ಗ್ರೇಟರ್ ಬೆಂಗಳೂರು ಪ್ರಾಧಿಕಾರ : ಅಧಿಕಾರಿಗಳ ನೇಮಕ, ಸರ್ಕಾರದ ಆದೇಶ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ( Greater Bengaluru Authority ) ಹಾಗೂ ಹೊಸದಾಗಿ ರಚನೆಯಾದ 5 ನಗರ ಪಾಲಿಕೆಗಳ ವಿವಿಧ ವಿಭಾಗಗಳ ವಿವಿಧ ವೃಂದದ ಹುದ್ದೆಗಳನ್ನು ಮರುಹಂಚಿಕೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ಈ ಆದೇಶದ ಪ್ರಕಾರ ಈಗಾಗಲೇ ಮಂಜೂರಾಗಿರುವ 16 ಐ.ಎ.ಎಸ್ ಮತ್ತು 02 ಐ.ಪಿ.ಎಸ್ ಹುದ್ದೆಗಳನ್ನು ಮತ್ತು ಈಗಾಗಲೇ ಮಂಜೂರಾಗಿರುವ 19 ಕೆ.ಎ.ಎಸ್ ಹುದ್ದೆಗಳಲ್ಲಿ 17 ಹುದ್ದೆಗಳನ್ನು ಮತ್ತು 01 ಕೆ.ಎಸ್.ಪಿ.ಎಸ್ ಹುದ್ದೆಯನ್ನು ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ಬರುವ 5 ನಗರ ಪಾಲಿಕೆಗೆ ಹುದ್ದೆಗಳನ್ನು ಮರು ಹಂಚಿಕೆಮಾಡಲು ಆದೇಶ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿನ 5 ನಗರ ಪಾಲಿಕೆಗಳಿಗೆ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ ಮತ್ತು ಕೆ.ಎಸ್.ಪಿ.ಎಸ್ ವೃಂದದ ಹುದ್ದೆಗಳನ್ನು ಹೊರತುಪಡಿಸಿ ವಿವಿಧ ವಿಭಾಗಗಳಲ್ಲಿರುವ ವಿವಿಧ ಹುದ್ದೆಗಳನ್ನೂ ಮರುಹಂಚಿಕೆ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ: ವಾರ್ಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅಥವಾ ನಿರ್ದಿಷ್ಟ ನಗರ ಪಾಲಿಕೆಗೆ ಆದೇಶ ನಿಗದಿಪಡಿಸದ ಹೊರತು ಪ್ರತಿಯೊಂದು ಕಛೇರಿಯು ಆಯಾ ನಗರ ಪಾಲಿಕೆಯ ಅಡಿಯಲ್ಲಿಯೇ ಕಾರ್ಯ ಮುಂದುವರಿಸಲಿದೆ.
ಇದನ್ನೂ ಓದಿ : ಐಟಿಐ, ಡಿಪ್ಲೋಮಾ ಶಿಕ್ಷಣ ಪಡೆದವರಿಗೆ ಗುಡ್‌ನ್ಯೂಸ್
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ ಇರುವ 198 ವಾರ್ಡ್‌ಗಳು ಯಾವ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿವೆಯೋ ಅದೇ ನಗರ ಪಾಲಿಕೆಗಳ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತವೆ.
ನಿರ್ದಿಷ್ಟ ಆದೇಶ ಹೊರಡಿಸುವವರೆಗೆ ಎ, ಬಿ, ಸಿ, ವಾಹನ ಚಾಲಕರು, ಗ್ರೂಪ್ ಡಿ ಮತ್ತು ಪೌರ ಕಾರ್ಮಿಕರು ಈಗ ಕಾರ್ಯನಿರ್ವಹಿಸುತ್ತಿರುವ ನಗರ ಪಾಲಿಕೆಯಲ್ಲಿಯೇ ಮುಂದುವರಿಯಲಿದ್ದಾರೆ.
ಇದನ್ನೂ ಓದಿ : ಇ ಖಾತಾ ಅರ್ಜಿ ಸಲ್ಲಿಸಲು ಬಾರೀ ಬೇಡಿಕೆ : ಏನಿದು ಈ ಖಾತಾ ? ಅರ್ಜಿ ಸಲ್ಲಿಸುವುದು ಹೇಗೆ ?
ಹೊಸ ನಗರ ಪಾಲಿಕೆಗಳ ಕಾರ್ಯವನ್ನು ನಿರ್ವಹಿಸಲು ಅಗತ್ಯವಿರುವ ಸಿಬ್ಬಂದಿಗಳನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪ್ರತಿ ನಗರ ಪಾಲಿಕೆಯ ವಾರ್ಡ್ ಸಂಖ್ಯೆ ಮತ್ತು ಗಡಿಗಳನ್ನು ಅದು ನಿರ್ಧರಿಸಲಿದೆ.
ಇದನ್ನೂ ಓದಿ : ಸಹಾಯಕ ಪ್ರಾಧ್ಯಾಪಕರ ನೇಮಕಾತಿ : 1 ಲಕ್ಷ ವೇತನ ಅರ್ಜಿ ಸಲ್ಲಿಸುವುದು ಹೇಗೆ ?
(Karnataka Govt orders appointment of various cadres of officers to Greater Bengaluru Authority)



