Gujarat Coast : ಗುಜರಾತ್‌ ಕರಾವಳಿಯಲ್ಲಿ ಪಾಕಿಸ್ತಾನದ ಹಡಗು ಪತ್ತೆ :350 ಕೋಟಿ ಮೌಲ್ಯದ ಹೆರಾಯಿನ್‌ ವಶ,6 ಸಿಬ್ಬಂದಿಯ ಬಂಧನ

ಗುಜರಾತ್:‌ (Gujarat Coast) ಕೋಸ್ಟ್ ಗಾರ್ಡ್‌ ಮತ್ತು ಗುಜರಾತ್‌ ಭಯೋತ್ಪಾದನ ನಿಗ್ರಹ ದಳವು ಗುಜರಾತಿನ ಕರಾವಳಿಯಲ್ಲಿ ಪಾಕಿಸ್ತಾನದ ಅಲ್‌ ಸಕರ್‌ ಹಡಗನ್ನು ವಶಪಡಿಸಿಕೊಂಡಿದೆ.‌ ಸುಮಾರು 350 ಕೋಟಿಯ ಮೌಲ್ಯದ ಹೆರಾಯಿನ್‌ ಅನ್ನು ವಶಪಡಿಸಿಕೊಂಡಿದ್ದು, ಆರು ಮಂದಿ ಸಿಬ್ಬಂದಿಗಳನ್ನು ಬಂಧಿಸಲಾಗಿದೆ.

ಕೋಸ್ಟ್ ಗಾರ್ಡ್ ಗೆ ಸಂಬಂಧಿಸಿದ c-429 ಮತ್ತು c-454-IMBl ಎಂಬ ಹೆಸರಿನ (Gujarat Coast) ಹಡಗನ್ನು ಗುಜರಾತಿನ ಬಂದರು ಪ್ರದೇಶವನ್ನು ನೋಡಿಕೊಳ್ಳವುದಕ್ಕೆ ನಿಯೋಜಿಸಲಾಗಿತ್ತು. ಈ ವೇಳೆಯಲ್ಲಿ ಪಾಕಿಸ್ಥಾನದ ಹಡಗು ಭಾರತದ ಸಮುದ್ರ ಗಡಿಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿತ್ತು. ಈ ವೇಳೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂಧಿಗಳು ಪ್ರಶ್ನಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಹಡಗನ್ನು ತಡೆದು ಶೋಧ ಕಾರ್ಯಾಚರಣೆ ನಡೆಸಿದ ವೇಳೆಯಲ್ಲಿ ಮಾದಕ ದ್ರವ್ಯ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಹಡಗಿನಲ್ಲಿ ಶೋಧ ನಡೆಸಿದಾಗ ಐದು ಗೋಣಿ ಚೀಲದಲ್ಲಿ ಬಚ್ಚಿಟ್ಟಿದ್ದ ಸುಮಾರು 50 ಕೆಜಿ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಹಡಗಿನಲ್ಲಿರುವ ಆರು ಸಿಬ್ಬಂದಿಗಳನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆಗಾಗಿ ಪಾಕಿಸ್ತಾನದ ಹಡಗನ್ನು ಜಖೌಗೆ ತರಲಾಗಿದೆ. ಜೊತೆಗೆ ಆರು ಸಿಬ್ಬಂದಿಗಳನ್ನೂ ಕೂಡ ಈ ಸ್ಥಳದಲ್ಲಿ ಇರಿಸಲಾಗಿದೆ.

ಇದನ್ನೂ ಓದಿ:Indian Air Force Day:ಭಾರತೀಯ ವಾಯುಪಡೆಯ ದಿನ: ಮಹತ್ವ ಮತ್ತು ಇತಿಹಾಸ

ಇದನ್ನೂ ಓದಿ:Mukesh Ambani – Shiv Nadar : ಉದ್ಯಮದಲ್ಲಿ ಯಶಸ್ಸು ಕಂಡ ಮುಕೇಶ್‌ ಅಂಬಾನಿ, ಶಿವ ನಾಡರ್‌ ಪುತ್ರಿಯರು

ಪಾಕಿಸ್ತಾನ ಹಡಗಿನಲ್ಲಿ ಮಾದಕ ದ್ರವ್ಯ ಸಾಗಿಸಿ ಸಿಕ್ಕಿ ಬಿಳುತ್ತಿರುವುದು ಇದೆ ಮೊದಲೇನಲ್ಲಾ. ಕಳೆದ ಬಾರಿಯೂ ಕೋಸ್ಟ ಗಾರ್ಡ್‌ ಮತ್ತು ಗುಜರಾತ್‌ ಭಯೋತ್ಪಾದನ ನಿಗ್ರಹ ದಳದ ಜಂಟಿ ಕಾರ್ಯಾಚರಣೆ ನಡೆಸಿತು. ಈ ಕಾರ್ಯಚರಣೆಯಲ್ಲಿ ಪಾಕಿಸ್ತಾನದ ಹಡಗಿನಿಂದ 40 ಕೆಜಿಯ ಮಾದಕ ವಸ್ತು ಪತ್ತೆಯಾಗಿತ್ತು. ಇದೀಗ ಪಾಕಿಸ್ತಾನ ಹಡಗು ಪತ್ತೆಯಾದ ಬೆನ್ನಲ್ಲೆ ತನಿಖೆಯನ್ನು ಚುರುಕುಗೊಳಿಸಲಾಗಿದೆ.

ಮೊಬೈಲ್‌ ಕಾರಣಕ್ಕೆ ಅಪ್ಪ ಮಗ ಇಬ್ಬರೂ ನೇಣಿಗೆ ಶರಣು

ಚೆನ್ನೈ : ಸದಾ ಕಾಲ ಮೊಬೈಲ್ ನಲ್ಲೇ ಮುಳುಗಿ ಇರುತ್ತಿದ್ದ ಕಾರಣಕ್ಕೆ ತಂದೆಯೋರ್ವ ಮಗನಿಗೆ ಬುದ್ದಿಮಾತು ಹೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಮಗ ನೇಣಿಗೆ ಶರಣಾಗಿದ್ದಾನೆ. ಮಗ ತನ್ನಿಂದ ಸಾವಿಗೆ ಶರಣಾಗಿದ್ದಾನೆ ಅನ್ನೋ ಪಶ್ಚಾತಾಪದಿಂದಲೇ ತಂದೆಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನ ಕುಂದ್ರತೂರು ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿ ಕುಂದ್ರತೂರಿನ ತಿರುವಳ್ಳುವರ್‌ ಪ್ರದೇಶದ ಬಡಗಿಯಾಗಿದ್ದು, ಸುಂದರ್‌ (40 ವರ್ಷ )ಎಂದು ಗುರುತಿಸಲಾಗಿದೆ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಸುಂದರ್‌ ನ ಕಿರಿಯ ಮಗ ನವೀನ್‌ ಯಾವಾಗಲೂ ಮೊಬೈಲ್ ನಲ್ಲೆ ಮುಳುಗಿರುತ್ತಿದ್ದ. ಓದುವುದನ್ನು ಬಿಟ್ಟು ಮೊಬೈಲ್‌ ನಲ್ಲಿ ಗೇಮ್‌ ( Mobile Game ) ಅಡುತ್ತಿರುವುದನ್ನು ಗಮನಿಸಿದ ತಂದೆ ಮೊಬೈಲ್‌ ಬದಿಗಿಟ್ಟು ಓದಿನ ಕಡೆ ಗಮನ ಕೊಡುವಂತೆ ಹೇಳಿದ್ದಾರೆ. ಆದರೆ ಅಪ್ಪ ಗದರಿಸಿದ್ದಾರೆಂದು ಆತ ಮನನೊಂದು ಮನೆಯಲ್ಲಿ ಯಾರು ಇಲ್ಲದಾಗ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊರಗೆ ಹೋದ ಸುಂದರ್‌ ಮನೆಗೆ ವಾಪಾಸ್‌ ಬಂದಾಗ ಅಕ್ಕಪಕ್ಕದ ಮನೆಯವರು ಮಗನ ಸಾವಿನ ಸುದ್ಧಿಯನ್ನು ತಿಳಿಸಿದ್ದಾರೆ. ತನ್ನ ಮಗ ಸೀಲಿಂಗ್‌ ಫ್ಯಾನ್‌ ಗೆ ಸೀರೆಯನ್ನು ಕಟ್ಟಿ ನೇಣು ಬಿಗಿದುಕೊಂಡಿರುವುದನ್ನು ಕಂಡು ಪಶ್ಚತ್ತಾಪದಿಂದ ಅಡುಗೆ ಮನೆಗೆ ಹೋಗಿ ಚಾಕುವಿನಿಂದ ತನ್ನ ಕೈ ಮತ್ತು ಕುತ್ತಿಗೆಯನ್ನು ಕೊಯ್ದುಕೊಂಡು ನಂತರ ಕೋಣೆಗೆ ತೆರಳಿ ಕೋಣೆಯ ಬಾಗಿಲಿಗೆ ಬೀಗ ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ.

Pakistani ship found off Gujarat coast: heroin worth 350 crore seized, 6 crew arrested

Comments are closed.