Holi Welcome Drinks: ಬಣ್ಣ ಹಚ್ಚಲು ಮನೆಗೆ ಬರುವ ಅತಿಥಿಗಳಿಗೆ ನೀಡಿ ತಂಪು ತಂಪು ಪಾನೀಯ

Holi Welcome Drinks: ಹೋಳಿ ಹಬ್ಬದಲ್ಲಿ ಕೈಯಲ್ಲಿ ಬಣ್ಣ ಹಿಡಿದು ಮನೆಗೆ ಅತಿಥಿಗಳ ದೊಡ್ಡ ಗುಂಪೇ ಬರುತ್ತದೆ. ಹಾಗೆ ಬರುವವರೆಲ್ಲರೂ ಬಣ್ಣ ಹಚ್ಚಿ ಸಂಭ್ರಮಿಸಿಯೇ ಹೋಗುತ್ತಾರೆ. ಈಗ ಬೇಸಿಗೆ ಪ್ರಾರಂಭವಾಗಿದೆ. ಬಿಸಿಲಿನ ತಾಪ ನಿಧಾನಕ್ಕೆ ಅರಿವಿಗೆ ಬರುತ್ತಿದೆ. ಈ ಸಮಯದಲ್ಲಿ ಮನೆಗೆ ಬರುವ ಅತಿಥಿಗಳನ್ನು ಸತ್ಕಾರ ಮಾಡುವುದು ನಮ್ಮ ಕರ್ತವ್ಯ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳನ್ನು ಖರೀದಿಸಿ ತರುವ ಅವಶ್ಯಕತೆಯಿಲ್ಲ. ಬದಲಿಗೆ ನೀವೇ ಮನೆಯಲ್ಲಿ ಅದ್ಭುತವಾಗಿ ಪಾನೀಯಗಳನ್ನು ತಯಾರಿಸಬಹುದು. ಮನೆ ಮನೆಗೆ ಹೋಗಿ ಬಣ್ಣ ಹಚ್ಚಿ ಬರುವವರ ಆಯಾಸವನ್ನು ನೀಗಿಸಬಹುದು. ಹಾಗಾದರೆ ಹೋಳಿ ಹಬ್ಬಕ್ಕೆ ಬಣ್ಣ ಹಚ್ಚಲು ಬರುವ ಅತಿಥಿಗಳಿಗೆ ನೀವು ನೀಡಬಹುದಾದ 5 ಉತ್ತಮ ಪಾನೀಯಗಳ ಬಗ್ಗೆ ತಿಳಿದುಕೊಳ್ಳೋಣ.

ಹಣ್ಣಿನ ಪಂಚ್‌

ಮಿಶ್ರ ಹಣ್ಣುಗಳಿಂದ ಜ್ಯೂಸ್ ತಯಾರಿಸಿ. ಕಲರ್‌ಫುಲ್‌ ಆಗಿ ಕಾಣಿಸುವ ಈ ಜ್ಯೂಸ್‌ ಅದ್ಭುತ ಪಾನೀಯವಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವಂತಹ ಪಾನೀಯ ಇದಾಗಿದೆ. ಹೋಳಿ ಹಬ್ಬಕ್ಕೆ ಆಧುನಿಕ ಸ್ವರ್ಶ ನೀಡುವುದರ ಜೊತೆಗೆ ಆಯಾಸವನ್ನು ದೂರಮಾಡುತ್ತದೆ.

ಸಿಂಪಲ್ ಆಗಿ ನಿಂಬೂ ಶರಬತ್‌

ಇದೊಂದು ಇನ್ಸ್‌ಟಂಟ್‌ ಎನರ್ಜಿ ಡ್ರಿಂಕ್‌ ಎನ್ನಬಹುದು. ನೀರಿಗೆ ಚಿಟಿಕೆ ಉಪ್ಪು, ಸಕ್ಕರೆ, ನಿಂಬೂ ರಸ ಸೇರಿಸಿ ತಯಾರಿಸಬಹುದಾದ ನಿಂಬೂ ಶರಬತ್ ಹೋಳಿಯಾಟದ ಆಯಾಸಕ್ಕೆ ರಾಮಬಾಣವಾಗಿದೆ. ನಿರ್ಜಲೀಕರಣವನ್ನು ದೂರಮಾಡುವ ನಿಂಬೂ ಶರಬತ್‌ ಅನ್ನು ಫ್ರಿಜ್‌ ನೀರಿನಲ್ಲೂ ತಯಾರಿಸಬಹುದು.

ಡೀಹೈಡ್ರೇಷನ್‌ ಓಡಿಸುವ ಆಮ್‌ ಪಾನಿ

ಈಗ ಮಾರುಕಟ್ಟೆಯಲ್ಲಿ ಮಾವಿನಕಾಯಿಗಳು ಬರುತ್ತಿವೆ. ಹೊಳಿ ಹಬ್ಬಕ್ಕೆ ಬರುವ ಅತಿಥಿಗಳಿಗೆ ವಿಶೇಷವಾಗಿ ಮಾವಿನಕಾಯಿಯ ಸಿಹಿ, ಹುಳಿ ಶರಬತ್‌ ಮಾಡಿಕೊಡಿ. ಆಮ್‌ ಪಾನಿ ತಯಾರಿಸುವುದು ಬಹಳ ಸುಲಭ. ಸಿಪ್ಪೆ ತೆಗೆದ ಮಾವಿನಕಾಯಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಚಿಟಿಕೆ ಉಪ್ಪು, ಸಕ್ಕರೆ ಸೇರಿಸಿ ಆಮ್‌ ಪಾನಿ ತಯಾರಿಸಿ. ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುವ ಈ ಪಾನೀಯ ಶಕ್ತಿಯನ್ನೂ ನೀಡುತ್ತದೆ.

ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಡ್ರೈಫ್ರೂಟ್ಸ್‌ ಕರ್ಜಿಕಾಯಿ: ಬಣ್ಣ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿ

ತಂಪು ತಂಪು ರೋಸ್‌ ಶರಬತ್‌

ಅತಿಥಿಗಳನ್ನು ವಿಶೇಷವಾಗಿ ಸತ್ಕರಿಸಬೇಕೆಂಬ ಆಸೆಯಿದ್ದರೆ ರೋಸ್‌ ಶರಬತ್‌ ಮಾಡಿಕೊಡಿ. ಗುಲಾಬಿ ಬಣ್ಣದ ಈ ಪಾನೀಯ ಹೋಳಿ ಹಬ್ಬದ ಆಚರಣೆಗೆ ವಿಶೇಷ ಮೆರಗು ನೀಡುತ್ತದೆ. ತಣ್ಣಗಿನ ಹಾಲಿನೊಂದಿಗೂ ಕುಡಿಯಬಹುದಾದ ರೋಸ್‌ ಶರಬತ್‌ ಉಲ್ಲಾಸವನ್ನು ಹೆಚ್ಚಿಸುತ್ತದೆ.

ಜೀರ್ಣಕಾರಿ ಜಲ್‌ಜೀರಾ

ಪುದೀನಾ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಹುಣಸೆಹಣ್ಣಿನಿಂದ ತಯಾರಿಸುವ ಜಲ್‌ಜೀರಾ ಜೀರ್ಣಕ್ರಿಯೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಹೋಳಿ ಸಮಯದಲ್ಲಿ ಎಲ್ಲೆಂದರಲ್ಲಿ ಸಿಗುವ ತಿಂಡಿಗಳನ್ನು ತಿಂದು ಅಜೀರ್ಣವಾಗುವ ಸಂಭವ ಹೆಚ್ಚು. ಅದಕ್ಕೆ ಜಲ್‌ಜೀರಾ ಉತ್ತಮವಾಗಿದೆ. ಈ ಸಂಪ್ರದಾಯಿಕ ಪಾನೀಯ ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories