ಸಂಕ್ರಾಂತಿ ಬಳಿಕ ಸಂಪುಟ ಪುನರಚನೆ ? ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಷರತ್ತು

Karnataka Cabinet Reshuffle : ನವದೆಹಲಿ : ಕರ್ನಾಟಕದಲ್ಲಿ ನವೆಂಬರ್‌ ಕ್ರಾಂತಿಯ ನಡುವಲ್ಲೇ ಮತ್ತೊಂದು ಬೆಳವಣಿಗೆ ನಡೆದಿದೆ. ಸಿದ್ದರಾಮಯ್ಯ ದೆಹಲಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಸಂಪುಟ ಪುನರಚನೆಯ ಬಗ್ಗೆ ಚರ್ಚಿಸಿದ್ದಾರೆ. ಆದರೆ ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಷರತ್ತು ವಿಧಿಸಿದ್ದಾರೆ.

ಕರ್ನಾಟಕದ ರಾಜಕೀಯದಲ್ಲಿ ನವೆಂಬರ್‌ ತಿಂಗಳಿನಲ್ಲಿ ಬಾರೀ ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಬಿಹಾರ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕತ್ವದ ಬದಲಾವಣೆಗೆ ಮುಂದಾಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಈ ನಡುವಲ್ಲೇ ಅಧಿವೇಶನ ಕರೆದಿರುವ ಸಿಎಂ ಸಿದ್ದರಾಮಯ್ಯ, ಸಂಪುಟ ಪುನರಚನೆಗೂ ಮುಂದಾಗಿದ್ದಾರೆ.

ಕಾಂಗ್ರೆಸ್‌ ಹಿರಿಯ ನಾಯಕ ಕಪಿಲ್‌ ಸಿಬಲ್‌ ಅವರ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತೆರಳಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆಯಲ್ಲಿ ಸಿದ್ದರಾಮಯ್ಯ ಸಂಪುಟ ಪುನರಚನೆಯ ಬಗ್ಗೆ ಚರ್ಚಿಸಿದ್ದಾರೆ.

ಸಂಪುಟ ಪುನರಚನೆಗೆ ರಾಹುಲ್‌ ಗಾಂಧಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದರೂ ಕೂಡ, ಕೆಲವೊಂದು ಷರತ್ತು ಹಾಕಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಅವರ ಬಳಿಯಲ್ಲಿ ಚರ್ಚಿಸುವಂತೆ ಸೂಚಿಸಿದ್ದಾರೆ.

ಸದ್ಯ ಮಾಹಿತಿಯ ಪ್ರಕಾರ ಸಿದ್ದರಾಮಯ್ಯ ಅವರು ಸೋಮವಾರವೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್‌ ಹಾಗೂ ಡಿಕೆ ಶಿವಕುಮಾರ್‌ ಅವರ ಜೊತೆಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಭೂಮಿ ಯೋಜನೆ : ಅರ್ಜಿ ವಿಲೇವಾರಿಯಲ್ಲಿ ಶಿರಸಿ ರಾಜ್ಯಕ್ಕೆ ಪ್ರಥಮ

Karnataka Cabinet Reshuffle : ಸದ್ಯಕ್ಕಿಲ್ಲ ಸಂಕ್ರಾಂತಿ ನಂತರವೇ ಸಂಪುಟ ಪುನರಚನೆ

ರಾಹುಲ್‌ ಗಾಂಧಿ ಸಂಪುಟ ಪುನರಚನೆಗೆ ಓಕೆ ಅಂದಿದ್ದರೂ ಕೂಡ ಕರ್ನಾಟಕದಲ್ಲಿ ಸದ್ಯಕ್ಕೆ ಸಂಪುಟ ಪುನರಚನೆ ಆಗೋದು ಅನುಮಾನ. ಮುಂದಿನ ತಿಂಗಳು ವಿಧಾನಸಭಾ ಅಧಿವೇಶವನ್ನು ಕರೆಯಲಾಗಿದೆ. ಸಂಪುಟ ಪುನರಚನೆ ಮಾಡಿಕೊಂಡು ಅಧಿವೇಶನ ಎದುರಿಸುವುದು ಕಾಂಗ್ರೆಸ್‌ ಸರಕಾರಕ್ಕೆ ಸವಾಲಾಗುವ ಸಾಧ್ಯತೆಯಿದೆ.

ಸಂಪುಟದಿಂದ ಕೈ ಬಿಡುವ ಹಾಗೂ ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಚಿವರ ಪಟ್ಟಿಗೆ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್‌ ಹಾಗೂ ಡಿಕೆ ಶಿವಕುಮಾರ್‌ ಅವರ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ. ಅಂತಿಮವಾಗಿ ರಾಹುಲ್‌ ಗಾಂಧಿ ಅವರ ಒಪ್ಪಿಗೆ ಪಡೆದ, ಮುಂದಿನ ಸಂಕ್ರಾಂತಿ ಕಳೆದ ನಂತರ ಸಂಪುಟ ವಿಸ್ತರಣೆ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಸಿಎಂ ಸಿದ್ದರಾಮಯ್ಯ ಈಗಾಗಲೇ ಯಾರನ್ನು ಸಂಪುಟದಲ್ಲಿ ಇರಿಸಿಕೊಳ್ಳಬೇಕು, ಯಾರನ್ನು ಸಂಪುಟದಿಂದ ಕೈ ಬಿಡಬೇಕು ಅನ್ನುವ ಕುರಿತು ಈಗಾಗಲೇ ತನ್ನ ಆಪ್ತ ಶಾಸಕರು, ಸಚಿವರ ಜೊತೆಗೆ ಚರ್ಚೆ ನಡೆಸಿದ್ದಾರೆ. ತನ್ನ ಆಪ್ತರಾಗಿರುವ ಕೆಲವರನ್ನು ಈ ಬಾರಿಯ ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಬಿಹಾರದಲ್ಲಿ ಕಾಂಗ್ರೆಸ್‌ಗೆ ಸೋಲಿನ ಕಹಿ : ರಾಜ್ಯದಲ್ಲಿ ನವೆಂಬರ್‌ ಕ್ರಾಂತಿಗೆ ತಿಲಾಂಜಲಿ

ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿತಾರಾ ಡಿಕೆಶಿ ?

ಬಿಹಾರ ಚುನಾವಣೆಯಲ್ಲಿ ಕರ್ನಾಟಕದ ಮಾದರಿಯಲ್ಲೇ ಗ್ಯಾರಂಟಿ ಯೋಜನೆಗಳ ಬರಪೂರ ಕೊಡುಗೆಗಳ ಆಫರ್‌ ನೀಡಿದ್ದರೂ ಕೂಡ ಬಿಹಾರದ ಜನತೆಗೆ ಕಾಂಗ್ರೆಸ್‌ ಕಡೆಗೆ ವಾಲಿಲ್ಲ. ಮತ್ತೊಂದು ಕಡೆಯಲ್ಲಿ ತಮಿಳುನಾಡು, ಕೇರಳ ಚುನಾವಣೆ ಕೂಡ ಸಮೀಪಿಸುತ್ತಿದೆ. ಇಂತಹ ಹೊತ್ತಲ್ಲಿ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗೆ ಇಳಿಸುವುದು ಕಷ್ಟಸಾಧ್ಯ.

ಮತ್ತೊಂದೆಡೆಯಲ್ಲ ಡಿಕೆ ಶಿವಕುಮಾರ್‌ ಕೂಡ ಸೈಲೆಂಟ್‌ ಆದಂತಿದೆ. ಬಿಹಾರ ಚುನಾವಣೆಯ ನಂತರ ಡಿಕೆ ಶಿವಕುಮಾರ್‌ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ನಾಯಕತ್ವದ ಬದಲಾವಣೆಗೆ ಪಟ್ಟು ಹಿಡಿಯುತ್ತಾರೆ ಎಂದು ಹೇಳಲಾಗ್ತಿತ್ತು. ಆದರೆ ಡಿಕೆ ಶಿವಕುಮಾರ್‌ ಸದ್ಯಕ್ಕೆ ಕಾದು ನೋಡುವ ತಂತ್ರವನ್ನು ಅನುಸರಿಸಿದಂತಿದೆ.

Karnataka Cabinet Reshuffle After Makar Sankranti Rahul Gandhi Condition to CM Siddaramaiah

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories