RSSಗೆ ನಿಷೇಧ, ಪ್ರಿಯಾಂಕ ಖರ್ಗೆ ಪತ್ರ : ಸುನಿಲ್ ಕುಮಾರ್ ಆಕ್ರೋಶ
ಬೆಂಗಳೂರು: RSS: ಆರ್ ಎಸ್ ಎಸ್ ಶತಮಾನೋತ್ಸವ ಆಚರಿಸುತ್ತಿದೆ. ಕಳೆದ ನೂರು ವರ್ಷಗಳಿಂದ ರಾಷ್ಡ್ತ ಭಕ್ತಿಯ ಸಂಘಟನೆ ಆಗಿ ರೂಪುಗೊಂಡಿದೆ. ಇಂತಹ ಸಂಘಟನೆಯ ನಿಷೇಧದ ಬಗ್ಗೆ ಪತ್ರ ಬರೆದಿರುವುದು ಪ್ರಿಯಾಂಕ ಖರ್ಗೆಯ ಅವಿವೇಕತನ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಆರ್ ಎಸ್ಎಸ್(RSS) ಕೊಟ್ಟ ಕೊಡುಗೆಗಳು ನಮಗೆ ಗೊತ್ತಿದೆ. ಯಾವುದನ್ನೂ ಅರ್ಥ ಮಾಡಿಕೊಳ್ಳದೆ ಆರ್ ಎಸ್ಎಸ್ ವಿರುದ್ದ ವಿನಾಕಾರಣ ಟೀಕೆಗಳನ್ನು ಮಾಡುತ್ತಿರುವುದು ಇದೆ ಮೊದಲೇನಲ್ಲ ಎಂದಿದ್ದಾರೆ.
ಆರ್ ಎಸ್ ಎಸ್ ಬ್ಯಾನ್ ಮಾಡಬೇಕು, ಆರ್ ಎಸ್ ಎಸ್ ಚಟುವಟಿಕೆಯನ್ನು ಬ್ಯಾನ್ ಮಾಡಬೇಕು ಎಂದು ಪ್ರಿಯಾಂಕ ಖರ್ಗೆ ಪತ್ರ ಬರೆದಿದ್ದಾರೆ. ನಿಮ್ಮ ತಂದೆ ಗೃಹ ಸಚಿವರಾಗಿ ಇದ್ದಾಗಲೇ ಏನು ಮಾಡುವುದಕ್ಕೂ ಸಾಧ್ಯವಾಗಿಲ್ಲ. ಅಧಿಕಾರದ ಮದ, ಸೊಕ್ಕಿನ ಕಾರಣದಿಂದಾಗಿ ಪದೇ ಪದೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗರಂ ಆಗಿದ್ದಾರೆ.
Also Read: ಆರ್ ಎಸ್ ಎಸ್ ಬ್ಯಾನ್ ಮಾಡಿ : ಸಿಎಂ ಸಿದ್ದರಾಮಯ್ಯಗೆ ಪ್ರಿಯಾಂಕ ಖರ್ಗೆ ಪತ್ರ
ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ ಅನ್ನೋ ಕಾರಣಕ್ಕೆ ಇಂತಹ ದುರಹಂಕಾರದ ಹೇಳಿಕೆ ನೀಡ್ತಾ ಇರೋದು ನಿಮ್ಮ ವೈಯಕ್ತಿಕ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ. ನೀವೂ ಶಾಶ್ವತ ಅಲ್ಲಾ, ನಿಮ್ಮ ಅಧಿಕಾರವೂ ಶಾಶ್ವತ ಅಲ್ಲ. ಆದರೆ ಆರ್ ಎಸ್ ಎಸ್ ವಿಚಾರಧಾರೆಗಳು ಶಾಶ್ವತ ಅನ್ನೋದನ್ನು ಮರೆಯಬೇಡಿ.
ಪ್ರಿಯಾಂಕ ಖರ್ಗೆ ಕಳೆದ ಎರಡೂವರೆ ವರ್ಷಗಳಿಂದ ತಮ್ಮ ಇಲಾಖೆಯ ಮೂಲಕ ಜನರಿಗೆ ಹತ್ತಿರ ಆಗುವ ಯಾವುದೇ ಕೆಲಸಗಳನ್ನೂ ಪ್ರಿಯಾಂಕ ಖರ್ಗೆ ಮಾಡಿಯೇ ಇಲ್ಲ. ಇಲಾಖೆ ಸಂಪೂರ್ಣವಾಗಿ ಸತ್ತು ಹೋಗಿರುವ ಪರಿಸ್ಥಿತಿ ಇದೀಗ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿದೆ ಎಂದು ಆರೋಪಿಸಿದ್ದಾರೆ.
Also Read: ಜಾತೀ ಸಮೀಕ್ಷೆ ಎಡವಟ್ಟು, ಸತ್ತ ಸಿಬ್ಬಂದಿಗೆ ಸಮೀಕ್ಷೆಯ ಡ್ಯೂಟಿ..!
ಜನರಿಗೆ ಹತ್ತಿರವಾಗುವ ಯಾವುದೇ ಕಾರ್ಯವನ್ನು ಮಾಡದೆ ಪದೇ ಪದೇ ಆರ್ ಎಸ್ ಎಸ್ ಅನ್ನು ಟೀಕೆ ಮಾಡುವ ಮೂಲಕ ತಾನು ಜೀವಂತವಾಗಿ ಇದ್ದೇನೆ ಅನ್ಜುವುದನ್ಮು ತೋರಿಸುವ ಕೆಲಸವನ್ನು ಪ್ರಿಯಾಂಕ ಖರ್ಗೆ ಅವರು ಮಾಡುತ್ತಿದ್ದಾರೆ.
ಬೆಂಗಳೂರು ಮಾತ್ರವಲ್ಲ ರಾಜ್ಯದಾದ್ಯಂತ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಎರಡೂವರೆ ವರ್ಷದಲ್ಲಿ ಒಂದೇ ಒಂದು ಗುಂಡಿ ಮುಚ್ಚದೇ ಇರುವುದಕ್ಕೆ ಪ್ರಿಯಾಂಕ ಖರ್ಗೆ ಅವರ ವೈಫಲ್ಯವೇ ಕಾರಣ ಎಂದಿದ್ದಾರೆ.



