ನ್ಯಾಷನಲ್​ ಹೆರಾಲ್ಡ್​ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಡಿ.ಕೆ ಶಿವಕುಮಾರ್​ಗೆ ನೋಟಿಸ್​

National Herald case: ದಶಕಗಳಿಂದ ವಿಚಾರಣೆ ಹಂತದಲ್ಲಿರುವ ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಹೊಸ ಸಂಕಷ್ಟ ಎದುರಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ವಿರುದ್ಧ ಹೊಸ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ಡಿಕೆಶಿಗೂ ನೋಟಿಸ್​ ಕಳುಹಿಸಿದ್ದಾರೆ.

ಈ ಪ್ರಕರಣ ಸಂಬಂಧ ಡಿ.ಕೆ ಶಿವಕುಮಾರ್ ಪ್ರಬಲವಾದ ಮಾಹಿತಿ ಹೊಂದಿದ್ದಾರೆ ಎಂಬ ನಂಬಿಕೆ ದೆಹಲಿ ಪೊಲೀಸರದ್ದು. ಈ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್​ ನಿವಾಸಕ್ಕೆ ನೋಟಿಸ್​ ಕಳುಹಿಸಲಾಗಿದ್ದು, ಡಿಸೆಂಬರ್ 19ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಡಿ.ಕೆ ಶಿವಕುಮಾರ್​ ಹಾಗೂ ಡಿಕೆ ಸುರೇಶ್​ ಸಹೋದರರು ವೈಯಕ್ತಿಕವಾಗಿ 2.5 ಕೋಟಿ ರೂಪಾಯಿಗಳನ್ನು ಯಂಗ್​ ಇಂಡಿಯಾಗೆ ದೇಣಿಗೆ ರೂಪದಲ್ಲಿ ನೀಡಿದ್ದರು.ಅಲ್ಲದೇ ಡಿಕೆ ಅವರ ಟ್ರಸ್ಟ್​ನಿಂದಲೂ 2.5 ಕೋಟಿ ರೂಪಾಯಿ ದೇಣಿಗೆ ನೀಡಿರುವ ಆರೋಪ ಕೇಳಿ ಬಂದಿತ್ತು.

ಹೀಗಾಗಿ ಡಿಕೆ ಸಹೋದರರನ್ನು ಇಡಿ ವಿಚಾರಣೆಗೆ ಒಳಪಡಿಸಿತ್ತು. ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ವಿರುದ್ಧ ಅಕ್ಟೋಬರ್​ 3ರಂದು ಹೊಸ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದೆ.ಈ ಪ್ರಕರಣ ಸಂಬಂಧ ಡಿಕೆಶಿ ಪ್ರಬಲವಾದ ಮಾಹಿತಿಯೊಂದನ್ನು ಹೊಂದಿದ್ದಾರೆ ಎನ್ನಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ.

Also Read: ಕಾಂಗ್ರೆಸ್​ ನಾಯಕ ಮಿಥುನ್​ ರೈ ಶಿಸ್ತು ಉಲ್ಲಂಘನೆ : ನೋಟಿಸ್​ ಜಾರಿ ಮಾಡಿದ ಎಐಸಿಸಿ

1998ರಲ್ಲಿ ಜವಹರಲಾಲ ನೆಹರೂ ಅವರು ಸ್ಥಾಪಿಸಿದ ಪತ್ರಿಕೆ ಇದಾಗಿದ್ದು , AJL ಈ ಪತ್ರಿಕೆಯ ಪ್ರಕಾಶನದ ಜವಾಬ್ದಾರಿ ಪಡೆದಿತ್ತು. 2008ರಲ್ಲಿ ಆರ್ಥಿಕ ಸಂಕಷ್ಟದಿಂದ AJL ಈ ಪತ್ರಿಕೆ ಸ್ಥಗಿತಗೊಳಿಸಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷದಿಂದ 90.25 ಕೋಟಿ ರೂಪಾಯಿ ಸಾಲ ಪಡೆದುಕೊಂಡಿತ್ತು.

ಕಾಂಗ್ರೆಸ್​ ಪಕ್ಷವು AJL ಕಂಪನಿಗೆ ನೀಡಿದ್ದ ಸಾಲವನ್ನು ಕಾಂಗ್ರೆಸ್​ ಪಕ್ಷವು 50 ಲಕ್ಷ ರೂಪಾಯಿಗಳಿಗೆ ಯಂಗ್​ ಇಂಡಿಯಾ ಕಂಪನಿಗೆ ವರ್ಗಾಯಿಸಿದೆ ಎಂಬುದು ಸುಬ್ರಮಣಿಯನ್​ ಸ್ವಾಮಿ ಅವರ ಆರೋಪವಾಗಿದೆ . ಈ ಯಂಗ್​ ಇಂಡಿಯಾ ಕಂಪನಿಯಲ್ಲಿ ರಾಹುಲ್​ ಗಾಂಧಿ ಹಾಗೂ ಸೋನಿಯಾ ಗಾಂಧಿ ಶೇಕಡಾ 76ರಷ್ಟು ಷೇರುಗಳನ್ನು ಹೊಂದಿದ್ದಾರೆ.

Also Read: Datta jayanti : ಕಾಫಿನಾಡಲ್ಲಿ ದತ್ತಜಯಂತಿಗೆ ವೈಭವದ ತೆರೆ : ದತ್ತಗೋರಿ ತೆರವಿಗೆ ದತ್ತಭಕ್ತರ ಆಗ್ರಹ

ಈ ಸಾಲದ ವರ್ಗಾವಣೆಯಿಂದ 2 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿಯನ್ನು ಯಂಗ್​ ಇಂಡಿಯಾ ಕಂಪನಿಯು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪವನ್ನು ಸೋನಿಯಾ ಮತ್ತು ರಾಹುಲ್​ ಗಾಂಧಿ ಎದುರಿಸುತ್ತಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories