Surat : ಸೂರತ್‌ : ‘ಟೆಕ್ಸ್‌ಟೈಲ್ ಸಿಟಿ ಆಫ್ ಇಂಡಿಯಾ’ದ ಈ ಸ್ಥಳಗಳಿಗೆ ಒಮ್ಮೆಯಾದರೂ ಭೇಟಿ ಕೊಡಿ

ಗುಜರಾತ್‌ (Gujarat)ನ ಬಂದರು ನಗರ ‘ಸೂರತ್ (Surat)’. ದೇಶದ ಶ್ರೀಮಂತ ನಗರಗಳಲ್ಲಿ ಇದೂ ಒಂದು. “ಡೈಮಂಡ್ ಹಬ್ ಆಫ್ ದಿ ವರ್ಲ್ಡ್”, “ಟೆಕ್ಸ್‌ಟೈಲ್ ಸಿಟಿ ಆಫ್ ಇಂಡಿಯಾ”, “ಎಂಬ್ರಾಯಿಡರಿ ಕ್ಯಾಪಿಟಲ್ ಆಫ್ ಇಂಡಿಯಾ” ಮತ್ತು “ಸಿಟಿ ಆಫ್ ಫ್ಲೈಓವರ್ಸ್” ಎಂದೆಲ್ಲಾ ಪುರಸ್ಕಾರಗಳನ್ನು ಪಡೆದುಕೊಂಡ ನಗರ ಸೂರತ್‌. ಗುಜರಾತ್‌ ರಾಜ್ಯದ ಸೂರತ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಅನೇಕ ಗಲಭೆಗಳನ್ನು ನೋಡಿದ್ದರೂ ಸೂರತ್‌ ಮಧ್ಯಕಾಲದ ವಾಸ್ತುಶಿಲ್ಪದ ಚಾರ್ಮ್‌ ಅನ್ನು ಹಾಗೆ ಉಳಿಸಿಕೊಂಡಿದೆ. ಶ್ರೀಕೃಷ್ಣನು ಮಥುರಾದಿಂದ ದ್ವಾರಕೆಗೆ ಪ್ರಯಾಣಿಸುವಾಗ ಸೂರತ್‌ನಲ್ಲಿ ತಂಗಿದ್ದನು ಎಂಬ ಪ್ರತೀತಿ ಇದೆ. ಇದು ಜವಳಿ, ವಜ್ರ, ಫ್ಯಾಷನ್‌ ವಿನ್ಯಾಸ ಮತ್ತು ಕಲಾ ಉತ್ಸಾಹಿಗಳ ತವರು. ಇದರ ಜೊತೆಗೆ ಸೂರತ್‌ನಲ್ಲಿ ನೋಡಬಹುದಾದ ಅನೇಕ ಸುಂದರ ಸ್ಥಳಗಳಿವೆ. ಇಲ್ಲಿ ಹೇಳಿರುವ ಸ್ಥಳಗಳಿಗೆ ಖಂಡಿತ ಭೇಟಿ ಕೊಡಿ.

ಡಚ್‌ ಗಾರ್ಡನ್‌ :
ಸೂರತ್‌ನ ಡಚ್‌ ಗಾರ್ಡನ್‌ ಹಸಿರಿನ ಓಯಸಿಸ್‌ ಅನ್ನಬಹುದು. ಇಲ್ಲಿ ವಿವಿಧ ಜಾತಿಯ ಹೂವುಗಳನ್ನು ನೋಡಬಹುದು. ಅತಿ ಸುಂದರ ಉದ್ಯಾನ, ಕಾರಂಜಿಗಳು ಮತ್ತು ಹುಲ್ಲಿನ ಕಾರ್ಪೆಟ್‌ಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಸರ್ದಾರ ಪಟೇಲ್‌ ಮ್ಯೂಸಿಯಂ :
ಮೋತಿ ಶಾಹಿ ಮಹಲ್‌ನಲ್ಲಿರುವ ಸರ್ದಾರ ಪಟೇಲ್‌ ಮ್ಯೂಸಿಯಂ, ಸರ್ದಾರ್‌ ವಲ್ಲಭಾಯಿ ಪಟೇಲ್‌ ರ ಜೀವನ ನೆನಪಿಸುವ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ಬೆಳಕು ಮತ್ತು ಲೇಸರ್‌ ಪ್ರದರ್ಶನಗಳು, 3D ಪರಿಣಾಮಗಳನ್ನು ನೋಡಬಹುದು.

ದಂಡಿ ಬೀಚ್‌ :
ಸ್ವಾತಂತ್ರ್ಯ ಸಂಗ್ರಾದಲ್ಲಿ ಮಹತ್ವದ ಪಾತ್ರವಹಿಸಿದ ಊರು ಇದು. ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರು ಚಳುವಳಿಯನ್ನು ಈ ಕಡಲತೀರದಿಂದಲೇ ಪ್ರಾರಂಭಿಸಿದರು. ಇದು ಈಗ ಪ್ರವಾಸಿಗರ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ಸೂರ್ಯಾಸ್ತ ಮತ್ತು ಸೂರ್ಯೋದಯಗಳು ಅತ್ಯಂತ ಮನಮೋಹಕವಾಗಿರುತ್ತದೆ. ರಜಾದಿನಗಳನ್ನು ಆನಂದಿಸಲು ಇದು ಉತ್ತಮ ಸ್ಥಳ.

ಸರ್ಥಾನಾ ನೇಚರ್‌ ಪಾರ್ಕ್‌ :
ಸೂರತ್‌ನಿಂದ ಸುಮಾರು 10 ಕಿಲೋಮೀಟರ್‌ ದೂರದಲ್ಲಿರುವ ಸರ್ಥಾನಾ ನೇಚರ್‌ ಪಾರ್ಕ್‌ ಒಂದು ಝೂಲಾಜಿಕಲ್‌ (Zoological) ಪಾರ್ಕ್‌ ಆಗಿದೆ. ತಾಪಿ ನದಿಯ ಬಲದಂಡೆಯುದ್ದಕ್ಕೂ ಹರಡಿರುವ ಈ ಮೃಗಾಲಯ ಸುಮಾರು 81 ಎಕರೆಗಳಷ್ಟು ವಿಸ್ತಾರವಾಗಿದೆ. ಇದು ಸಿಂಹಗಳು, ಜಿಂಕೆಗಳು, ರಾಯಲ್ ಬೆಂಗಾಲ್ ಟೈಗರ್‌ಗಳು, ಚಿರತೆಗಳು, ಹಿಮಾಲಯನ್ ಕರಡಿಗಳು ಮತ್ತು ಹಿಪ್ಪೊಪಾಟಮಸ್‌ನಂತಹ ಪ್ರಾಣಿಗಳಿಗೆ ನೆಲೆಯಾಗಿದೆ. ಪ್ರಕೃತಿ ಪ್ರಿಯರ ಸ್ವರ್ಗವಾದ ಸರ್ಥಾನಾ ನೇಚರ್‌ ಪಾರ್ಕ್‌ ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳನ್ನು ರಕ್ಷಿಸಲು ಮತ್ತು ಸಂರಕ್ಷಣೆಯ ಜಾಗೃತಿ ಮೂಡಿಸಲು ಕೆಲಸ ಮಾಡಿದೆ. ಮಕ್ಕಳೊಂದಿಗೆ ಭೇಟಿ ನೀಡಬಹುದಾದ ಉತ್ತಮ ಸ್ಥಳವಾಗಿದೆ.

ಇದನ್ನೂ ಓದಿ : AAI Recruitment 2022 : ಡಿಪ್ಲೋಮಾ ಮತ್ತು ಡಿಗ್ರಿ ಮಾಡಿದವರಿಗೆ ಏರ್‌ ಪೋರ್ಟ್‌ ಆಥೋರಿಟಿ ಆಫ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ

ಇದನ್ನೂ ಓದಿ : IT companies warning to Karnataka : ಒಂದು ಮಳೆಗೆ 255 ಕೋಟಿ ನಷ್ಟ: ಸಿಲಿಕಾನ್ ಸಿಟಿಯಿಂದ ವಾಕ್ ಔಟ್ ಎಚ್ಚರಿಕೆ ಕೊಟ್ಟ ಐಟಿ ಕಂಪನಿಗಳು

(Surat places to visit in the textile city of India)

Comments are closed.