ಸೆಂಟ್ರಲ್ ರೇಲ್ವೆಯಲ್ಲಿ ನೇಮಕಾತಿ : ಎಸ್ಎಸ್ಎಲ್ಸಿ, ಪಿಯಸಿ ಆದವರಿಗೆ ಗುಡ್ ನ್ಯೂಸ್ !
Central Railway Recruitment 2025: ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಕಾಣುತ್ತಿರವವರಿಗೆ ಸುವರ್ಣಾವಕಾಶ. ಸೆಂಟ್ರಲ್ ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ.
ಅಪ್ರೆಂಟಿಸ್ಶಿಪ್ ರೂಪದಲ್ಲಿ ತರಬೇತಿ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಸೆಂಟ್ರಲ್ ರೈಲ್ವೆ ಆಗಸ್ಟ್ 12 ರಿಂದ ಒಟ್ಟು 2418 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸ್ವೀಕರಿಸಲು ಪ್ರಾರಂಭಿಸಿದೆ.
ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಂಟ್ರಲ್ ರೈಲ್ವೆಯಲ್ಲಿ ಅಪ್ರೆಂಟಿಸ್ಶಿಪ್ಗಾಗಿ ಸೆಪ್ಟೆಂಬರ್ 11 ಸಂಜೆ 5 ಗಂಟೆಯೊಳಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು
ಅಪ್ರೆಂಟಿಸ್ಶಿಪ್
ಒಟ್ಟು ಹುದ್ದೆಗಳು
2418 ಅಪ್ರೆಂಟಿಸ್ ಹುದ್ದೆಗಳು
ವಯಸ್ಸಿನ ಮಿತಿ
ಅಪ್ರೆಂಟಿಸ್ಶಿಪ್ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಟ ವರ್ಷ 15 ಮತ್ತು ಗರಿಷ್ಠ 24 ವರ್ಷಗಳು. ಇದಲ್ಲದೆ, SC/ ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ ಎಸ್ಎಸ್ಎಲ್ಸಿ ಮತ್ತು ಪಿಯುಸಿಯನ್ನು ಪೂರ್ಣಗೊಳಿಸಬೇಕು. ಇದರ ಜೊತೆಗೆ ಅಭ್ಯರ್ಥಿಗಳು ಟ್ರೇಡ್ಗೆ ಸಂಬಂಧಿಸಿದಂತೆ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.
ಅರ್ಜಿ ಶುಲ್ಕ
ಸೆಂಟ್ರಲ್ ರೈಲ್ವೆಯಲ್ಲಿ ಅಪ್ರೆಂಟಿಸ್ಶಿಪ್ಗಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವಿತಿಸಬೇಕಾಗುತ್ತದೆ. ಅರ್ಜಿ ಶುಲ್ಕವನ್ನು 100 ರೂ. ಎಂದು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ! ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿದೆ 500 ಜನರಲಿಸ್ಟ್ ಆಫೀಸರ್ ಹುದ್ದೆ
ಅರ್ಜಿ ಸಲ್ಲಿಕೆ ಹೇಗೆ ?
– ಅಪ್ರೆಂಟಿಸ್ಶಿಪ್ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ ಸೆಂಟ್ರಲ್ ರೈಲ್ವೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
– ವೆಬ್ಸೈಟ್ನ ಮುಖಪುಟದಲ್ಲಿರುವ ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ಕಿಸ ಬೇಕು.
– ಲಾಗಿನ್ ಆದ ನಂತರ ವೈಯಕ್ತಿಕ ಮಾಹಿತಿ ಮತ್ತು ಸ್ಕ್ಯಾನ್ ಮಾಡಿದ ಅಗತ್ಯ ದಾಖಲೆಗಳನ್ನು ನಮೂದಿಸಬೇಕು.
– ನಂತರ ನಿದಿತ ಶುಲ್ಕವನ್ನು ಪಾವತಿಸಿ, ಇನ್ನೊಮ್ಮೆ ಅರ್ಜಿ ನಮೂನೆಯನ್ನು ಪರಿಶೀಲಿಸಿ, ಅರ್ಜಿ ಸಲ್ಲಿಸಬೇಕು.
– ಕೊನೆಯಲ್ಲಿ ಭವಿಷ್ಯದ ಅಗತ್ಯಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯ ಪ್ರಿಂಟ್ಔಟ್ ತೆಗೆದುಕೊಳ್ಳಿ.
ಸೆಂಟ್ರಲ್ ರೈಲ್ವೆ ಅಪ್ರೆಂಟಿಸ್ಶಿಪ್ ಹುದ್ದೆಯ ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ.
(Central Railway Recruitment 2025 more than 2000 apprentices vacancy apply online)



