ ಎಂದು ಆಕೆ ಹೇಳಿಕೊಂಡಿದ್ದಳು. ಪೊಲೀಸರು ಈ ಆಯಾಮದಲ್ಲಿಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories