ಅಡುಗೆ ಅನಿಲ ಪೂರೈಕೆಯಲ್ಲಿ ವಿಳಂಬವಾಗುತ್ತಿದೆಯೇ ? ಈ ಸಹಾಯವಾಣಿಗೆ ದೂರು ಸಲ್ಲಿಸಿ
ರಾಜ್ಯ ಆಹಾರ , ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯ ರಾಜ್ಯದಲ್ಲಿ ಸಿಲಿಂಡರ್ಗಳ ಪೂರೈಕೆಯಲ್ಲಿ ಯಾವುದೇ ಅಭಾವವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಬೆಂಗಳೂರು : ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಇಂಧನ ಅನಿಲಗಳಿಗೆ ಭಾರತದಲ್ಲಿ ಸಂಕಷ್ಟ ಎದುರಾಗಿದೆ. ಹೋರ್ಮುಜ್ ಜಲಸಂಧಿಯಲ್ಲಿ ಇಂಧನ ಹಡಗುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾಗಿದೆ.
ಈಗಾಗಲೇ ಭಾರತದಲ್ಲಿ ಅಡುಗೆ ಅನಿಲ ದರ ಕೂಡ ಏರಿಕೆಯಾಗಿದೆ. ಅಡುಗೆ ಅನಿಲಗಳ ದರ ಏರಿಕೆಯ ಜೊತೆಯಲ್ಲಿ ಸಿಲಿಂಡರ್ಗಳಿಗೆ ಅಭಾವ ಕೂಡ ಕಂಡು ಬರುತ್ತಿದ್ದು ಇದೇ ರೀತಿ ಮುಂದುವರಿದರೆ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದರೆ ಹೇಗಪ್ಪ ಎಂಬ ಚಿಂತೆಯಂತೂ ಶುರುವಾಗಿದೆ.
ಆದರೆ ರಾಜ್ಯ ಆಹಾರ , ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯ ರಾಜ್ಯದಲ್ಲಿ ಸಿಲಿಂಡರ್ಗಳ ಪೂರೈಕೆಯಲ್ಲಿ ಯಾವುದೇ ಅಭಾವವಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ಮುಂದೆ ಅಭಾವ ಉಂಟಾಗಬಹುದು ಎಂದು ಸುಮ್ಮನೇ ಗ್ಯಾಸ್ ಸಿಲಿಂಡರ್ಗಳನ್ನು ಬುಕ್ ಮಾಡಿಕೊಂಡು ಕೃತಕ ಅಭಾವ ಸೃಷ್ಠಿಯಾಗುವಂತೆ ಮಾಡಬೇಡಿ ಎಂದು ಜನತೆಯಲ್ಲಿ ಮನವಿ ಮಾಡಿದೆ.
Also Read : ಕದ್ರಿ ಶ್ರೀ ಮಂಜುನಾಥ ಸನ್ನಿಧಿಗೂ ತಟ್ಟಿದ ಗ್ಯಾಸ್ ಟ್ರಬಲ್ : ಅಡುಗೆ ಒಲೆಯಲ್ಲಿ ಭೋಜನ ವ್ಯವಸ್ಥೆ
ಇತ್ತ ಕೇಂದ್ರ ಸರ್ಕಾರವು ಒಂದು ಸಿಲಿಂಡರ್ನಿಂದ ಮತ್ತೊಂದು ಸಿಲಿಂಡರ್ ನಡುವಿನ ಬುಕ್ಕಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಏರಿಕೆ ಮಾಡಿದೆ. ನೀವು ಎಲ್ಪಿಜಿ ಸಿಲಿಂಡರ್ಗಳನ್ನು ಬುಕ್ ಮಾಡಿದ ಬಳಿಕ ವಿತರಣೆದಾರರು ನಿಮ್ಮಿಂದ ಹೆಚ್ಚಿನ ಹಣ ವಸೂಲಿಗೆ ಮುಂದಾದರೆ, ಅಥವಾ ಗ್ಯಾಸ್ ವಿತರಣೆಯಲ್ಲಿ ವಿಳಂಬ ಮಾಡಿದರೆ ದೂರು ಸಲ್ಲಿಸಲು ಸಹಾಯವಾಣಿಯನ್ನೂ ಆರಂಭಿಸಲಾಗಿದೆ.
ಅಡುಗೆ ಅನಿಲ ತುರ್ತು ಸಹಾಯವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ :
ಇಂಡೇನ್ ಗ್ಯಾಸ್ :
- ಟೋಲ್-ಫ್ರೀ ಸಂಖ್ಯೆ: 1800-2333-555
- ತುರ್ತು ಸಹಾಯವಾಣಿ (ಗ್ಯಾಸ್ ಸೋರಿಕೆ): 1906 (24×7)
ಭಾರತ್ ಗ್ಯಾಸ್ ಸಹಾಯವಾಣಿ
ಗ್ರಾಹಕ ಸೇವಾ ಸ್ಮಾರ್ಟ್ಲೈನ್ ಹಾಗೂ ತುರ್ತು ಸಹಾಯವಾಣಿ: 1800 22 4344
ಹೆಚ್.ಪಿ. ಗ್ಯಾಸ್ ಸಹಾಯವಾಣಿ
- ಸಹಾಯವಾಣಿ ಸಂಖ್ಯೆ: 1800 233 3555
- ಹಆನ್ಲೈನ್ ಪೋರ್ಟಲ್ ಮೂಲಕವೂ ದೂರು ಸಲ್ಲಿಕೆ ಮಾಡಬಹುದು.
Also Read : ಶಾಲಾ ಬಿಸಿಯೂಟಕ್ಕೆ ಯಾವುದೇ ತಡೆಯಿಲ್ಲದೆ ಎಲ್ಪಿಜಿ ಪೂರೈಕೆ: ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ
ಉಜ್ವಲ ಯೋಜನೆ ಬಳಕೆದಾರರಿಗೆ ಸಹಾಯವಾಣಿ
- ಟೋಲ್-ಫ್ರೀ ಸಹಾಯವಾಣಿ: 1800-233-3555
- ಉಜ್ವಲ ಸಹಾಯವಾಣಿ: 1800-266-6696
ವಾಣಿಜ್ಯ ಸಿಲಿಂಡರ್ಗಳನ್ನು ಸದ್ಯ ಆದ್ಯತೆಯ ಮೇರೆಗೆ ಶಿಕ್ಷಣ ಸಂಸ್ಥೆಗಳು, ಕಾರಾಗೃಹ, ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ಗಳಲ್ಲಿ ಈವರೆಗೆ ಯಾವುದೇ ಅಭಾವ ಕಂಡುಬಂದಿಲ್ಲ. ಹೀಗಾಗಿ ಜನತೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸರ್ಕಾರ ಮಾಹಿತಿ ನೀಡಿದೆ.
karnataka LPG Gas delivery delay complaint helpline



