ಬಿಇ, ಬಿಟೆಕ್‌ ಪದವೀಧರರಿಗೆ ಸುವರ್ಣಾವಕಾಶ: ಸೆಂಟ್ರೆಲ್‌ ಬ್ಯಾಂಕ್‌ನಲ್ಲಿ 275 ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸಿ

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಐಟಿ, ಸೈಬರ್‌ ಸೆಕ್ಯೂರಿಟಿ ಮತ್ತು ರಿಸ್ಕ್‌ ಮ್ಯಾನೇಜ್ಮೆಂಟ್‌ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.

CBI SO Recruitment 2026: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ (CBI) ನುರಿತ ಕಂಪ್ಯೂಟರ್‌ ಪದವೀಧರರಿಗೆ ಉದ್ಯೋಗದ ಬಾಗಿಲು ತೆರೆದಿದೆ. ಸಿಬಿಐ ಈ ನೇಮಕಾತಿಯ ಮೂಲಕ ವಿವಿಧ ತಾಂತ್ರಿಕ ಮತ್ತು ಹಣಕಾಸು ವಿಭಾಗಗಳಲ್ಲಿ 275 ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಸಿಬಿಐ ಇದರಲ್ಲಿ ಐಟಿ, ಸೈಬರ್‌ ಸೆಕ್ಯೂರಿಟಿ ಮತ್ತು ರಿಸ್ಕ್‌ ಮ್ಯಾನೇಜ್ಮೆಂಟ್‌ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಸಾರ್ವಜನಿಕ ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಮಾಡಬೇಕೆಂಬ ಕನಸು ಕಾಣುತ್ತಿರುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಮಾರ್ಚ್‌ 23 ರ ಒಳಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸಿಬಿಐನ ಈ ನೇಮಕಾತಿ ಅಭಿಯಾನದಲ್ಲಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂದು ತಿಳಿಯೋಣ.

ಹುದ್ದೆಯ ವಿವರ

ಈ ನೇಮಕಾತಿ ಅಭಿಯಾನದ ಮೂಲಕ ಸಿಬಿಐ 275 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಅವುಗಳಲ್ಲಿ ಪ್ರಮುಖ ಹುದ್ದೆಗಳೆಂದರೆ

ಐಟಿ ಅಧಿಕಾರಿ (ಸ್ಕೇಲ್ I): 82 ಹುದ್ದೆಗಳು

ಇನ್ಫಾರ್ಮೇಷನ್‌ ಸೆಕ್ಯೂರಿಟಿ ಮತ್ತು ಸೈಬರ್ ಸೆಕ್ಯೂರಿಟಿ: 38 ಹುದ್ದೆಗಳು

ಪ್ರಾಡಕ್ಟ್‌ ಸಪೋರ್ಟ್‌ / ಡಿಜಿಟಲ್ ಸಪೋರ್ಟ್‌: 26 ಹುದ್ದೆಗಳು

ಡಿಜಿಟಲ್ ಚಾನೆಲ್ ಮ್ಯಾನೇಜರ್: 23 ಹುದ್ದೆಗಳು

ಡೇಟಾ ಎಂಜಿನಿಯರ್/ಇಟಿಎಲ್/ಪಿಎಲ್‌ಎಸ್‌ಕ್ಯೂಎಲ್: 15 ಹುದ್ದೆಗಳು

ಸಾಫ್ಟ್‌ವೇರ್ ಡೆವಲಪರ್ (ಜಾವಾ): 13 ಹುದ್ದೆಗಳು

ಇದರ ಜೊತೆಗೆ ಡಾಟಾ ಸೈಂಟಿಸ್ಟ್‌, ಕ್ಲೌಡ್‌ ಮ್ಯಾನೇಜರ್ ಮತ್ತು ರಿಸ್ಕ್‌ ಮ್ಯಾನೇಜರ್‌ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.

ವಯೋಮಿತಿ

ಈ ನೇಮಕಾತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ವಯಸ್ಸು ಹುದ್ದೆಗೆ ಅನುಗುಣವಾಗಿ 30 ರಿಂದ 45 ವರ್ಷಗಳ ವರೆಗೆ ನಿಗದಿಪಡಿಸಲಾಗಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಇದನ್ನೂ ಓದಿ: ದೇಶಾದ್ಯಂತ ಆಧಾರ್‌ ಆಪರೇಟರ್‌ ಸೂಪರ್‌ವೈಸರ್‌ ಹುದ್ದೆಗೆ ನೇಮಕಾತಿ: ಐಟಿಐ, ಡಿಪ್ಲೊಮಾ ಆದವರು ಇಂದೇ ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ

ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತದ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ, ಬಿಟೆಕ್ ಅಥವಾ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಪದವಿ ಪಡೆದಿರಬೇಕು. ಅವರು ಇತರ ಅರ್ಹತಾ ಮಾನದಂಡಗಳನ್ನು ಸಹ ಪೂರೈಸಿರಬೇಕು.

ಅರ್ಜಿ ಶುಲ್ಕ

ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳು ನೋಂದಣಿ ಶುಲ್ಕ ₹175 ಮತ್ತು ಮೀಸಲಾತಿ ಇಲ್ಲದ ವರ್ಗದ ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕ ₹850 ಪಾವತಿಸಬೇಕು.

 

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories