Salumarada Thimmakka : ಪದ್ಮಶ್ರೀ, ಶತಾಯುಷಿ ಸಾಲು ಮರದ ತಿಮ್ಮಕ್ಕ ವಿಧಿವಶ

ಬೆಂಗಳೂರು : ಮರಗಳಲ್ಲಿ ಮಕ್ಕಳನ್ನು ಕಾಣುತ್ತಾ ವೃಕ್ಷಮಾತೆ ಎಂದೇ ಬಿರುಂದಾಕಿತರಾಗಿದ್ದ ನಾಡೋಜ, ಶತಾಯುಷಿ, ಪದ್ಮಶ್ರೀ ಪುರಸ್ಕೃತ ಸಾಧಕಿ ಸಾಲುಮರದ ತಿಮ್ಮಕ್ಕ (Salumarada Thimmakka Passes away) ಇಂದು ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ 114 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದ ಹಿನ್ನೆಲೆಯಲ್ಲಿ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಾಲು ಮರದ ತಿಮ್ಮಕ್ಕ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ವೃಕ್ಷಮಾತೆ ಎಂದೇ ಖ್ಯಾತಿ ಗಳಿಸಿದ ಸಾಲುಮರದ ತಿಮ್ಮಕ್ಕ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ಹುಲಿಕಲ್​ ಗ್ರಾಮದ ಚಿಕ್ಕಯ್ಯ ಜೊತೆ ವಿವಾಹವಾಗಿದ್ದ ಸಾಲುಮರದ ತಿಮ್ಮಕ್ಕರಿಗೆ ಮಕ್ಕಳಿರಲಿಲ್ಲ.

ಇದನ್ನೂ ಓದಿ : ಕಂಬಳ : 24 ಗಂಟೆ ಧ್ವನಿವರ್ಧಕ ಬಳಕೆ, ಸಬ್‌ ಜ್ಯೂನಿಯರ್‌ ಸ್ಪರ್ಧೆ ರದ್ದು

ಹೀಗಾಗಿ ಮರಗಳಲ್ಲಿ ಮಕ್ಕಳನ್ನು ಕಾಣುವ ನಿರ್ಧಾರಕ್ಕೆ ಬಂದ ಈ ದಂಪತಿ ರಸ್ತೆಯ ಬದಿಗಳಲ್ಲಿ ಆಲದ ಮರಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಕಾಣಲು ನಿರ್ಧರಿಸಿದರು. ಸಾಲುಮರದ ತಿಮ್ಮಕ್ಕರ ಈ ಪರಿಸರ ಪ್ರೇಮಕ್ಕೆ ಅವರಿಗೆ ಸಾಲು ಸಾಲು ಪ್ರಶಸ್ತಿಗಳು ಒದಗಿಬಂದಿವೆ.

2019ರಲ್ಲಿ ಸಾಲುಮರದ ತಿಮ್ಮಕ್ಕರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಇನ್ನುಳಿದಂತೆ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಸಾಕಷ್ಟು ರಾಷ್ಟ್ರ ಮಟ್ಟದ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ : ಬಿಹಾರ ಚುನಾವಣೆ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು : ಕ್ಲೀನ್‌ ಸ್ವೀಪ್‌ ಮಾಡ್ತಾರಾ ಮೋದಿ

2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ತಿಮ್ಮಕ್ಕನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಸಾಲುಮರದ ತಿಮ್ಮಕ್ಕರ ನಿಧನಕ್ಕೆ ರಾಜ್ಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Salumarada Thimmakka Passes away at age 114

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories