ಸೌದಿಯಲ್ಲಿ ಜಾರಿಯಾಯ್ತು ಉದ್ಯೋಗ ನೀತಿ : 15 ಲಕ್ಷ ಭಾರತೀಯರಿಗೆ ಎದುರಾಯ್ತು ಸಂಕಷ್ಟ

ಸೌದಿಅರೇಬಿಯಾ : ಕೊರೊನಾ ಹೆಮ್ಮಾರಿಯ ನಡುವಲ್ಲೇ ಲಕ್ಷಾಂತರ ಮಂದಿ ಅರಬ್ ರಾಷ್ಟ್ರಗಳಲ್ಲಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಆದ್ರೀಗ ಜಾರಿಗೆ ಬರುತ್ತಿರೋ ಸೌದೀಕರಣ ಯೋಜನೆ ಯಿಂದಾಗಿ 15 ಲಕ್ಷಕ್ಕೂ ಅಧಿಕ ಭಾರತೀಯರ ಉದ್ಯೋಗಕ್ಕೆ ಕುತ್ತು ಬಂದಿದ್ದು, ಕನ್ನಡಿಗರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕರ್ನಾಟಕ, ಕೇರಳ ಸೇರಿದಂತೆ ಭಾರತೀಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅರಬ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅದ್ರಲ್ಲೂ ಅತ್ಯಂತ ಶ್ರೀಮಂತ ದೇಶವೆಂಬ ಖ್ಯಾತಿಗೆ ಪಾತ್ರವಾಗಿರೋ ಸೌದಿ ಅರೇಬಿಯಾವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದರು. ಹೋಟೆಲ್, ಮಾಲ್, ರೆಸ್ಟೋರೆಂಟ್, ಹೈಪರ್ ಮಾರ್ಕೇಟ್ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಭಾರತೀಯರೇ ಹೆಚ್ಚು ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ.

ಸೌರಿ ಅರೇಬಿಯಾ ಒಂದರಲ್ಲೇ ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಭಾರತೀಯರಿದ್ದು, 4 ಲಕ್ಷಕ್ಕೂ ಅಧಿಕ ಕನ್ನಡಿಗರು ಬದುಕು ಕಟ್ಟಿಕೊಂಡಿದ್ದಾರೆ. ಕೊರೊನಾ ಕಾಲದಲ್ಲಿ ಒಂದಿಷ್ಟು ಮಂದಿ ಉದ್ಯೋಗ ತೊರೆದು ಸ್ವದೇಶಕ್ಕೆ ವಾಪಾಸಾಗಿದ್ದಾರೆ. ಆದರೆ ಕೊರೊನಾ ಸಂಕಷ್ಟದಲ್ಲಿಯೂ ಸೌದಿಯಲ್ಲಿ ಉಳಿದುಕೊಂಡಿದ್ದವರಿಗೆ ಇದೀಗ ಸೌದಿ ಅರೇಬಿಯಾ ಬಿಗ್ ಶಾಕ್ ಕೊಟ್ಟಿದ್ದು, ಲಕ್ಷಾಂತರ ಮಂದಿ ಭಾರತೀಯರು ಉದ್ಯೋಗವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಸೌದಿ ಅರೇಬಿಯಾದಲ್ಲಿ ಹೊಸ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಸ್ವದೇಶಿಕರಣಕ್ಕೆ ಸೌದಿ ಒತ್ತು ನೀಡುತ್ತಿರೋ ಹಿನ್ನೆಲೆಯಲ್ಲಿ ಭಾರತೀಯರೇ ಹೆಚ್ಚಾಗಿ ದುಡಿಯುತ್ತಿರುವ ಹೋಟೆಲ್, ಮಾಲ್ , ರೆಸ್ಟೋರೆಂಟ್ ಹಾಗೂ ಹೈಪರ್ ಮಾರ್ಕೇಟ್ ಮಾರ್ಕೇಟ್ ಗಳಲ್ಲಿ ಆರಂಭಿಕ ಹಂತದಲ್ಲಿ ಸೌದಿ ನಿವಾಸಿಗಳನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವಂತೆ ಸೌದಿ ಅರೇಬಿಯಾದ ಸಚಿವಾಲಯ ಸೂಚನೆಯನ್ನು ನೀಡಿದೆ.

ಸೌದಿ ನಿವಾಸಿಗಳಿಗೆ ಉದ್ಯೋಗದಲ್ಲಿ ಭದ್ರತೆಯನ್ನು ನೀಡುವುದರ ಜೊತೆಗೆ ಸರಕಾರಿ ಕಚೇರಿಗಳಲ್ಲಿನ ಉದ್ಯೋಗಕ್ಕೂ ಸ್ವದೇಶಿಗರನ್ನೇ ನೇಮಕ ಮಾಡಿಕೊಳ್ಳಲು ಪ್ಲ್ಯಾನ್ ರೂಪಿಸಿದೆ. ಪದವಿ ಹಾಗೂ ಸ್ನಾಕೋತ್ತರ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಈಗಾಗಲೇ ಮುಂದಾಗಿದೆ. ಅರಬ್ ರಾಷ್ಟ್ರಗಳು ಒಂದೊಂದಾಗಿ ಸ್ವದೇಶಿಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರೋ ಬೆನ್ನಲ್ಲೇ ಇದೀಗ ಸೌದಿ ಅರೇಬಿಯಾ ಕೂಡ ಅದೇ ಹಾದಿ ಹಿಡಿದಿರೋದು ಸೌದಿಯಲ್ಲಿ ನೆಲೆಸಿರುವ ಭಾರತೀಯರಿಗೆ ಆತಂಕವನ್ನು ತಂದೊಡ್ಡಿದೆ.

Comments are closed.