ಇಂಡಿಯನ್ ನೇವಿ ಅಗ್ನಿವೀರ್ ನೇಮಕಾತಿ 2026 ಪ್ರಾರಂಭ: ಈ ದಿನದ ಒಳಗೆ ಅರ್ಜಿ ಸಲ್ಲಿಸಿ
ಭಾರತೀಯ ನೌಕಾಪಡೆ (ನೇವಿ) ಅಗ್ನೀವೀರ್ (SSR, MR, SSR Medical assistant) ನೇಮಕಾತಿಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
Indian Navy Agniveer: ಸಮುದ್ರದ ಅಲೆಗಳ ನಡುವೆ ದೇಶವನ್ನು ರಕ್ಷಿಸುವ ಕನಸು ಕಾಣುತ್ತಿರುವ ಯುವಕರಿಗೆ ಭಾರತೀಯ ನೌಕಾಪಡೆಯು ಸುವರ್ಣಾವಕಾಶವನ್ನು ಒದಗಿಸಿದೆ. ಭಾರತೀಯ ನೌಕಾಪಡೆ (ನೇವಿ) ಅಗ್ನೀವೀರ್ (SSR, MR, SSR Medical assistant) ನೇಮಕಾತಿಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಭಾಗವಾಗುವ ಅವಕಾಶವನ್ನು ಒದಗಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆಯಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಕೊನೆಯ ದಿನಾಂಕ ಏಪ್ರಿಲ್ 6 ಆಗಿದೆ. ಅಭ್ಯರ್ಥಿಗಳು ನೇವಿಯ ಅಧಿಕೃತ ವೆಬ್‌ಸೈಟ್ joinindiannavy.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಇರಬೇಕಾದ ಅರ್ಹತೆಗಳೇನು ಎಂದು ತಿಳಿಯೋಣ.
ಯಾರು ಅರ್ಜಿ ಸಲ್ಲಿಸಬಹುದು?
ಅಗ್ನಿವೀರ್ SSR: ಅಭ್ಯರ್ಥಿಗಳು 12 ನೇ ತರಗತಿ (10+2) ಉತ್ತೀರ್ಣರಾಗಿರಬೇಕು. ಮುಖ್ಯ ವಿಷಯವಾಗಿ ಗಣಿತ ಮತ್ತು ಭೌತಶಾಸ್ತ್ರದ ಜೊತೆಗೆ ರಸಾಯನಶಾಸ್ತ್ರ, ಜೀವಶಾಸ್ತ್ರ ಅಥವಾ ಕಂಪ್ಯೂಟರ್ ವಿಜ್ಞಾನ ಒಂದನ್ನು ಓದಿರಬೇಕು.
ಅಗ್ನಿವೀರ್ MR: ಈ ಹುದ್ದೆಗೆ ಕನಿಷ್ಠ ಅರ್ಹತೆ 10 ನೇ ತರಗತಿ (ಮೆಟ್ರಿಕ್ಯುಲೇಷನ್). ಶೆಫ್, ಸ್ಟೀವರ್ಡ್ ಮತ್ತು ಹೈಜೀನಿಸ್ಟ್ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡಲಾಗುತ್ತದೆ.
ಅಗ್ನಿವೀರ್ SSR(ಮೆಡಿಕಲ್): ಇದು ವಿಶೇಷ ವರ್ಗವಾಗಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅರ್ಹತೆ ಹೊಂದಿರುವ 12 ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಡಿಸೆಂಬರ್ 1, 2004 ಮತ್ತು ಮೇ 31, 2009, ಅಥವಾ ಮೇ 1, 2005 ಮತ್ತು ಅಕ್ಟೋಬರ್ 31, 2010 ರ ನಡುವೆ ಜನಿಸಿರಬೇಕು.
ಅರ್ಜಿ ಶುಲ್ಕ
ಭಾರತೀಯ ನೌಕಾಪಡೆಯ ಅಗ್ನಿವೀರ್ ನೇಮಕಾತಿ 2026 ಗೆ ಸೇರಲು, ಎಲ್ಲಾ ವರ್ಗಗಳ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ₹550 ಠೇವಣಿ ಇಡಬೇಕು. ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು.
ನೌಕಾಪಡೆ ಅಗ್ನಿವೀರ್ ನೇಮಕಾತಿ ಮಾಹಿತಿ ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ಕಿಸಿ.
ಇದನ್ನೂ ಓದಿ: Jobs in Flipkart: ಫ್ಲಿಪ್‌ಕಾರ್ಟ್ ಮಿನಿಟ್ಸ್‌ನಿಂದ ಉದ್ಯೋಗಾವಕಾಶ: ಬೆಂಗಳೂರಿನಲ್ಲಿ ‘ಫೀಲ್ಡ್ ರಿಕ್ರೂಟರ್’ ಹುದ್ದೆಗೆ ಅರ್ಜಿ ಆಹ್ವಾನ
ಆಯ್ಕೆ ಪ್ರಕ್ರಿಯೆ:
ನೌಕಾಪಡೆಯ ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳನ್ನು ಒಳಗೊಂಡಿರುತ್ತದೆ.
ಹಂತ 1 (INET): ಇದು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆಯಾಗಿದ್ದು, ಯಶಸ್ವಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ ಮುಂದಿನ ಹಂತಕ್ಕೆ ಕರೆಯಲಾಗುವುದು.
ಹಂತ II (PFT ಮತ್ತು ವೈದ್ಯಕೀಯ): ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ದೈಹಿಕ ದಕ್ಷತೆ ಪರೀಕ್ಷೆ (PFT), ಲಿಖಿತ ಪರೀಕ್ಷೆ ಮತ್ತು ಅಂತಿಮ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ದೈಹಿಕ ಪರೀಕ್ಷೆಯು ಓಟ, ಸಿಟ್-ಅಪ್‌ಗಳು ಮತ್ತು ಪುಷ್-ಅಪ್‌ಗಳಂತಹ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.



