ರೈತರಿಗೆ ಕೇಂದ್ರದ ಗುಡ್ ನ್ಯೂಸ್! ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ
ಮುಂಗಾರು ಹಂಗಾಮಿನ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಹೆಚ್ಚಿಸಿದ್ದು, ಹತ್ತಿ, ತೊಗರಿ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳ ರೈತರಿಗೆ ಹೊಸ ನಿರೀಕ್ಷೆ ಮೂಡಿಸಿದೆ.

- 14 ಖಾರಿಫ್ ಬೆಳೆಗಳಿಗೆ ಹೊಸ MSP ಘೋಷಣೆ
- ತೊಗರಿ ಮತ್ತು ಸೂರ್ಯಕಾಂತಿ ಬೆಳೆಗಾರರಿಗೆ ಹೆಚ್ಚಿದ ಲಾಭ
- 2.6 ಲಕ್ಷ ಕೋಟಿ ರೂಪಾಯಿ ರೈತರಿಗೆ ಪಾವತಿ ಸಾಧ್ಯತೆ
ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ಪ್ರಕಟವಾಗಿದೆ. 2026-27ರ ಮಾರುಕಟ್ಟೆ ಹಂಗಾಮಿಗಾಗಿ 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸೂರ್ಯಕಾಂತಿ ಬೆಳೆ ಬೆಳೆಸುವ ರೈತರಿಗೆ ಈ ಬಾರಿ ವಿಶೇಷ ಲಾಭ ಸಿಗಲಿದೆ. ಸೂರ್ಯಕಾಂತಿ ಬೀಜದ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ 622 ರೂ. ಏರಿಕೆ ಮಾಡಲಾಗಿದೆ. ಹತ್ತಿಗೆ 557 ರೂ., ಹುಚ್ಚೆಳ್ಳಿಗೆ 515 ರೂ. ಹಾಗೂ ಎಳ್ಳಿಗೆ 500 ರೂ. ಹೆಚ್ಚುವರಿ MSP ಘೋಷಿಸಲಾಗಿದೆ.
ಇದಕ್ಕೆ ಜೊತೆಗೆ ಗ್ರೇಡ್ ಎ ಭತ್ತಕ್ಕೆ 2,461 ರೂ., ಹೈಬ್ರಿಡ್ ಜೋಳಕ್ಕೆ 4,023 ರೂ., ಸಜ್ಜೆಗೆ 2,900 ರೂ. ಮತ್ತು ತೊಗರಿ ಬೇಳೆಗೆ 8,450 ರೂ. ಬೆಂಬಲ ಬೆಲೆ ನಿಗದಿಯಾಗಿದೆ.
ಸರ್ಕಾರದ ಲೆಕ್ಕಾಚಾರ ಪ್ರಕಾರ ಈ ಮುಂಗಾರು ಹಂಗಾಮಿನಲ್ಲಿ 824 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಬೆಳೆಗಳನ್ನು ಖರೀದಿಸುವ ನಿರೀಕ್ಷೆಯಿದೆ. ಇದರಿಂದ ರೈತರಿಗೆ ಒಟ್ಟು 2.6 ಲಕ್ಷ ಕೋಟಿ ರೂಪಾಯಿ ಹಣ ಪಾವತಿಯಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಬೆಳೆ ಬೆಲೆ ಏರಿಕೆಯಿಂದ ರೈತರ ಆದಾಯ ಹೆಚ್ಚಾಗುವ ಜೊತೆಗೆ ಕೃಷಿ ಚಟುವಟಿಕೆಗೆ ಉತ್ತೇಜನ ಸಿಗಲಿದೆ ಎಂಬ ಅಭಿಪ್ರಾಯ ಕೃಷಿ ವಲಯದಲ್ಲಿ ಕೇಳಿಬರುತ್ತಿದೆ.



