ಮನುಷ್ಯನ ದೇಹಕ್ಕೆ ಹಂದಿ ಕಿಡ್ನಿ ಯಶಸ್ವಿ ಕಸಿ : ವೈದ್ಯಲೋಕದ ಸಾಹಸಕ್ಕೆ ನಿಬ್ಬೆರಗಾಯ್ತು ಜಗತ್ತು

ವೈದ್ಯಕೀಯ ಲೋಕದಲ್ಲಿ ಇಲ್ಲಿವರೆಗೂ ಸಾಕಷ್ಟು ಸರ್ಜರಿಗಳು ಯಶಸ್ವಿಯಾಗಿದೆ. ಆದರೆ ಇಲ್ಲಿವರೆಗೂ ಪ್ರಾಣಿಗಳಿಂದ ತೆಗೆದ ದೇಹ ಭಾಗವನ್ನು ಮನುಷ್ಯರ ದೇಹಕ್ಕೆ ಸೇರಿಸುವಂತ ಸರ್ಜರಿ ನಡೆದಿರಲಿಲ್ಲಾ. ಆದರೆ ಈ 21 ನೇ ಶತಮಾನದಲ್ಲಿ ಮನುಷ್ಯ ಇದನ್ನು ಮಾಡಿದ್ದಾನೆ. ಹೌದು ಮನುಷ್ಯನಿಗೆ ಹಂದಿಯ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ವೈದ್ಯಕೀಯ ಲೋಕದಲ್ಲಿ ದೊಡ್ಡ ಸವಾಲು ಎಂಬಂತೆ ಅಮೆರಿಕದ ವೈದ್ಯರು ಮನುಷ್ಯನಿಗೆ ಹಂದಿಯ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಮನುಷ್ಯನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಒಂದು ವೇಳೆ ಈ ಶಸ್ತ್ರಚಿಕಿತ್ಸೆಯು ಸಂಪೂರ್ಣವಾಗಿ ಯಶಸ್ವಿಯಾದಲ್ಲಿ ಮೂತ್ರಪಿಂಡಗಳ ಕೊರತೆಗೆ ಬಹುದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: Saudi Arabia : ಸೌದಿ ಅನುಮೋದಿತ ಲಸಿಕೆ ಪಡೆಯದವರಿಗೆ 48 ಗಂಟೆಗಳ ಕ್ವಾರಂಟೈನ್‌

ನ್ಯೂಯಾರ್ಕ್​ ಸಿಟಿಯ ಎನ್​​ವೈಯು ಲ್ಯಾಂಗೋನ್ ಹೆಲ್ತ್​​​ನಲ್ಲಿ ಈ ಕಿಡ್ನಿ ಕಸಿ ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಹಂದಿಯ ಕಿಡ್ನಿಯನ್ನು ಬಳಸಲಾಗಿತ್ತು. ಪ್ರತಿರಕ್ಷಣಾ ವ್ಯವಸ್ಥೆಯು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ತಪ್ಪಿಸುವ ಸಲುವಾಗಿ ಅದರ ವಂಶವಾಹಿಗಳನ್ನು ತೆಗೆದು ಹಾಕಲಾಗಿತ್ತು.

ಅಂದಹಾಗೆ ಈ ಕಸಿ ಚಿಕಿತ್ಸೆಗೆ ಒಳಗಾದ ವ್ಯಕ್ತಿಯು ಮೆದುಳು ನಿಷ್ಕ್ರಿಯಗೊಂಡ ರೋಗಿಯಾಗಿದ್ದು ಕಿಡ್ನಿ ಸಂಬಂಧಿ ಸಮಸ್ಯೆಯನ್ನು ಹೊಂದಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಗೆ ವೆಂಟಿಲೇಟರ್​ನ್ನು ತೆಗೆಯುವ ಮುನ್ನ ಈ ಪ್ರಯೋಗವನ್ನು ಮಾಡಲು ಕುಟುಂಬಸ್ಥರು ಒಪ್ಪಿಗೆ ನೀಡಿದ್ದರು.

ಇದನ್ನೂ ಓದಿ: Decreasing life Corona : ಕೊರೊನಾದಿಂದ ಇಳಿಕೆಯಾಗುತ್ತೆ ಆಯುಷ್ಯ ! ವಿಶ್ವಕ್ಕೇ ಶಾಕ್ ಕೊಟ್ಟ ಆಕ್ಸ್ ಫರ್ಡ್ ವಿವಿ ವರದಿ

(Pig kidney successful transplant into man’s body: World stunned by medical adventure)

Comments are closed.