MBA ಮಾಡಿದವರಿಗೆ ವೆಲ್ತ್ ಮ್ಯಾನೇಜರ್ ಆಗುವ ಸುವರ್ಣಾವಕಾಶ: ಯೂನಿಯನ್ ಬ್ಯಾಂಕ್ನಲ್ಲಿದೆ 250 ಹುದ್ದೆಗಳು
Union Bank Wealth Manager Recruitment 2025: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸಬೇಕೆಂಬ ಕನಸು ಹೊತ್ತವರಿಗೆ ಇದು ಸಕಾಲ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವೆಲ್ತ್ ಮ್ಯಾನೇಜರ್ ಹುದ್ದೆಗಾಗಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.
ಈ ನೇಮಕಾತಿ ಅಡಿಯಲ್ಲಿ ಯೂನಿಯನ್ ಬ್ಯಾಂಕ್ ಒಟ್ಟು 250 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
ಈ ಅರ್ಜಿ ಪ್ರಕ್ರಿಯೆಯು ಆಗಸ್ಟ್ 5 ರಿಂದಲೇ ಪ್ರಾರಂಭವಾಗಿದ್ದು ಆಗಸ್ಟ್ 25 ರ ಒಳಗೆ ಸೂಕ್ತ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಬ್ಯಾಂಕ್ನ ಅಧಿಕೃತ ವೆಬ್ಸೈಟ್ unionbankofindia.co.in ಗೆ ಬೇಟಿ ನೀಡಬೇಕು.
ಈ ಹುದ್ದೆಗೆ ಸಂಬಂಧಿಸಿದಂತೆ ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ, ಅರ್ಜಿ ಸಲ್ಲಿಕೆ ಹೇಗೆ ಮುಂತಾದ ವಿಷಯಗಳನ್ನು ತಿಳಿದುಕೊಳ್ಳೋಣ.
ಯೂನಿಯನ್ ಬ್ಯಾಂಕ್ ವೆಲ್ತ್ ಮ್ಯಾನೇಜರ್ ಹುದ್ದೆಗೆ ಅರ್ಹತೆಗಳು
ಹುದ್ದೆಯ ಹೆಸರು: ವೆಲ್ತ್ ಮ್ಯಾನೇಜರ್
ಒಟ್ಟೂ ಹುದ್ದೆಗಳು: ಈ ನೇಮಕಾತಿ ಪ್ರಕಟಣೆಯಲ್ಲಿ ಯೂನಿಯನ್ ಬ್ಯಾಂಕ ಒಟ್ಟು 250 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಇದರಲ್ಲಿ 103 ಹುದ್ದೆಗಳನ್ನು ಕಾಯ್ದಿರಿಸಿದ ವರ್ಗಕ್ಕೆ, 25 ಹುದ್ದೆಗಳನ್ನು EWS ವರ್ಗಕ್ಕೆ, 67 ಹುದ್ದೆಗಳನ್ನು OBC ವರ್ಗಕ್ಕೆ, 18 ಹುದ್ದೆಗಳನ್ನು ST ವರ್ಗಕ್ಕೆ ಮತ್ತು 37 ಹುದ್ದೆಗಳನ್ನು SC ವರ್ಗಕ್ಕೆ ಕಾಯ್ದಿರಿಸಲಾಗಿದೆ.
ಶೈಕ್ಷಣಿಕ ಅರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ MBA/MMS/PGDBA/PGDBM/PGPM/PGDM ನಲ್ಲಿ 2 ವರ್ಷಗಳ ಪದವಿ/ ಕೋರ್ಸ್ ಅನ್ನು ಪೂರೈಸಿರಬೇಕು. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯನ್ನು ಕಡ್ಡಾಯವಾಗಿ ಪರಿಶೀಲಿಸಿ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 ಅಧಿಸೂಚನೆ ವಿವರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 25 ವರ್ಷ ಮತ್ತು ಗರಿಷ್ಠ 35 ವರ್ಷಗಳು ಎಂದು ನಿಗದಿಪಡಿಸಲಾಗಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಸಡಿಲಿಕೆಯಿರುತ್ತದೆ.
ವೇತನ: ಮೂಲ ವೇತನ ಶ್ರೇಣಿ: 64820-2340/1-67160-2680/10-93960
ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ – 177 ರೂ.
ಇತರೆ ವರ್ಗದ ಅಭ್ಯರ್ಥಿಗಳಿಗೆ – 1180 ರೂ.
ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ಗುಡ್ ನ್ಯೂಸ್ : 3588 ಬಿಎಸ್ಎಫ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ
ಯೂನಿಯನ್ ಬ್ಯಾಂಕ್ ವೆಲ್ತ್ ಮ್ಯಾನೇಜರ್ ಹುದ್ದೆಗೆ ಹೀಗೆ ಅರ್ಜಿ ಸಲ್ಲಿಸಿ
– ಆಸಕ್ತ, ಅರ್ಹ ಅಭ್ಯರ್ಥಿಗಳು ಯೂನಿಯನ್ ಬ್ಯಾಂಕ್ನ ಅಧಿಕೃತ ವೆಬ್ಸೈಟ್ unionbankofindia.co.in ಗೆ ಭೇಟಿ ಕೊಡಿ.
– ಮುಖಪುಟದಲ್ಲಿ ನೀಡಲಾದ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
– ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.
– ಇದಾದ ನಂತರ ಲಾಗ್ಇನ್ ಆಗಿ. ನಂತರ ಅಗತ್ಯವಿರುವ ಮಾಹಿತಿಗಳನ್ನು ನಮೂನೆಯಲ್ಲಿ ಭರ್ತಿ ಮಾಡಿ.
– ಇನ್ನೊಮ್ಮೆ ಅರ್ಜಿ ನಮೂನೆಯನ್ನು ಪರಿಶೀಲಿಸಿ, ನಂತರ ಶುಲ್ಕವನ್ನು ಭರಿಸಿ. ಅರ್ಜಿ ಸಲ್ಲಿಸಿ.
– ಅರ್ಜಿ ಸಲ್ಲಿಸಿದ ನಮೂನೆಯನ್ನು ಭವಿಷ್ಯದ ಉಪಯೋಗಕ್ಕಾಗಿ ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ಔಟ್ ತೆಗೆದುಕೊಳ್ಳಿ.
ಇದನ್ನೂ ಓದಿ: ಭಾರತೀಯ ನೌಕಾಪಡೆಯಲ್ಲಿ ಸುವರ್ಣಾವಕಾಶ: SSC ಕಾರ್ಯನಿರ್ವಾಹಕ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ
(Union Bank Wealth Manager Recruitment 2025 apply today for 250 wealth manager posts)



