ಬಿರು ಬಿಸಿಲಿಗೆ ತಂಪು ತಂಪು ಕುಲ್ಫಿ: ಮನೆಯಲ್ಲಿ ಹೀಗೆ ಸುಲಭವಾಗಿ ತಯಾರಿಸಿ
ಬೇಸಿಗೆಯ ಬಿಸಿಲಿಗೆ ತಂಪಾಗಿ ಏನನ್ನಾದರೂ ತಿನ್ನಬೇಕೆನಿಸಿದರೆ ಕುಲ್ಫಿ ಬೆಸ್ಟ್. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವ ಕುಲ್ಫಿಯನ್ನು ಮನೆಯಲ್ಲಿಯೇ ಹೀಗೆ ಸುಲಭವಾಗಿ ತಯಾರಿಸಬಹುದು.
Kulfi Recipe: ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದೆ. ತಾಪಮಾನದ ಏರಿಕೆಯಿಂದ ಫ್ರಿಜ್‌ನಲ್ಲಿಟ್ಟ ನೀರು, ಐಸ್‌ಕ್ರೀಮ್, ಕೂಲ್ಡ್ರಿಂಕ್ಸ್‌ಗಳ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ಕುಲ್ಫಿ ತಿನ್ನದಿದ್ದರೆ ಹೇಗೆ? ತಂಪು ತಂಪು ಕುಲ್ಫಿ ಬಾಯಲ್ಲಿಡುತ್ತಿದ್ದಂತೆ ಬಿಸಿಲಿಗೆ ಬಸವಳಿದ ದೇಹಕ್ಕೆ ಆರಾಮವೆನಿಸುತ್ತದೆ. ಕುಲ್ಫಿಯನ್ನು ಹಾಲಿನಿಂದ ತಯಾರಿಸುತ್ತಾರೆ. ಪ್ರತಿ ಬಾರಿ ಅಂಗಡಿಯಿಂದ ತಂದು ತಿನ್ನುವ ಬದಲಿಗೆ ನೀವೇ ಮನೆಯಲ್ಲಿ ಸುಲಭವಾಗಿ ಅಷ್ಟೇ ರುಚಿಯಾಗಿ ಕುಲ್ಫಿ ತಯಾರಿಸಬಹುದು. ಮಕ್ಕಳಿಗೆ ಇಷ್ಟವಾಗುವ ಕುಲ್ಫಿಯನ್ನು ಸಿಂಪಲ್ ಆಗಿ ಹೀಗೆ ತಯಾರಿಸಿ.
ಕುಲ್ಫಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
ತೆಂಗಿನ ಹಾಲು
ಕಂಡೆನ್ಸ್ಡ್ ಹಾಲು
ಸಕ್ಕರೆ
ಏಲಕ್ಕಿ ಪುಡಿ
ಕತ್ತರಿಸಿದ ಡ್ರೈ ಫ್ರೂಟ್ಸ್
ಒಂದು ಚಿಟಿಕೆ ಕೇಸರಿ
ಇದನ್ನೂ ಓದಿ: ಬೇಸಿಗೆಗೂ ಸೈ ತೂಕ ಇಳಿಕೆಗೂ ಜೈ! ಬಿಸಿಲಿನ ಬೇಗೆ ತಣಿಸುವ ತಂಪು ತಂಪು ಪಾನೀಯಗಳು
ಕುಲ್ಫಿ ತಯಾರಿಸುವ ವಿಧಾನ
ಮೊದಲಿಗೆ ತೆಂಗಿನ ಹಾಲು ಮತ್ತು ಕಂಡೆನ್ಸ್ಡ್ ಹಾಲನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಸಕ್ಕರೆ ಹಾಕಿ ಕರಗಿಸಿ. ಮಿಶ್ರಣ ದಪ್ಪವಾಗುವವರೆಗೆ ಕಡಿಮೆ ಉರಿಯಲ್ಲಿ ಕುದಿಸಿ. ಅದಕ್ಕೆ ಏಲಕ್ಕಿ ಪುಡಿ, ಕೇಸರಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಪರಿಮಳ ಬರುವವರೆಗೆ ಕುದಿಸಿ.
ನಂತರ ಗ್ಯಾಸ್ ಆಫ್ ಮಾಡಿ. ತಣ್ಣಗಾಗಲು ಬಿಡಿ. ಅದಕ್ಕೆ ಕತ್ತರಿಸಿದ ಡ್ರೈಫ್ರೂಟ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಈ ಮಿಶ್ರಣವನ್ನು ಕುಲ್ಫಿ ಅಚ್ಚುಗಳಿಗೆ ವರ್ಗಾಯಿಸಿ. ಕುಲ್ಫಿ ಸ್ಟಿಕ್ ಅನ್ನು ಸರಿಯಾಗಿ ಮಧ್ಯದಲ್ಲಿ ಇರಿಸಿ. 6–8 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇಡಿ. ಈಗ ರುಚಿಯಾದ ಕುಲ್ಫಿ ಸವಿಯಲು ಸಿದ್ಧ.



