The risk of heart attack: ಯುವಕರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಅಪಾಯ : ಕೊನೆಗೂ ಹೊರಬಿತ್ತು ನಿಜವಾದ ಕಾರಣ

The risk of heart attack: ದಕ್ಷಿಣ ಭಾರತೀಯರಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತಂತೆ ಇದೀಗ ಹೊಸ ಸಂಶೋಧನಾ ವರದಿಯೊಂದು ಬಿಡುಗಡೆಯಾಗಿದೆ. ಬೆಂಗಳೂರಿನ ಇನ್​ಸ್ಟಿಟ್ಯೂಟ್​ ಫಾರ್​ ಸ್ಟೆಮ್​ಸೆಲ್​ ಸೈನ್ಸ್​ & ರೀಜಿನೆರೇಟಿವ್​ ಮೆಡಿಸಿನ್​ ಸಂಶೋಧಕರು ದಕ್ಷಿಣ ಭಾರತೀಯರ ವಂಶವಾಹಿಯಲ್ಲಿ ದೋಷ ಪತ್ತೆ ಹಚ್ಚಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಯುವಕರೇ ಹೃದಯಾಘಾತದಿಂದ ಬಲಿಯಾಗುತ್ತಿರುವುದರ ಹಿಂದೆ ಕೊರೋನಾ(Corona) ಲಸಿಕೆ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಬೆಂಗಳೂರು ಮೂಲದ ಸಂಶೋಧಕರು ನಡೆಸಿದ ಸಮೀಕ್ಷೆಯಲ್ಲಿ ಹೃದಯಾಘಾತದ ಅಪಾಯದ ಹಿಂದಿನ ನಿಜವಾದ ಕಾರಣ ಹೊರಬಿದ್ದಿದೆ.

ದಕ್ಷಿಣ ಭಾರತೀಯರ ವಂಶವಾಹಿಗಳಲ್ಲಿ ಉಂಟಾದ ಬದಲಾವಣೆಯಿಂದಾಗಿ ಹೈಪರ್ಟ್ರೋಫಿಕ್ ಕಾರ್ಡಿಯೋಮಯೋಪತಿ ಎಂಬ ಗಂಭೀರ ಕಾಯಿಲೆ ಬಹುತೇಕರನ್ನು ಕಾಡುತ್ತಿದೆ. ಈ ಕಾಯಿಲೆ ಹೊಂದಿರುವವರ ಹೃದಯದ ಸ್ನಾಯುಗಳು ದಪ್ಪವಾಗಿರುತ್ತದೆ. ಇದರಿಂದ ದಿಢೀರ್ ಹೃದಯಾಘಾತ ಸಂಭವಿಸುವ ಅಪಾಯ ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ.

Also Read: Ditwa cyclone: ತಮಿಳುನಾಡಿನಲ್ಲಿ ದಿತ್ವಾ ಚಂಡಮಾರುತದ ಅಬ್ಬರ : ಕರ್ನಾಟಕದಲ್ಲೂ ಇರಲಿದೆ ಮೂರು ದಿನ ಮಳೆ

ನೀವು HCM ಕಾಯಿಲೆ ಹೊಂದಿದ್ದೀರೋ ಇಲ್ಲವೋ ಎಂಬುದನ್ನು ಪತ್ತೆ ಮಾಡಲು ಜೆನೆಟಿಕ್​ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಆಗ ನಿಮ್ಮ ವಂಶವಾಹಿಯಲ್ಲಿ ಉಂಟಾಗಿರುವ ಈ ಬದಲಾವಣೆಯನ್ನು ಗಮನಿಸಲು ಸಾಧ್ಯವಾಗಿದೆ. ಶೀಘ್ರದಲ್ಲಿಯೇ ಈ ಗಂಭೀರ ಸಮಸ್ಯೆಯನ್ನು ಪತ್ತೆ ಮಾಡಲು ಸೂಕ್ತ ಪರೀಕ್ಷಾ ವಿಧಾನ ಹಾಗೂ ಚಿಕಿತ್ಸಾ ಕ್ರಮಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಶೋಧಕರು ತಿಳಿಸಿದ್ದಾರೆ .

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories