ಸ್ವಂತ ಸೋದರಳಿಯನ ಜೊತೆ ಅಕ್ರಮ ಸಂಬಂಧ : ಮದುವೆ ನಿರಾಕರಿಸಿದ್ದಕ್ಕೆ ಪೊಲೀಸ್​ ಠಾಣೆಯಲ್ಲೇ ಎರಡು ಮಕ್ಕಳ ತಾಯಿಯ ಹೈ ಡ್ರಾಮಾ

Uttar Pradesh : ಸೋದರಳಿಯ ಹಾಗೂ ಅತ್ತೆಯ ನಡುವಿನ ಸಂಬಂಧವು ತಾಯಿ ಮಗುವಿನ ಸಂಬಂಧಕ್ಕೆ ಸಮ. ಆದರೆ ಈ ಮಾತಿಗೆ ಅಪವಾದ ಎಂಬಂತೆ ಸೋದರಳಿಯನ ಜೊತೆಯಲ್ಲಿಯೇ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಾಕೆ ಈ ಸಂಬಂಧ ಮುಂದುವರಿಸಲು ಆಕೆ ನಿರಾಕರಿಸಿದ ಕಾರಣ ಪೊಲೀಸ್​ ಠಾಣೆಯಲ್ಲಿಯೇ ಕೈ ಕೊಯ್ದುಕೊಂಡ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಸೀತಾಪುರದಲ್ಲಿ ಸಂಭವಿಸಿದೆ.

ದೆಹಲಿ ಮೂಲದ ಪೂಜಾ ಮಿಶ್ರಾ ಎಂಬಾಕೆ ಲಲಿತ್​ ಕುಮಾರ್ ಮಿಶ್ರಾ ಎಂಬವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಆರು ಹಾಗೂ ಏಳು ವರ್ಷ ಪ್ರಾಯದ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಪೂಜಾ ಮಿಶ್ರಾ ತನಗಿಂತ 15 ವರ್ಷಕ್ಕಿಂತ ಕಿರಿಯನಾದ ಸೋದರಳಿಯ ಅಲೋಕ್​ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ತನ್ನ ಪತ್ನಿ ಹಾಗೂ ಸೋದರಳಿಯನ ನಡುವೆ ಅಕ್ರಮ ಸಂಬಂಧ ಇರುವುದು ಲಲಿತ್​ ಗಮನಕ್ಕೆ ಬರುತ್ತಿದ್ದಂತೆಯೇ ಇವರ ಮನೆಯಲ್ಲಿಯೇ ವಾಸವಿದ್ದ ಅಲೋಕ್​ನನ್ನು ಬೇರೆಡೆಗೆ ಲಲಿತ್​ ಕಳುಹಿಸಿದ್ದರು.

ಇದರಿಂದ ಕೋಪಗೊಂಡ ಪೂಜಾ ತನ್ನ ಮಕ್ಕಳನ್ನೂ ಬಿಟ್ಟು ಬರೇಲಿಗೆ ತೆರಳಿದ್ದಾಳೆ. ಬರೇಲಿಯಲ್ಲಿ ಪೂಜಾ ಹಾಗೂ ಅಲೋಕ್​ ಒಟ್ಟಾಗಿ 7 ತಿಂಗಳು ಒಂದೇ ಮನೆಯಲ್ಲಿ ವಾಸಿಸಿದ್ದರು ಎನ್ನಲಾಗಿದೆ.

ಆದರೆ ಕ್ರಮೇಣವಾಗಿ ಪೂಜಾ ಮತ್ತು ಅಲೋಕ್​ ನಡುವೆ ಭಿನ್ನಾಭಿಪ್ರಾಯ ಮೂಡಲು ಆರಂಭಿಸಿದೆ. ಇದರಿಂದ ಅಲೋಕ್​ ತನ್ನ ಊರಿ ಸೀತಾಪುರಕ್ಕೆ ತೆರಳಿದ್ದಾನೆ. ಪೂಜಾ ಕೂಡ ಅಲೋಕ್​ ಜೊತೆಯೇ ಆಗಮಿಸಿದ್ದು ಮದುವೆಗೆ ಆಗ್ರಹಿಸಿದ್ದಾಳೆ.

ಇದನ್ನೂ ಓದಿ : ಸಾಲ ತೀರಿಸದ ಸಹೋದರರು, ಪತ್ನಿಗೂ ವಿಷವುಣಿಸಿ ತಾನೂ ಆತ್ಮ*ಹತ್ಯೆಗೆ ಶರಣಾದ ಅಣ್ಣ

ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೆ ಪೊಲೀಸ್​ ಠಾಣೆಯಲ್ಲಿ ಅಲೋಕ್​ ತನಗೆ ಈಕೆಯೊಂದಿಗೆ ಬಾಳಲು ಇಷ್ಟವಿಲ್ಲ ಎಂದು ಹೇಳಿದ್ದಾನೆ. ಅಲೋಕ್​ನೊಂದಿಗೆ ಮದುವೆಯ ಕನಸು ಕಂಡಿದ್ದ ಪೂಜಾಗೆ ಅಲೋಕ್​ನ ಈ ಮಾತನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಹೀಗಾಗಿ ಆಕೆ ಪೊಲೀಸ್​ ಠಾಣೆಯಲ್ಲಿಯೇ ಎಲ್ಲರ ಸಮ್ಮುಖದಲ್ಲಿ ಬ್ಲೇಡ್​ನಿಂದ ಕೈ ಕೊಯ್ದುಕೊಂಡಿದ್ದಾಳೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಗಾಯಗೊಂಡಿದ್ದ ಪೂಜಾಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ : ನಿಟ್ಟೆ ಅಭಿಷೇಕ್‌ ಆಚಾರ್ಯ ಹನಿಟ್ರ್ಯಾಪ್‌ ಪ್ರಕರಣ : ನರ್ಸ್‌ ನಿರೀಕ್ಷಾ ಅರೆಸ್ಟ್‌

ಆದರೆ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ಹೆಚ್ಚಿನ ಚಿಕಿತ್ಸಗೆಂದು ಲಕ್ನೋದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಕ್ರಮ ಸಂಬಂಧಕ್ಕಾಗಿ ಹೆತ್ತ ಮಕ್ಕಳು, ಕಟ್ಟಿಕೊಂಡ ಗಂಡನನ್ನೇ ತೊರೆದು ಬಂದಾಕೆ ಈಗ ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.

Uttar Pradesh Mother Of 2 Children Slits Wrist At Police Station As Nephew Ends Affair

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories