Massive blast in Srinagar: ದೆಹಲಿ ಸ್ಫೋಟದ ಬೆನ್ನಲ್ಲೇ ಶ್ರೀನಗರ ಪೊಲೀಸ್​ ಠಾಣೆ ಆವರಣದಲ್ಲಿ ಭಾರೀ ಸ್ಫೋಟ : 6 ಮಂದಿ ಪೊಲೀಸರು ದುರ್ಮರಣ

Massive blast in Srinagar : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ನೌಗಾಮ್​ ಪೊಲೀಸ್​ ಠಾಣೆ ಆವರಣದಲ್ಲಿ ಭಾರೀ ಸ್ಪೋಟ ಸಂಭವಿಸಿ 6 ಮಂದಿ ಪೊಲೀಸರು ಮೃತಪಟ್ಟ ದಾರುಣ ಘಟನೆಯು ತಡರಾತ್ರಿ ಸಂಭವಿಸಿದೆ. ಈ ದುರಂತದಲ್ಲಿ 27ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಹರಿಯಾಣದ(Haryana) ಫರಿದಾಬಾದ್​ನಲ್ಲಿ ಉಗ್ರರಿಂದ ವಶಪಡಿಸಿಕೊಳ್ಳಲಾಗಿದ್ದ ಸ್ಫೋಟಕಗಳನ್ನು ನೌಗಾಮ್​ ಪೊಲೀಸ್​ ಠಾಣೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆದರೆ ಈ ಸ್ಫೋಟಕಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ .

ನೌಗಾಮ್​ ಪೊಲೀಸ್​ ಠಾಣೆಯಿಂದ ಬೆಂಕಿ ಕೆನ್ನಾಲಿಗೆ ಹೊರ ಚಾಚುತ್ತಿರುವ ಸಿಸಿ ಟಿವಿವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ದುರಂತದ ತೀವ್ರತೆಯನ್ನು ತೋರಿಸುವಂತಿದೆ.

Also Read: Delhi blast : ಬಾಬ್ರಿ ಮಸೀದಿ ದ್ವಂಸಕ್ಕೆ ಪ್ರತೀಕಾರವೇ ದೆಹಲಿ ಸ್ಪೋಟ : 32 ಕಡೆ ಸ್ಫೋಟಕ್ಕೆ ಹುನ್ನಾರ..!

ಫರಿದಾಬಾದ್​ನಲ್ಲಿರುವ ಡಾ. ಮುಜಮ್ಮಿಲ್​ ಗನೈ ಎಂಬಾತನ ನಿವಾಸದಿಂದ ಜಮ್ಮು ಕಾಶ್ಮೀರ ಪೊಲೀಸರು ಬರೋಬ್ಬರಿ 350 ಕೆಜಿ ತೂಕದ ಸ್ಫೋಟಕಗಳನ್ನು ವಶಕ್ಕೆ ಪಡೆದು ನೌಗಾಮ್​ ಠಾಣೆಯಲ್ಲಿ ಇರಿಸಿದ್ದರು. ನಿನ್ನೆ ರಾತ್ರಿ 11:30ರ ಸುಮಾರಿಗೆ ಠಾಣೆಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ.

ಈ ದುರಂತದಲ್ಲಿ ಮಡಿದವರಲ್ಲಿ ಅನೇಕರು ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಎಂದು ತಿಳಿದುಬಂದಿದೆ. ದೆಹಲಿ ಕಾರು ಸ್ಪೋಟದಲ್ಲಿ ಬಳಕೆ ಮಾಡಿದ ಅಮೋನಿಯಂ ನೈಟ್ರೇಟ್​ಗಳನ್ನೇ ವಶಪಡಿಸಿಕೊಂಡು ಠಾಣೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು.

Also Read: ಬಿಹಾರ ಚುನಾವಣೆ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು : ಕ್ಲೀನ್‌ ಸ್ವೀಪ್‌ ಮಾಡ್ತಾರಾ ಮೋದಿ

ಇದರ ಪರೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಈ ದುರ್ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆ ಯಾವ ಮಟ್ಟಿಗೆ ಇತ್ತೆಂದರೆ ಕೆಲ ಕಾಲ ಅಲ್ಲಿನ ಭೂಮಿಯೇ ಕಂಪಿಸಿತ್ತು ಎಂದು ತಿಳಿದುಬಂದಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories