ತೆರಿಗೆ ವಂಚಿಸಿದ ಐಪೋನ್‌ ತಯಾರಿಕಾ ಫಾಕ್ಸ್‌ಕಾನ್‌ ಕಂಪೆನಿ ವಿರುದ್ದ ತಿರುಗಿ ಬಿದ್ದ ಗ್ರಾಮ ಪಂಚಾಯತ್‌

ಬೆಂಗಳೂರು : ಭಾರತದ ಅತೀ ದೊಡ್ಡ ಐಪೋನ್‌ ತಯಾರಿಕಾ ಕಂಪೆನಿ ತೆರಿಗೆ ಕಳ್ಳಾಟವಾಡ್ತಿದೆ. ದೊಡ್ಡಬಳ್ಳಾಪುರದಲ್ಲಿರುವ ಫಾಕ್ಸ್‌ಕಾನ್‌ (Devanahalli Foxconn) ಕಂಪೆನಿ ಗ್ರಾಮ ಪಂಚಾಯತ್‌ ಗಳಿಗೆ ಬರೋಬ್ಬರಿ 3 […]

iPhone Maker Devanahalli Foxconn in Trouble Gram Panchayats Issue Deadline Over Unpaid Taxes

ಬೆಂಗಳೂರು : ಭಾರತದ ಅತೀ ದೊಡ್ಡ ಐಪೋನ್‌ ತಯಾರಿಕಾ ಕಂಪೆನಿ ತೆರಿಗೆ ಕಳ್ಳಾಟವಾಡ್ತಿದೆ. ದೊಡ್ಡಬಳ್ಳಾಪುರದಲ್ಲಿರುವ ಫಾಕ್ಸ್‌ಕಾನ್‌ (Devanahalli Foxconn) ಕಂಪೆನಿ ಗ್ರಾಮ ಪಂಚಾಯತ್‌ ಗಳಿಗೆ ಬರೋಬ್ಬರಿ 3 ಕೋಟಿಗೂ ಅಧಿಕ ತೆರಿಗೆ ಪಾವತಿ ಮಾಡದೆ ವಂಚಿಸಿದೆ. ಇದರಿಂದ ಸಡಿದೆದ್ದಿರುವ ಕೊಯಿರ ಹಾಗೂ ವಿಶ್ವನಾಥ ಪುರ ಗ್ರಾಮ ಪಂಚಾಯತ್‌ ಫಾಕ್ಸ್‌ ಕಾನ್‌ ಕಂಪೆನಿಯ ವಿರುದ್ದ ಹೋರಾಟಕ್ಕೆ ಸಜ್ಜಾಗಿವೆ.

ವಿಶ್ವದ ಪ್ರತಿಷ್ಠಿತ ಐಪೋನ್‌ ತಯಾರಿಕಾ ಕಂಪೆನಿಯಾಗಿರುವ ಫಾಕ್ಸ್‌ಕಾನ್‌ ವಿರುದ್ದ ತೆರಿಗೆ ಪಾವತಿಸದ ಆರೋಪ ಕೇಳಿಬಂದಿದೆ. ದೇವನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 300 ಎಕರೆಗೂ ಅಧಿಕ ಪ್ರದೇಶದಲ್ಲಿ ಫಾಕ್ಸ್‌ಕಾನ್‌ ಕಂಪೆನಿ ಕಾರ್ಯ ನಿರ್ವಹಿಸುತ್ತಿದೆ.

ಆದರೆ ಸ್ಥಳೀಯ ಗ್ರಾಮ ಪಂಚಾಯತ್‌ ಗೆ ಪಾವತಿ ಮಾಡಬೇಕಾಗಿದ್ದ ಸುಮಾರು 3 ಕೋಟಿಗೂ ಅಧಿಕ ತೆರಿಗೆಯನ್ನು ಪಾವತಿಗೆ ಬಾಕಿ ಉಳಿಸಿಕೊಂಡಿದೆ. ಇದು ಕೊಯಿರ ಹಾಗೂ ವಿಶ್ವನಾಥ ಪುರ ಗ್ರಾಮ ಪಂಚಾಯತ್‌ ಕಂಪೆನಿಗೆ ನೋಟಿಸ್‌ ಜಾರಿ ಮಾಡಿದೆ.

ದೇವನಹಳ್ಳಿಯಲ್ಲಿರುವ ನೂರಾರು ಎಕರೆ ಕೃಷಿ ಭೂಮಿಯ ಪೈಕಿ ಕೆಐಎಡಿಬಿ (KIADB) ಮೂಲಕ ಕಂಪನಿಗೆ ಸುಮಾರು 300 ಎಕರೆ ಜಾಗ ನೀಡಲಾಗಿದೆ. ಇದರಲ್ಲಿ ಕೊಯಿರ ಪಂಚಾಯಿತಿಯ 136 ಎಕರೆ ಮತ್ತು ವಿಶ್ವನಾಥಪುರ ಪಂಚಾಯಿತಿಯ 170 ಎಕರೆ ಪ್ರದೇಶ ಸೇರಿದೆ.

Also Read : ಚಿಕ್ಕಬಳ್ಳಾಪುರದಲ್ಲಿ ಚಿನ್ನದ ನಿಕ್ಷೇಪದ ಸುಳಿವು : 3 ದಿನಗಳಿಂದ ವೈಮಾನಿಕ ಸಮೀಕ್ಷೆ

ಕಂಪೆನಿ ಇದೇ ಜಾಗದಲ್ಲಿ ಐಪೋನ್‌ ತಯಾರಿಸಿ ನಿತ್ಯವೂ ಕೋಟ್ಯಾಂತರ ರೂಪಾಯಿ ಆದಾಯಗಳಿಸುತ್ತಿದೆ. ಆದರೆ ಸ್ಥಳೀಯ ಗ್ರಾಮ ಪಂಚಾಯತ್‌ ಗಳನ್ನು ನಿರ್ಲಕ್ಷ್ಯ ಮಾಡಿದ್ದು, ಪಾವತಿಸ ಬೇಕಾಗಿರುವ ತೆರಿಗೆಯನ್ನೇ ಕಟ್ಟಿಲ್ಲ.

ಇಷ್ಟೇ ಅಲ್ಲಾ ಫಾಕ್ಸ್‌ಕಾನ್‌ ಕಂಪೆನಿ ದೇವನಹಳ್ಳಿಯಲ್ಲಿ ಐಪೋನ್‌ ತಯಾರಿಕೆಯನ್ನಷ್ಟೇ ಮಾಡ್ತಿಲ್ಲ., ಸಿಬ್ಬಂದಿಗಳಿಗೆ ಉಳಿದುಕೊಳ್ಳುವ ಸಲುವಾಗಿ ಡಾರ್ಮೆಟ್ರಿಗಳನ್ನೂ ನಿರ್ಮಿಸುತ್ತಿದೆ. ಆದರೆ ಸ್ಥಳೀಯರ ಗ್ರಾಮ ಪಂಚಾಯತ್‌ ಗಳಿಂದ ಈ ಕಂಪೆನಿ ಕಟ್ಟಡ ಹಾಗೂ ವಸತಿ ಗೃಹಗಳ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲ ಅನ್ನೋದು ಬಯಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೊಯಿರ ಮತ್ತು ವಿಶ್ವನಾಥಪುರ ಗ್ರಾಮ ಪಂಚಾಯತ್‌ ಗಳು ಇದೀಗ ವಿದೇಶಿ ಕಂಪೆನಿಯ ವಿರುದ್ದ ಸಮಯಕ್ಕೆ ಇಳಿದಿವೆ. ಈಗಾಗಲೇ ಕಂಪೆನಿಗೆ ಡಿಮ್ಯಾಂಡ್‌ ನೋಟಿಸ್‌ ಜಾರಿ ಮಾಡಿದ್ದು, ಫೆಬ್ರವರಿ 7ರ ಒಳಗಾಗಿ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಪಾವತಿಸುವಂತೆ ಸೂಚನೆಯನ್ನೂ ನೀಡಿವೆ.

Also Read : ಗೃಹಲಕ್ಷ್ಮಿ ಯೋಜನೆ : ಭರ್ಜರಿ ಗುಡ್‌ನ್ಯೂಸ್‌, ಹೊಸ ಅರ್ಜಿದಾರರಿಗೆ ಯಾವಾಗ ಸಿಗುತ್ತೆ

ಒಂದೊಮ್ಮೆ ತೆರಿಗೆ ಪಾವತಿ ಮಾಡದೆ ಇದ್ದಲ್ಲಿ ಕಂಪೆನಿಗೆ ಮುತ್ತಿಗೆ ಹಾಕುವುದಾಗಿ ಗ್ರಾಮ ಪಂಚಾಯತ್‌ನ ಜನಪ್ರತಿನಿಧಿಗಳು ಎಚ್ಚರಿಕೆ ನೀಡಿದ್ದಾರೆ. ಕಂಪೆನಿ ನೇಮಕಾತಿಯ ವಿಚಾರದಲ್ಲಿಯೂ ಕನ್ನಡಿಗರಿಗೆ ವಂಚನೆಯನ್ನು ಮಾಡಿದ್ದ ಆರೋಪ ಎದುರಿಸುತ್ತಿದೆ.

ಅಲ್ಲದೇ ಮಹಿಳಾ ನೌಕರರಿಗೆ ಡೋರ್‌ ಟು ಡೋರ್‌ ಪಿಕ್‌ ಅಪ್‌ ಹಾಗೂ ಡೋರ್‌ ಟು ಡೋರ್‌ ಡ್ರಾಪ್‌ ಸೌಲಭ್ಯ ನೀಡದೆ ವಂಚಿಸುತ್ತಿದೆ. ಈ ನಡುವಲ್ಲದೇ ಇದೀಗ ಕಂಪೆನಿಯ ವಿರುದ್ದ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ಫಾಕ್ಸ್‌ಕಾನ್‌ ಕಂಪೆನಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

iPhone Maker Devanahalli Foxconn in Trouble Gram Panchayats Issue Deadline Over Unpaid Taxes

Scroll to Top