Rain Alert : ಕರಾವಳಿಗೆ ತಟ್ಟಿದ ಸುಪರ್ ಎಲ್ ನಿನೋ ಚಂಡಮಾರುತದ ಎಫೆಕ್ಟ್‌ : ಇನ್ನೂ 10 ದಿನ ಬಾರೀ ಮಳೆ

super el nino cyclone : ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುತ್ತಿದೆ. ಅಲ್ಲದೇ ಕೇರಳದ ಕಾಸರಗೋಡಿನಲ್ಲಿಯೂ ಮಳೆ ಬಿರುಸುಗೊಂಡಿದೆ.

ಉಡುಪಿ : ವಾಯುಭಾರ ಕುಸಿತದ ಪರಿಣಾಮದಿಂದ ಉಂಟಾಗಿರುವ ಸುಪರ್‌ ಎಲ್‌ ನಿನೋ ಚಂಡಮಾರುತ ( super el nino cyclone ) ದಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳ ಕಾಲ ಬಾರೀ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಈ ಕುರಿತು ಮಾಹಿತಿಯನ್ನು ನೀಡಿದೆ.

ಕಳೆದ ಮೂರ್ನಾಲ್ಕು ದಿನಗಳಿಂದಲೂ ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುತ್ತಿದೆ. ಅಲ್ಲದೇ ಕೇರಳದ ಕಾಸರಗೋಡಿನಲ್ಲಿಯೂ ಮಳೆ ಬಿರುಸುಗೊಂಡಿದೆ. ಇತ್ತ ಮಲೆನಾಡಿನ ಜಿಲ್ಲೆಗಳಾದ ಹಾಸನ, ಕೊಡುಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಮಳೆಯ ಮುನ್ಸೂಚನೆ ನೀಡಿದೆ.

ಸೂಪರ್‌ ಎಲ್‌ ನಿನೋ ಚಂಡಮಾರುತದ ಪರಿಣಾಮದಿಂದಲೇ ಮುಂದಿನ 10 ದಿನಗಳ ಕಾಲ ಬಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಜುಲೈನಲ್ಲಿ ಮಳೆಯ ಕೊರತೆ : ಅನ್ನದಾತರಿಗೆ ಆತಂಕ

ಸಾಮಾನ್ಯವಾಗಿ ವರ್ಷಂಪ್ರತಿ ಕೇರಳಕ್ಕೆ ಮುಂಗಾರು ಎಂಟ್ರಿ ಆದ ಕೂಡಲೇ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆ ಆರಂಭವಾಗುತ್ತಿತ್ತು. ಅದ್ರಲ್ಲೂ ಜೂನ್‌ ಹಾಗೂ ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿತ್ತು. ಆದರೆ ಜೂನ್‌ ಆರಂಭದಲ್ಲಿ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದರೂ ಕೂಡ, ನಂತರದಲ್ಲಿ ಕರ್ನಾಟಕ, ಅದ್ರಲ್ಲೂ ಕರ್ನಾಟಕ ಕರಾವಳಿ ಭಾಗ ತೀವ್ರ ಮಳೆಯ ಕೊರತೆಯನ್ನು ಎದುರಿಸಿತ್ತು. ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರು, ಇದೀಗ ಮಳೆಯ ಕೊರತೆಯಿಂದಾಗಿ ಆತಂಕಕ್ಕೆ ಸಿಲುಕಿದ್ದಾರೆ.

ಕರ್ನಾಟದಲ್ಲಿ ಜುಲೈ 21ರಿಂದ ಪುಷ್ಯ ಮಳೆ ಆರಂಭ

ಸಾಮಾನ್ಯವಾಗಿ ವರ್ಷಂಪ್ರತಿ ಪುನರ್ವಸು ಮಳೆ ಬಾರೀ ಆರ್ಭಟವನ್ನು ನೀಡುತ್ತಿತ್ತು. ಆದರೆ ಈ ಬಾರಿ ಪುನರ್ವಸು ಮಳೆ ಕೊರತೆಯನ್ನು ಉಂಟು ಮಾಡಿದೆ. ಜುಲೈ 20ರಂದು ಪುನರ್ವಸು ಮಳೆ ಮುಗಿಯಲಿದ್ದು, ಜುಲೈ 21ರಿಂದ ಪುಷ್ಯ ಮಳೆ ಆರಂಭವಾಗಲಿದೆ. ರೈತರು ಪುಷ್ಯ ಮಳೆಯ ನಿರೀಕ್ಷೆಯಿದ್ದು, ಪುಷ್ಯ ಕೂಡ ಕೈ ಕೊಟ್ರೆ ಬರಗಾಲದ ಆತಂಕ ಕಾಡಲಿದೆ.

Rain Alert super el nino cyclone effect karnataka

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »