ಐಟಿಐ ಲಿಮಿಟೆಡ್‌ ನೇಮಕಾತಿ 215 ಯಂಗ್‌ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ITI Recruitment 2026: ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರೀ ಲಿಮಿಟೆಡ್‌ ಯಂಗ್‌ ಪ್ರೊಫೆಷನಲ್‌ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕಟಣೆಯ ಪ್ರಕಾರ ಐಟಿಐ ಲಿಮಿಟೆಡ್‌ ಖಾಲಿ ಇರುವ ಒಟ್ಟು 215 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಜನವರಿ 12 ರೊಳಗೆ ಐಟಿಐ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಯಂಗ್‌ ಪ್ರೊಫೆಷನಲ್‌ ಗ್ರಾಜ್ಯುವೇಟ್

ಯಂಗ್ ಪ್ರೊಫೆಷನಲ್‌ ಟೆಕ್ನಿಷಿಯನ್‌

ಯಂಗ್‌ ಪ್ರೊಫೆಷನಲ್‌ ಆಪರೇಟರ್‌

ಐಟಿಐ ನೇಮಕಾತಿ 2026 ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.

ವಿದ್ಯಾರ್ಹತೆ ಮತ್ತು ವೇತನ

ಈ ನೇಮಕಾತಿಯಲ್ಲಿ ಭಾಗವಹಿಸಲು ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಇನ್ನು ವೇತನವನ್ನು ಸಹ ಹುದ್ದೆಗಳಿಗೆ ಅನುಸಾರವಾಗಿ ನಿಗದಿಪಡಿಸಲಾಗಿದೆ. ಯಂಗ್‌ ಪ್ರೊಫೆಷನಲ್‌ ಗ್ರಾಜ್ಯುವೇಟ್ ಅಭ್ಯರ್ಥಿಗೆ ತಿಂಗಳಿಗೆ 60,000 ರೂ., ಯಂಗ್ ಪ್ರೊಫೆಷನಲ್‌ ಟೆಕ್ನಿಷಿಯನ್‌ ಅಭ್ಯರ್ಥಿಗೆ ತಿಂಗಳಿಗೆ 35,000 ರೂ. ಹಾಗೂ ಯಂಗ್‌ ಪ್ರೊಫೆಷನಲ್‌ ಆಪರೇಟರ್‌ಗೆ ತಿಂಗಳಿಗೆ 30,000 ರೂ. ವೇತನ ದೊರೆಯಲಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ SSLC ಪಾಸಾದವರಿಗೆ ಕೆಲಸ; 40,000 ವರೆಗೆ ವೇತನ!

ಅರ್ಜಿ ಸಲ್ಲಿಕೆ ಹೇಗೆ?

  • ಐಟಿಐ ನೇಮಕಾತಿಯಲ್ಲಿ ಯಂಗ್‌ ಪ್ರೊಫೆಷನಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಮೊದಲು ನೀವು ಅಧಿಕೃತ ವೆಬ್‌ಸೈಟ್ itiltd.in ಗೆ ಭೇಟಿ ನೀಡಬೇಕು.
  • ಅಲ್ಲಿ ಕರಿಯರ್‌ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.
  • ನೇಮಕಾತಿಗೆ ಸಂಬಂಧಿಸಿದ ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
  • ಬಳಿಕ ಅಲ್ಲಿ ಕೇಳಿರುವ ವಿವರಗಳನ್ನು ನಮೂದಿಸುವ ಮೂಲಕ ನೋಂದಣಿ ಮಾಡಬೇಕು.
  • ನೋಂದಣಿ ನಂತರ, ಅಭ್ಯರ್ಥಿಗಳು ಇತರ ವಿವರಗಳನ್ನು ಭರ್ತಿ ಮಾಡಿ, ಫಾರ್ಮ್ ಅನ್ನು ಪೂರ್ಣಗೊಳಿಸಿ.
  • ಅರ್ಜಿ ಶುಲ್ಕ ಪಾವತಿಸಿ, ಇನ್ನೊಮ್ಮೆ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಸಲ್ಲಿಸಬೇಕು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories