ಬೆಂಗಳೂರು ಕರಗ ಆಚರಣೆಗೆ ರಾಜ್ಯ ಸರಕಾರದಿಂದ ಗ್ರೀನ್ ಸಿಗ್ನಲ್

0

ಬೆಂಗಳೂರು : ಕೊನೆಗೂ ಬೆಂಗಳೂರು ಕರಗ ಆಚರಿಸುವುದಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಸರಳವಾಗಿ ಕರಗ ಆಚರಿಸಲು ನಿರ್ಧರಿಸಲಾಗಿದ್ದು, ಕೇವಲ 4 ರಿಂದ 5 ಮಂದಿಯಷ್ಟೇ ಕರಗದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ದೇಶದಾದ್ಯಂತ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಕರಗ ಉತ್ಸವ ಆಚರಣೆಯ ಬಗ್ಗೆ ಸಾಕಷ್ಟು ಗೊಂದಲಗಳು ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರಕಾರ ಬೆಂಗಳೂರು ಕರಗ ಆಚರಣೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಸಭೆಯಲ್ಲಿ ಭಾಗಿಯಾಗಿದ್ದ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಯಾರ ಕಾಲದಲ್ಲಿಯೂ ಕರಗ ನಿಂತಿಲ್ಲ, ಟಿಪ್ಪು ಸುಲ್ತಾನ್ ಕಾಲದಲ್ಲೂ ನಿಂತಿಲ್ಲ, ಪ್ಲೇಗ್ ಬಂದಾಗಲೂ ನಿಂತಿಲ್ಲ, ಈಗ ಬೆಂಗಳೂರು ಕರಗ ಸಂಪ್ರದಾಯವನ್ನ ಮುರಿಯಬಾರದು ಎಂದು ಮನವಿ ಮಾಡಿದರು, ಹೀಗಾಗಿ ನಾಲ್ಕೈದು ಮಂದಿ ಸೇರಿಕೊಂಡು ಬೆಂಗಳೂರು ಕರಗ ನಡೆಸಲು ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

Leave A Reply

Your email address will not be published.