ವಿದ್ಯಾರ್ಥಿನಿ ಮೇಲೆ ಜೂನಿಯರ್‌ ವಿದ್ಯಾರ್ಥಿಯಿಂದ ಅತ್ಯಾ*ಚಾರ : ವಿದ್ಯಾರ್ಥಿ ಅರೆಸ್ಟ್‌

Bengaluru Student Raped : ಬೆಂಗಳೂರು : ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಶೌಚಾಲಯಕ್ಕೆ ಎಳೆದೊಯ್ದ ಅದೇ ಕಾಲೇಜಿನ ಆಕೆಯ ಜ್ಯೂನಿಯರ್ ವಿದ್ಯಾರ್ಥಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಅಲ್ಲದೇ ಆಕೆಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆಯು ರಾಜ್ಯ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ನಡೆದಿದೆ.

ಈ ಕುರಿತು ಹನುಮಂತನಗರ ಪೊಲೀಸ್​ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾಳೆ. ಸಂತ್ರಸ್ತ ವಿದ್ಯಾರ್ಥಿನಿಯನ್ನು ಕಾಲೇಜಿನ ಶೌಚಾಲಯದ ಬಳಿ ಎಳೆದೊಯ್ದ ಆರೋಪಿ ಜೀವನ್​ ಗೌಡ ಎಂಬಾತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಠಾಣಾ ಪೊಲೀಸರು ಆರೋಪಿ ಜೀವನಗೌಡನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್​ 10ರಂದು ಈ ಘಟನೆ ಸಂಭವಿಸಿದ್ದು ಅಂದು ಕಾಲೇಜಿಗೆ ಹಾಜರಾಗಿದ್ದ ಸಂತ್ರಸ್ತೆಯು ಊಟದ ವಿರಾಮದ ಸಂದರ್ಭದಲ್ಲಿ ಆರೋಪಿ ಜೀವನ್​ ಗೌಡನಿಂದ ಕೆಲವು ವಸ್ತುಗಳನ್ನು ಪಡೆದುಕೊಳ್ಳುವವಳಿದ್ದಳು.

ಇದನ್ನೂ ಓದಿ: ಕರುಳು ಹಿಂಡುತ್ತೆ ಸಾವಿಗೂ ಮುನ್ನ ಪಾಪಿ ಪತಿಗೆ ಕೃತಿಕಾ ರೆಡ್ಡಿ ಕಳುಹಿಸಿದ ಸಂದೇಶ : ಏನದು ಮೆಸೇಜ್‌ ?

ಅಂತೆಯೇ ಆತನನ್ನು ಭೇಟಿಯಾದ ಸಂದರ್ಭದಲ್ಲಿ ನಿನ್ನ ಬಳಿ ಸ್ವಲ್ಪ ಮಾತನಾಡಬೇಕು ಬಾ ಎಂದು ಆಕೆಯನ್ನು ಜೀವನ್​ 7ನೇ ಮಹಡಿಯಲ್ಲಿರುವ ಪಿಜಿ ಬ್ಲಾಕ್​ಗೆ ಕರೆದೊಯ್ದಿದ್ದಾನೆ. ಅಲ್ಲದೇ ಆಕೆಯನ್ನು ಚುಂಬಿಸಲು ಮುಂದಾಗಿದ್ದಾನೆ.

ಜೀವನ್​ ಗೌಡನ ತಪ್ಪು ಇರಾದೆಯನ್ನು ಅರಿತ ಸಂತ್ರಸ್ತೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾಳೆ. ಆದರೆ ಆರನೇ ಮಹಡಿಯವರೆಗೂ ಆಕೆಯನ್ನು ಅಟ್ಟಿಸಿಕೊಂಡು ಬಂದ ಆರೋಪಿ ಜೀವನ್​ ಗೌಡ ಬಲವಂತವಾಗಿ ಆಕೆಯನ್ನು ಶೌಚಾಲಯದ ಒಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ವಿರೋಧಿಸಿದ್ದಕ್ಕೆ ಮೂತ್ರ ಕುಡಿಸಿದ ಪಾಪಿಗಳು

ಪುರುಷರ ಶೌಚಾಲಯದಲ್ಲಿ ಸಂತ್ರಸ್ತೆಯ ಬಳಿ ಅಸಹಜ ಲೈಂಗಿಕ ಕ್ರಿಯೆಗೆ ಜೀವನ್​ ಗೌಡ ಪೀಡಿಸಿದ್ದಾನೆ. ಅಲ್ಲದೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.ಈ ವಿಚಾರವನ್ನು ವಿದ್ಯಾರ್ಥಿನಿ ಆಪ್ತ ಸ್ನೇಹಿತರು ಹಾಗೂ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ಹನುಮಂತನಗರ ಪೊಲೀಸ್​ ಠಾಣೆಗೆ ತೆರಳಿ ವಿದ್ಯಾರ್ಥಿನಿ ಆರೋಪಿ ವಿರುದ್ಧ ದೂರು ನೀಡಿದ್ದಾಳೆ.

Bengaluru Student Raped Inside Campus, A junior student of a famous college in has been accused of raping a senior female student

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories