Parappana Agrahara Jail : ವಿಲಾಸಿ ತಾಣವಾಗಿ ಬದಲಾಯ್ತಾ ಪರಪ್ಪನ ಅಗ್ರಹಾರ : ಲಷ್ಕರ್​ ಉಗ್ರನಿಗೆ ಮೊಬೈಲ್​ ಬಳಕೆಗೆ ಅವಕಾಶ

Parappana Agrahara Jail : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಟೋರಿಯಸ್​ ಕೈದಿಗಳಿಗೆ ಮೊಬೈಲ್​ ಫೋನ್​ ಬಳಕೆಗೆ ದೊರೆತ ವಿಡಿಯೋವೊಂದು ವೈರಲ್​ ಆಗಿದ್ದು ಕಳವಳಕ್ಕೆ ಕಾರಣವಾಗಿದೆ. ವಿಕೃತ ಕಾಮಿ ಉಮೇಶ್​ ರೆಡ್ಡಿ ಮೊಬೈಲ್​ ಬಳಕೆ ಮಾಡುತ್ತಾ ಸ್ಮಾರ್ಟ್ ಟಿವಿ ನೋಡುತ್ತಿರುವ ಹಾಗೂ ಲಷ್ಕರ್​ ಸಂಘಟನೆಯ ಉಗ್ರ ಮೊಬೈಲ್​ ಬಳಕೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡಿದೆ.

ಕೈದಿಗಳ ಪಾಲಿಗೆ ಪ್ರಾಯಶ್ಚಿತದ್ದ ಕೇಂದ್ರವಾಗಬೇಕಿದ್ದ ಪರಪ್ಪನ ಅಗ್ರಹಾರ ಕೈದಿಗಳ ಪಾಲಿಗೆ ಸ್ವರ್ಗವಾಗಿದೆ. ಆದರೆ ಪರಪ್ಪನ ಅಗ್ರಹಾರದಲ್ಲಿರುವ ಐಸಿಸ್​ ಸಂಘಟನೆಯ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​​ ಉಗ್ರ ಜುಹಾದ್​​ ಹಮೀದ್​ ಶಕೀಲ್​ ಮನ್ನಾ ಎಂಬಾತ ಕೂಡ ಬಿಂದಾಸ್​ ಲೈಫ್​ ಎಂಜಾಯ್​ ಮಾಡ್ತಿರೋದು ಕಳವಳಕ್ಕೆ ಕಾರಣವಾಗಿದೆ.

ಈ ಹಿಂದೆ ನಟ ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ದೊರಕುತ್ತಿರುವ ವಿಡಿಯೋ ವೈರಲ್​ ಆದ ಬಳಿಕ ಸುಪ್ರೀಂ ಕೋರ್ಟ್ ಗೃಹ ಇಲಾಖೆಯನ್ನೇ ತರಾಟೆಗೆ ತೆಗೆದುಕೊಂಡಿತ್ತು. ಆದರೆ ಇದೀಗ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳೇ ಈ ರೀತಿ ವಿಲಾಸಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿರೋದು ನೋಡುತ್ತಿದ್ದರೆ ಅಪರಾಧಿಗಳಿಗೆ ಪರಪ್ಪನ ಅಗ್ರಹಾರ ಸ್ವರ್ಗಕ್ಕೆ ಸಮ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

Also Read : ಸಲಿಂಗಿ ತಾಯಿಯಿಂದಲೇ ಮಗುವಿನ ಹತ್ಯೆ : ಪ್ರೇಯಸಿ ಸಮೇತ ಬಂಧನ

ಇನ್ನು ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ನಿವೃತ್ತ ಪೊಲೀಸ್​ ಅಧಿಕಾರಿ ಎಸ್​.ಕೆ ಉಮೇಶ್​ ಎಂಬವರು ಮಾತನಾಡಿದ್ದು, ಜೈಲಿನಲ್ಲಿ ಮೊಬೈಲ್​ ಬಳಕೆಗೆ ಅವಕಾಶ ನೀಡುವುದು ಅಕ್ಷಮ್ಯ ಅಪರಾಧ.

ಜೈಲಿನಲ್ಲಿ ವ್ಯವಸ್ಥೆ ಸುಧಾರಿಸಬೇಕು ಎಂದರೆ ಜೈಲು ಅಧೀಕ್ಷಕರಾಗಿ ಐಪಿಎಸ್​ ಅಧಿಕಾರಿಗಳೇ ನೇಮಕಗೊಳ್ಳಬೇಕು. ಆಗ ಮಾತ್ರ ಈ ರೀತಿಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವಿದೆ. ಈ ರೀತಿಯ ಚಟುವಟಿಕೆಗಳು ಜೈಲಿನ ಮೂಲ ಉದ್ದೇಶವನ್ನೇ ಹಾಳುಮಾಡುವಂತದ್ದು. ಈ ಅಕ್ರಮಗಳಿಗೆ ಕಡಿವಾಣ ಹಾಕುವ ಕಡೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಹೇಳಿದ್ದಾರೆ.

Also Read : ಬೇಲಿಕೇರಿ ಅದಿರು ಪ್ರಕರಣ : ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ 21 ಕೋಟಿ ಆಸ್ತಿ ಜಪ್ತಿ

Parappana Agrahara Jail Under Scrutiny LeT Terrorist Allegedly Used Mobile Phone

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories