ಎಲ್ಪಿಜಿ ಬದಲು ಎಥೆನಾಲ್! ಎಲ್ಪಿಜಿ ಅವಲಂಬನೆಯಿಂದ ಸಿಗಲಿದೆ ಮುಕ್ತಿ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಸೃಷ್ಠಿಯಾದ ಎಲ್ಪಿಜಿ ಅಭಾವ ಹಾಗೂ ಸಿಲಿಂಡರ್ ದರ ಏರಿಕೆಯಿಂದ ಮಧ್ಯಮ ವರ್ಗದ ಜನತೆಯ ಮೇಲೆ ಹೆಚ್ಚುತ್ತಿರುವ ಒತ್ತಡಗಳಿಗೆ ಶೀಘ್ರದಲ್ಲೇ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ. ಶೀಘ್ರದಲ್ಲಿಯೇ ಅಡುಗೆ ಅನಿಲಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ಹಾಗೂ ಅಗ್ಗದ ದರದಲ್ಲಿ ದೊರೆಯುವ ಎಥೆನಾಲ್ಗಳ ಬಳಕೆಗೆ ಚಾಲನೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಡುಗೆ ಮನೆಗಳಲ್ಲಿ ಎಲ್ಪಿಜಿ ಸಿಲಿಂಡರ್ಗಳಿಗೆ ಮುಕ್ತಿ ನೀಡಿ ಎಥೆನಾಲ್ಗಳ ಬಳಕೆಗೆ ಅವಕಾಶ ಕಲ್ಪಿಸುವ ಬಗ್ಗೆ ಯೋಚಿಸುತ್ತಿದೆ. ಇದು ಸಾಮಾನ್ಯ ಸ್ಟೌಗಳಂತೆಯೇ ಇರಲಿದ್ದು, ಎಲ್ಪಿಜಿ ಬದಲು ಎಥೆನಾಲ್ ಇಂಧನವನ್ನು ಬಳಕೆ ಮಾಡಿಕೊಳ್ಳಲಿದೆ. ಅಲ್ಲದೇ ಇದು ಪರಿಸರ ಸ್ನೇಹಿ ಇಂಧನ ಕೂಡ ಆಗಿದೆ.
ಎಲ್ಪಿಜಿ ವಿದೇಶಗಳಿಂದ ಆಮುದು ಮಾಡಿಕೊಳ್ಳುವ ಇಂಧನವಾಗಿದ್ದು, ಇದರ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿದೆ. ಆದರೆ ಎಥೆನಾಲ್ಗಳನ್ನು ಕಬ್ಬು ಹಾಗೂ ಧಾನ್ಯಗಳನ್ನೇ ಬಳಸಿ ತಯಾರಿಸಬಹುದಾಗಿದೆ. ಇದರಿಂದ ದೇಶದ ರೈತರ ಆದಾಯವೂ ಹೆಚ್ಚಲಿದೆ. ಹಾಗೂ ಮಧ್ಯಮ ವರ್ಗದ ಜನತೆಗೆ ಪದೇ ಪದೇ ಸಿಲಿಂಡರ್ ಬೆಲೆ ಏರಿಕೆಯ ಬಿಸಿ ತಟ್ಟುವುದೂ ತಪ್ಪಲಿದೆ.
ಇದನ್ನೂ ಓದಿ: ಬಿಸಿಲಿನ ಬೇಗೆಗೆ ತತ್ತರಿಸಿದ ಕರಾವಳಿ ಕರ್ನಾಟಕ : ಹವಾಮಾನ ಇಲಾಖೆಯಿಂದ ಉಷ್ಣ ಅಲೆ ಎಚ್ಚರಿಕೆ
ಇದೊಂದು ದ್ರವರೂಪದ ಅನಿಲವಾಗಿದ್ದು, ಇಲ್ಲಿ ಎಲ್ಪಿಜಿ ಸಿಲಿಂಡರ್ಗಳಂತೆ ಸ್ಫೋಟದ ಅಪಾಯ ಇರುವುದಿಲ್ಲ. ಬೆಂಕಿ ಉರಿಯುವ ಸಂದರ್ಭದಲ್ಲಿ ಪರಿಸರಕ್ಕೆ ಕಾರ್ಬನ್ ಡೈಆಕ್ಸೈಡ್ನ್ನು ಹೊರಸೂಸುವುದಿಲ್ಲ. ಹೀಗಾಗಿ ಪರಿಸರಕ್ಕೆ ಹಾಗೂ ಜನತೆಗೆ ಇದರಿಂದ ಹೆಚ್ಚು ಸುರಕ್ಷತೆ ದೊರೆಯಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಯಾವಾಗ ಈ ಸಿಹಿ ಸುದ್ದು ನೀಡುತ್ತೆ ಅಂತಾ ದೇಶದ ಜನತೆಯೂ ಕಾಯುತ್ತಿದ್ದಾರೆ.



