ಋತುಚಕ್ರದ ರಜೆಗೆ ನಿಯಮಾವಳಿಗಳನ್ನು ರೂಪಿಸಿದ ರಾಜ್ಯ ಸರ್ಕಾರ : ಎಲ್ಲಾ ಗೊಂದಲಗಳಿಗೂ ತೆರೆ

ಬೆಂಗಳೂರು: ಋತುಚಕ್ರದ ಅವಧಿಯಲ್ಲಿ ಮಹಿಳೆಯರಿಗೆ ತೊಂದರೆಯಾಗಬಾರದೆಂದು ರಾಜ್ಯ ಸರ್ಕಾರ ಮುಟ್ಟಿನ ರಜೆ ಘೋಷಣೆ ಮಾಡಿತ್ತು. ಮಹಿಳೆಯರ ಆರೋಗ್ಯ ದೃಷ್ಟಿಯಿಂದ ರಾಜ್ಯ ಸರ್ಕಾರ ಕೈಗೊಂಡ ಐತಿಹಾಸಕ ನಿರ್ಣಯ ಇದಾಗಿದೆ. ಆದರೆ ಮುಟ್ಟಿನ ರಜೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಮೂಡಿದ್ದವು. ರಜೆ ತೆಗೆದುಕೊಳ್ಳುವ ಪ್ರಕ್ರಿಯೆ ಹೇಗಿರುತ್ತದೆ ? ವೈದ್ಯಕೀಯ ಪ್ರಮಾಣ ಪತ್ರದ ಅವಶ್ಯಕತೆ ಇದೆಯೇ ? ವಯಸ್ಸಿನ ಮಿತಿ ಹೀಗೆ ನಾನಾ ಪ್ರಶ್ನೆಗಳು ಮೂಡಿದ್ದವು. ಈ ಎಲ್ಲಾ ಗೊಂದಗಳಿಗೆ ತೆರೆ ಎಳೆದಿರುವ ರಾಜ್ಯ ಸರ್ಕಾವು ಇದೀಗ ವೇತನ ಸಹಿತ ಋತುಚಕ್ರ ರಜೆ ನೀಡುವ ಕುರಿತಂತೆ ಸರ್ಕಾರದಿಂದ ಮಹತ್ವದ ಸೂಚನೆಗಳು ಹೊರಬಿದ್ದಿದೆ.

ಋತುಚಕ್ರದ ರಜೆಯನ್ನು 18ರಿಂದ 52 ವರ್ಷ ಪ್ರಾಯದ ಮಹಿಳೆಯರು ತೆಗೆದುಕೊಳ್ಳಬಹುದು ಎಂದು ಸರ್ಕಾರ ಸೂಚನೆ ನೀಡಿದೆ. ಅಲ್ಲದೇ ಈ ರಜೆಯನ್ನು ಪಡೆದುಕೊಳ್ಳಲು ಮಹಿಳೆಯರು ಯಾವುದೇ ರೀತಿಯ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯ ಇರುವುದಿಲ್ಲ. ಆದರೆ ಆಯಾ ತಿಂಗಳ ರಜೆಯನ್ನು ಅದೇ ತಿಂಗಳಲ್ಲಿ ತೆಗೆದುಕೊಳ್ಳಬೇಕು. ಹಿಂದಿನ ತಿಂಗಳ ಮುಟ್ಟಿನ ರಜೆಯನ್ನು ಮುಂದಿನ ತಿಂಗಳಿಗೆ ವರ್ಗಾವಣೆಗೊಳಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಈ ಬಾರಿ ಶಿಕ್ಷಕರಿಗಿಲ್ಲ ವರ್ಗಾವಣೆ ಭಾಗ್ಯ : ರಾಜ್ಯ ಸರ್ಕಾರದಿಂದ ಹೊರಬಿತ್ತು ಹೊಸ ಆದೇಶ

ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮುಟ್ಟಿನ ರಜೆಯ ಅಡಿಯಲ್ಲಿ ನೊಂದಣಿಯಾದ ಎಲ್ಲ ಕೈಗಾರಿಕೆ, ಕಾರ್ಖಾನೆ, ಅಂಗಡಿ, ವಾಣಿಜ್ಯ ಸಂಸ್ಥೆ ಸೇರಿದಂತೆ ಇತರೆ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ, ಕಾಯಂ, ಗುತ್ತಿಗೆ, ಹೊರಗುತ್ತಿಗೆ ಮಹಿಳಾ ಅನ್ವಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories