Weight Loss : ನಿಮಗಿದು ಗೊತ್ತಾ? ಉತ್ತಮ ಊಟದ ಸಮಯದಿಂದಲೂ ತೂಕ ಇಳಿಸಬಹುದು ಎಂದು!!

ತೂಕ ಏರಿಕೆಯು(Weight gain) ಕೆಲವೊಮ್ಮೆ ಬಹಳ ಮುಜುಗರವನ್ನು ತರುತ್ತದೆ. ಅದಕ್ಕೆ ತೂಕ ಇಳಿಸಲು (Weight Loss) ಹರಸಾಹಸ ಪಡುತ್ತಾರೆ. ಅಂತಹವರಲ್ಲಿ ತೂಕ ಇಳಿಸುವ ಬಯಕೆ ಸಾಮಾನ್ಯವಾದದ್ದು. ಆಹಾರ ಸೇವನೆಯ ಯೋಜನೆಗಳು ಮತ್ತು ವ್ಯಾಯಮದ ನಿಯಮಗಳು ಪ್ರತಿ ಸೆಕೆಂಡಿಗೂ ಬದಲಾಯಿಸುತ್ತಾ, ಏನು ಮಾಡಬೇಕು, ಏನು ಮಾಡಬಾರದು, ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಅನ್ನುವಂತಹ ಅನೇಕ ವಿಷಯಗಳಿಗೆ ತಲೆಕೆಡಿಸಿಕೊಳ್ಳುತ್ತಿರುತ್ತಾರೆ. ತೂಕ ಇಳಿಸುವ ಧಾವಂತದಲ್ಲಿ ಜನರು ಇನ್‌ಸ್ಟಂಟ್‌ ವಿಧಾನಗಳನ್ನೇ ಅನುಸರಿಸುತ್ತಾರೆ ಆದರೆ, ಅದರ ಆಯಸ್ಸು ಕೂಡಾ ಕಡಿಮೆಯೇ. ಒಳ್ಳೆಯ ಆರೋಗ್ಯಕ್ಕಾಗಿ ನೆನಪಿಡಲೇಬೇಕಾದ ಅತೀ ಮುಖ್ಯ ವಿಷಯವೆಂದರೆ ತೂಕ ಇಳಿಕಾ ಕ್ರಮದಲ್ಲಿ ದಿಢೀರೆಂದು ಸಿಗುವ ಫಲಿತಾಂಶದಿಂದ ಯಾವುದೇ ಪ್ರಯೋಜನವಿಲ್ಲ. ಜೀವನಶೈಲಿಯಲ್ಲೇ ಗುರುತರವಾದ ಬದಲಾವಣೆ ಅಗತ್ಯ.

ಇದರ ಜೊತೆಗೆ ಏನನ್ನು ತಿನ್ನಬೇಕು ಮತ್ತು ಯಾವಾಗ ತಿನ್ನಬೇಕು ಎನ್ನುವುದು ಮುಖ್ಯ. ಯಾವ ಸಮಯದಲ್ಲಿ ತಿನ್ನಬೇಕು ಎನ್ನುವುದು ನಮ್ಮ ಜೀರ್ಣಕ್ರಿಯೆ ಮತ್ತು ಚಯಾಪಚಯಕ್ರಿಯೆ ಇವೆರಡಕ್ಕೂ ಅಷ್ಟೇ ಪ್ರಮುಖವಾಗಿದೆ.

ಸಮಯ ಪಾಲನೆ:
ಗಡಿಯಾರ ನೋಡಿ ಎಲ್ಲವನ್ನು ನಿಯಂತ್ರಿಸುವ ಕಟ್ಟುನಿಟ್ಟಿನ ದಿನಚರಿಯನ್ನು ಪಾಲಿಸುವುದು ಸಾಧ್ಯವಿಲ್ಲ. ಅದೇನೇ ಇರಲಿ, ಬೆಳಗ್ಗೆ ಎದ್ದು ಒಂದು ಗಂಟೆಯೊಳಗೆ ಉಪಹಾರವನ್ನು ಸೇವಿಸುವುದು ಅತೀ ಅವಶ್ಯ ಅನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಿ. ಮಧ್ಯಾಹ್ನದ ಊಟವನ್ನು 1.30 ರಿಂದ 2 ಗಂಟೆಯೊಳಗೆ ಸೇವಿಸಬೇಕು. ರಾತ್ರಿ ಊಟವನ್ನು 6 ಗಂಟೆಯ ಆಸುಪಾಸಿನಲ್ಲಿ ಸೇವಿಸುವುದು ಸರಿಯಾದ ಸಮಯ ಆದರೆ ಒಂದರ್ಧ ಗಂಟೆ ಹೆಚ್ಚಾದರೆ ತೊಂದರೆಯಿಲ್ಲ. ನಿಮ್ಮ ಉತ್ತಮ ಆರೋಗ್ಯ ಮತ್ತು ಫಿಟ್ನೆಸ್‌ನಲ್ಲಿ ಊಟದ ಸಮಯವು ಬಹಳ ಮಹತ್ವದ ಪಾತ್ರವಹಿಸುತ್ತದೆ.

ಇದನ್ನೂ ಓದಿ :Bottle Gourd Benefits : ಬೇಸಿಗೆಯ ಸೂಪರ್‌ ತರಕಾರಿ : ಸೋರೆಕಾಯಿಯ ಈ 5 ಪ್ರಯೋಜನಗಳು ನಿಮಗೆ ಗೊತ್ತೇ?

ತಿಂಡಿಗಳು:
ನಮ್ಮಲ್ಲಿ ಹಲವರಿಗೆ ಮಧ್ಯರಾತ್ರಿ ಅಥವಾ ದಿನದ ಮಧ್ಯದಲ್ಲಿ ತಿನ್ನುವ ಆಸೆ ಮೂಡುತ್ತದೆ. ಈ ಬಯಕೆಯು ಸ್ನಾಕ್ಸ್‌ ತಿನ್ನುವಂತೆ ಮಾಡುತ್ತದೆ. ಅಧ್ಯಯನದಿಂದ ತಿಳಿದು ಬಂದಿದ್ದೇನೆಂದರೆ ಸ್ನಾಕ್ಸ್‌ ತಿನ್ನುವ ಸಮಯವು ಬೆಳಗ್ಗೆ 9.30 ಅಥವಾ 11 ಗಂಟೆ. ಬೆಳಗ್ಗಿನ 3 ಗಂಟೆಯ ಸಮಯವು ಪ್ರಶಸ್ತವಾಗಿದೆ ಏಕೆಂದರೆ ಆಗ ನಮ್ಮ ವಿಲ್‌ ಪವರ್‌ ಕಡಿಮೆಯಿರುತ್ತದೆ. ಫೈಬರ್‌, ಪ್ರೋಟೀನ್‌ ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ ಇರುವ ಸ್ನಾಕ್ಸ್‌ ತಿನ್ನಿ ಅದು ದೇಹಕ್ಕೂ ಉತ್ತಮ ಮತ್ತು ತೂಕವು ಏರುವುದಿಲ್ಲ. ಸ್ನಾಕ್ಸ್‌ಗಳನ್ನು ತಿನ್ನುವುದನ್ನು ತಪ್ಪಿಸುವುದು ಓವರ್‌ ಈಟಿಂಗ್‌ಗೆ ದಾರಿ ಮಾಡಿಕೊಡುವುದು.

ಊಟ ತಪ್ಪಿಸುವುದು:
ಊಟಗಳನ್ನು ಬಿಡುವುದರ ಅರ್ಥ ಕಡಿಮೆ ತಿನ್ನುವುದು ಎಂದಲ್ಲ ಅದು ಚಯಾಪಚಯ ಕ್ರಿಯೆಯನ್ನು ಹದಗೆಡಿಸುತ್ತದೆ ಮತ್ತು ಅತಿಯಾಗಿ ತಿನ್ನುವ ಬಯಕೆ ಮೂಡಿಸುತ್ತದೆ. ಬೆಳಗ್ಗಿನ ಉಪಹಾರ ಬಿಡುವುದು ಊಟಗಳನ್ನು ಅತಿಯಾಗಿ ತಿನ್ನುವಂತೆ ಮಾಡಿ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುವುದಕ್ಕೆ ದಾರಿ ಮಾಡಿದಂತೆ. ಮಧ್ಯಾಹ್ನದ ಮತ್ತು ರಾತ್ರಿಯ ಊಟ ತಪ್ಪಸುವವರಲ್ಲಿ ಅಧಿಕ ತೂಕ ಏರಿಕೆಯಾಗುತ್ತದೆ ಎಂದು ಒಸಕಾ ಯುನಿವರ್‌ಸಿಟಿಯು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಅದು ರಾತ್ರಿ ಊಟ ತಪ್ಪಿಸುವ ಪುರಷ ಮತ್ತು ಮಹಿಳೆಯರ ಮೇಲೆ ಅಭ್ಯಾಸ ಮಾಡಿ ಹೇಳಿದ್ದೇನೆಂದರೆ ಅಂತಹವುರು ಅತಿಯಾಗಿ ಮಧ್ಯಪಾನ ಮತ್ತು ಧೂಮ್ರಪಾನ ಮಾಡುತ್ತಾರೆ.

ಕ್ಯಾಲೋರಿಯ ಕೊರತೆ:
ತೂಕ ಇಳಿಸುವ ಕ್ರಿಯೆಯಲ್ಲಿ ಕ್ಯಾಲೋರಿಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ಅತೀ ಅವಶ್ಯಕ. ತಿನ್ನುವುದಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಕರಗಿಸುವುದು ತೂಕ ಇಳಿಕೆಯ ಮೊದಲ ಕಾರಣವಾಗಿರಬಹುದು ಆದರೆ, ಇದು ದೇಹದ ಶಕ್ತಿಗೋಸ್ಕರ ಶೇಖರಣೆಗೊಂಡ ಕೊಬ್ಬು ಕರಗುವುದು. ಇದರಿಂದ ತೂಕ ಇಳಿಕೆಯೇನೋ ಆಗುವುದು, ಆದರೆ ಇದು ದೇಹ ತೂಕದ ಮೇಲೆ ಪ್ರಭಾವ ಬೀರುವುದು. ಅದಕ್ಕಾಗಿಯೇ ಅತಿಯಾಗಿ ತಿನ್ನವುದಕ್ಕೆ ‘ನೋ’ ಹೇಳಿ. ಮತ್ತು ವ್ಯಾಯಾಮವನ್ನು ಮಾಡುತ್ತಿರಿ.

ಇದನ್ನೂ ಓದಿ : Food Poisoning: ಫುಡ್‌ ಪಾಯ್ಸನ್‌ ಆಗಿದೆಯಾ? ಅದಕ್ಕೆ ಕಾರಣ ಹೀಗೂ ಇರಬಹುದು!

(Weight Loss best time to eat meals to lose weight)

Comments are closed.