ಯಕ್ಷಗಾನ ಕಲಾವಿದರು ಸಲಿಂಗ ಕಾಮಿಗಳು : ಸ್ತ್ರೀವೇಷಧಾರಿಗಳ ಮೇಲೆ ಭಾಗವತರ ಸೇಡು – ನಾಲಿಗೆ ಹರಿಬಿಟ್ಟ ಬಿಳಿಮಲೆ

purushottam bilimale contraversy : ಮೈಸೂರು : ಯಕ್ಷಗಾನ ಕಲೆ ಕರಾವಳಿ ಭಾಗದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಆದರೆ ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗ ಕಾಮಿಗಳು. ಸ್ತ್ರೀ ವೇಷಧಾರಿಗಳು ಸಲಿಂಗಕಾಮ ನಿರಾಕರಿಸಿದ್ರೆ ಭಾಗವತರು ಅವರ ಮೇಲೆ ಸೇಡು ತೀರಿಸಿಕೊಳ್ತಾ ಇದ್ರು ಎನ್ನುವ ಮೂಲಕ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮನೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ. ಯಕ್ಷಗಾನ ಕಲಾವಿದರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಈ ಮೂಲಕ ಹೊಸ ವಿವಾದವನ್ನೇ ಸೃಷ್ಟಿಸಿದ್ದಾರೆ. ಯಕ್ಷಗಾನ ಕಲಾವಿದರ ಪೈಕಿ ಬಹುತೇಕರು ಸಲಿಂಗ ಕಾಮಿಗಳು. ಯಕ್ಷಗಾನದಲ್ಲಿ ಅಂತಹ ಅನಿವಾರ್ಯತೆ ಇತ್ತು. ಸ್ತ್ರೀ ವೇಷಧಾರಿಗಳು ಸಲಿಂಗ ಕಾಮವನ್ನು ನಿರಾಕರಿಸಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ನೀಡುತ್ತಿಲ್ಲರಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ತಿಂಗಳಿಗೆ 2000 ರೂಪಾಯಿ ನಿಮ್ಮ ಕೈಗೆ : ಇದು ಗೃಹಲಕ್ಷ್ಮೀ ಯೋಜನೆಯಲ್ಲ.. !

ಅಲ್ಲದೇ ಸ್ತ್ರೀ ವೇಷಧಾರಿಯ ವಿರುದ್ದ ಸೇಡು ತೀರಿಸಿಕೊಳ್ಳಲಾಗುತ್ತಿದೆ. ಯಕ್ಷಾಗಾನದ ಮೇಲದಲ್ಲಿ ಅವಕಾಶ ಇಲ್ಲದೇ ಹೋದರೆ ಬದುಕೇ ಇಲ್ಲ ಎನ್ನುವ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದು ಆರೋಪಿಸಿದ್ದಾರೆ.

ವರ್ಷದಲ್ಲಿ ಸುಮಾರು ಆರೇಳು ತಿಂಗಳು ಯಕ್ಷಗಾನ ಕಲಾವಿದರು ಮೇಳದ ತಿರುಗಾಟದಲ್ಲಿ ಇರುತ್ತಾರೆ. ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳು ಒತ್ತಡದಲ್ಲಿ ಇರುತ್ತಿದ್ದು, ಅವರ ಮೇಲೆ ಇತರರಿಗೂ ಮೋಹ ಇರುತ್ತಿತ್ತು ಎಂದಿದ್ದಾರೆ.

ನಮಗೆಲ್ಲಾ ಮೊದಲ ಕ್ರಶ್‌ ಕೂಡ ಯಕ್ಷಗಾನ ಕಲಾವಿದರು. ಈಗೆಲ್ಲಾ ದೀಪಿಕಾ ಪಡುಕೋಣೆ ತನ್ನ ಮೊದಲ ಕ್ರಶ್‌ ಅಂತಾರೆ, ಆದರೆ ನಮಗೆ ಅಂದು ಯಕ್ಷಗಾನದ ಸ್ತ್ರೀ ವೇಷಧಾರಿಗಳೇ ಮೊದಲ ಕ್ರಶ್‌ ಆಗಿದ್ದರು. ನಾವು ಚಿಕ್ಕದಿದ್ದಾಗ ಅವರ ರಂಗದ ಮೇಲೆ ಕುಣಿದಾಗ ಚಂದವೇ ಚಂದ. ಕಲಾವಿದ- ಕಲಾವಿದರ ನಡುವೆ ಒಂದು ಸಂಬಂಧ ಇರುತ್ತದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ತುಮಕೂರು – ಬೆಂಗಳೂರು ಮೆಟ್ರೋ ವಿರೋಧಿಸಿದ ತೇಜಸ್ವಿಸೂರ್ಯ

ಕಲೆ, ದೈಹಿಕ ಕಾಮನೆಗಳು ಎದುರುಕಾಣುವ ಬಗೆಗಿಂತ, ಪ್ರಕಟಗೊಳ್ಳುವ ಬಗೆ ಇದೆಯಲ್ಲಾ, ಅದನ್ನು ವಿದ್ವಾಂಸರು ಅದರನ್ನು ಬರೆಯುವ ಬಗೆಯನ್ನು ಕಲಿತರೆ ಚೆಂದ. ಯಕ್ಷಗಾನ ಕಲಾವಿದ ಮೇಳಕ್ಕೆಂದು ಹೋಗಿ ವಾಪಾಸು ಬಂದಾಗ ಹಲವರಿಗೆ ಮನೆಯೇ ಇರುತ್ತಿರಲಿಲ್ಲ. ಸಾಕಷ್ಟು ದುರಂತ ಕಾವ್ಯಗಳು ಅವರ ಬದುಕಿನಲ್ಲಿದೆ. ಆದರೆ ಅದನ್ನು ಗ್ರಹಿಸುವ ಶಕ್ತಿ ಸಮಾಜಕ್ಕೆ ಇಲ್ಲದಂತಾಗಿದೆ ಎಂದಿದ್ದಾರೆ.

purushottam bilimale contraversy statemenet about Yakshagana

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories