ಬಾಡಿಗೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಲೀಸ್ ಅಗ್ರಿಮೆಂಟ್‌ಗೆ ಅಲೆದಾಟ ಬೇಕಿಲ್ಲ, ಮನೆಯಲ್ಲೇ ಕುಳಿತು ಮಾಡಿಕೊಳ್ಳಿ ಒಪ್ಪಂದ

ಈ ಡಿಜಿಟಲ್ ಕ್ರಾಂತಿಯಿಂದಾಗಿ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.

ಬೆಂಗಳೂರು : ಕರ್ನಾಟಕದಲ್ಲಿ ಬಾಡಿಗೆ ಮನೆ ಅಥವಾ ಲೀಸ್‌ಗೆ ಮನೆ ಹುಡುಕುವವರಿಗೆ ಮತ್ತು ಮಾಲೀಕರಿಗೆ ಕರ್ನಾಟಕ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಹಿಂದೆ ಬಾಡಿಗೆ ಒಪ್ಪಂದ (Rental Agreement) ಅಥವಾ ಲೀಸ್ ಅಗ್ರಿಮೆಂಟ್ ಮಾಡಿಸಲು ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ಗಂಟೆಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಆ ಸಂಕಷ್ಟಕ್ಕೆ ತೆರೆ ಬಿದ್ದಿದೆ. ‘ಕಾವೇರಿ 2.0’ ತಂತ್ರಾಂಶದ ಮೂಲಕ ಲೀಸ್ ಅಗ್ರಿಮೆಂಟ್ ಅನ್ನು ಮನೆಯಲ್ಲೇ ಕುಳಿತು ಮಾಡಿಕೊಳ್ಳುವ ಹೊಸ ವ್ಯವಸ್ಥೆಯನ್ನು ಕರ್ನಾಟಕ ಸರಕಾರ ಜಾರಿಗೆ ತಂದಿದೆ.

ಏನಿದು ಹೊಸ ವ್ಯವಸ್ಥೆ?

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇತ್ತೀಚೆಗೆ ಕಾವೇರಿ ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿದ್ದು, ಈಗ ಆನ್‌ಲೈನ್ ಮೂಲಕವೇ ಬಾಡಿಗೆ ಮತ್ತು ಲೀಸ್ ಒಪ್ಪಂದಗಳನ್ನು ನೋಂದಣಿ ಮಾಡುವ ಸೌಲಭ್ಯ ಕಲ್ಪಿಸಿದೆ. ಇದರಿಂದಾಗಿ ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲದೆ, ಕಾಗದ ರಹಿತವಾಗಿ ಕೆಲಸ ಮುಗಿಸಬಹುದು.

ಹೊಸ ತಂತ್ರಾಂಶದ ಪ್ರಮುಖ ಪ್ರಯೋಜನಗಳು:

  • ಸಮಯದ ಉಳಿತಾಯ: ಕಚೇರಿಗಳಿಗೆ ಅಲೆಯುವ ಕಿರಿಕಿರಿ ತಪ್ಪುತ್ತದೆ. ಕೆಲವೇ ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
  • ಪಾರದರ್ಶಕತೆ: ಮಧ್ಯವರ್ತಿಗಳ ಕಾಟವಿಲ್ಲದೆ, ಸರ್ಕಾರ ನಿಗದಿಪಡಿಸಿದ ಶುಲ್ಕವನ್ನಷ್ಟೇ ಪಾವತಿಸಿ ಕೆಲಸ ಮುಗಿಸಬಹುದು.
  • ಇ-ಸೈನ್ ಸೌಲಭ್ಯ: ಆಧಾರ್ ಆಧಾರಿತ ಇ-ಸೈನ್ (e-Sign) ಬಳಸುವ ಮೂಲಕ ದಸ್ತಾವೇಜುಗಳಿಗೆ ಡಿಜಿಟಲ್ ಸಹಿ ಮಾಡಬಹುದು.
  • ದೃಢೀಕೃತ ದಾಖಲೆ: ಆನ್‌ಲೈನ್‌ನಲ್ಲಿ ಸಿದ್ಧವಾದ ಒಪ್ಪಂದವು ಕಾನೂನುಬದ್ಧವಾಗಿದ್ದು, ನ್ಯಾಯಾಲಯಗಳಲ್ಲಿಯೂ ಮಾನ್ಯತೆ ಪಡೆಯುತ್ತದೆ.

 online lease rental agreement :ಅಗ್ರಿಮೆಂಟ್ ಮಾಡುವುದು ಹೇಗೆ ?

  1. ಬಾಡಿಗೆದಾರರು ಮತ್ತು ಮಾಲೀಕರು ಕಾವೇರಿ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
  2. ಸರಕಾರ ಅಧಿಕೃತ ಕಾವೇರಿ 2.0 ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ Start New Application ವಿಭಾಗವನ್ನು ಆರಿಸಿಕೊಳ್ಳಿ. ಅಲ್ಲಿ ನಿಮಗೆ ‘Digital e-Stamp ಕಾಣಿಸುತ್ತದೆ. ಅದನ್ನು ಕ್ಲಿಕ್‌ ಮಾಡಿದ ಬಳಿಕ ‘Lease’ ಆಯ್ಕೆಯನ್ನು ಕ್ಲಿಕ್ ಮಾಡಿ.
  3. ಒಂದೊಮ್ಮೆ ನಿಮ್ಮ ಆಸ್ತಿಯು ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಇದ್ದರೆ, ‘E-Aasthi’ ಇಲ್ಲಾ ಗ್ರಾಮೀಣ ಭಾಗದಲ್ಲಿ ಇದ್ದರೆ, ‘E-Swathu’ ವಿವರದ ಜೊತೆಗೆ ಆಸ್ತಿ ಗುರುತಿನ ಸಂಖ್ಯೆಯನ್ನು ನಮೂದಿಸಬೇಕು. ಬಾಡಿಗೆದಾರರು ಹಾಗೂ ಪಡೆಯುವವರ ವಿವರಗಳನ್ನು ಸಲ್ಲಿಕೆ ಮಾಡುವ ಮೂಲಕ ಡಿಜಿಟಲ್‌ ಇ ಸ್ಟ್ಯಾಂಪ್‌ ಪಡೆಯಬಹುದಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಅಲರ್ಟ್ : ಮಾರ್ಚ್ ತಿಂಗಳ ₹2,000 ಹಣ ನಿಮ್ಮ ಖಾತೆಗೆ ಬರಬೇಕಾ? ಈ ಒಂದು ಕೆಲಸ ಮಿಸ್ ಮಾಡ್ಬೇಡಿ !

ಆನ್‌ಲೈನ್‌ ಶುಲ್ಕ ಪಾವತಿ, ಡಿಜಿಟಲ್‌ ಸಹಿ

ಡಿಜಿಟಲ್‌ ಒಪ್ಪಂದ ಪತ್ರವನ್ನು ಆನ್‌ಲೈನ್‌ ಮೂಲಕವೇ ಪಡೆಯಲು ಅವಕಾಶ ಕಲ್ಪಿಸಿದ್ದು ಮಾತ್ರವಲ್ಲ, ಆನ್‌ಲೈನ್‌ ಮೂಲಕವೇ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಅರ್ಜಿಯಲ್ಲಿ ಬಾಡಿಗೆಯ ಮೊತ್ತ ಹಾಗೂ ಒಪ್ಪಂದದ ಅವಧಿಯನ್ನು ನಮೂದಿಸಿದ ಬಳಿಕ ಸಿಸ್ಟಮ್‌ ತಾನಾಗಿಯೇ ಸ್ಟ್ಯಾಂಪ್‌ ಡ್ಯೂಟಿ ಮೊತ್ತವನ್ನು ತೋರಿಸುತ್ತದೆ. ಸರಕಾರಿ ಖಜಾನೆಯ ವೆಬ್‌ಸೈಟ್‌ ಬಳಸಿಕೊಂಡು ಯುಪಿಐ, ಡಿಬಿಟ್‌ ಕಾರ್ಡ್‌ ಅಥವಾ ನೆಟ್‌ಬ್ಯಾಂಕಿಂಗ್‌ ಸೌಲಭ್ಯವನ್ನು ಬಳಸಿಕೊಂಡು ಶುಲ್ಕವನ್ನು ಪಾವತಿಸಬಹುದು.

ಡಿಜಿಟಲ್‌ ಒಪ್ಪಂದ ಪತ್ರ ತಯಾರಿಸುವ ವೇಳೆಯಲ್ಲಿ ಎರಡನೇ ಪಾರ್ಟಿ ಅಥವಾ ಸಾಕ್ಷಿದಾರರು ಸ್ಥಳದಲ್ಲಿ ಇಲ್ಲದೇ ಇದ್ದರೆ, ಎಸ್‌ಎಂಎಸ್‌ ಮೂಲಕ ಲಿಂಕ್‌ ಕಳುಹಿಸುವ ಮೂಲಕ ಅವರ ಡಿಜಿಟಲ್‌ ಸಹಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಡಿಜಿಟಲ್ ಇ-ಸ್ಟಾಂಪ್ ಅನ್ನು ಡೌನ್ಲೋಡ್ ಮಾಡಲು ಅವಕಾಶ ದೊರೆಯಲಿದೆ. ಅಲ್ಲದೇ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಸ್ಟೋರ್‌ ಮಾಡಿಕೊಳ್ಳಲು ಅವಕಾಶವಿದೆ.

ಇದನ್ನೂ ಓದಿ : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಅಲರ್ಟ್: ₹2,000 ಹಣ ಪಡೆಯಲು ಬೇಕಾ ‘ಜೀವಿತ ಪ್ರಮಾಣಪತ್ರ

ಜನಸ್ನೇಹಿ ಸೌಲಭ್ಯ, ಬಾಡಿಗೆದಾರರಿಗೆ ವರದಾನ

  • ನೋಂದಣಿ: ಮೊದಲು ಕಾವೇರಿ ಪೋರ್ಟಲ್‌ನಲ್ಲಿ ಖಾತೆ ತೆರೆಯಬೇಕು.
  • ಮಾಹಿತಿ ಭರ್ತಿ: ಬಾಡಿಗೆ ಮೊತ್ತ, ಮುಂಗಡ ಹಣ (Advance) ಮತ್ತು ಅವಧಿಯ ವಿವರಗಳನ್ನು ನಮೂದಿಸಬೇಕು.
  • ದೃಢೀಕರಣ: ಆಧಾರ್ ಸಂಖ್ಯೆಯ ಮೂಲಕ ಬಯೋಮೆಟ್ರಿಕ್ ಅಥವಾ ಒಟಿಪಿ ಆಧಾರಿತ ದೃಢೀಕರಣ ಮಾಡಬೇಕು.
  • ಶುಲ್ಕ ಪಾವತಿ: ನಿಗದಿತ ಮುದ್ರಾಂಕ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಿ, ಒಪ್ಪಂದದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

    ಈ ಡಿಜಿಟಲ್ ಕ್ರಾಂತಿಯಿಂದಾಗಿ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ವಿಶೇಷವಾಗಿ ಬೆಂಗಳೂರಿನಂತಹ ನಗರಗಳಲ್ಲಿ ಸಾವಿರಾರು ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು, ಈ ವ್ಯವಸ್ಥೆ ಅವರಿಗೆ ವರದಾನವಾಗಲಿದೆ. ರ್ಕಾರದ ಈ ಜನಸ್ನೇಹಿ ಕ್ರಮದಿಂದಾಗಿ ಬಾಡಿಗೆದಾರರು ಮತ್ತು ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.

Karnataka kaveri 2 online lease rental agreement good news for tenants

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories