ಹೋಳಿ ಹಬ್ಬಕ್ಕೆ ಡ್ರೈಫ್ರೂಟ್ಸ್ ಕರ್ಜಿಕಾಯಿ: ಬಣ್ಣ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿ
Holi 2026: ಬಣ್ಣಗಳ ಹಬ್ಬ ಹೋಳಿ. ವಿವಿಧ ಬಣ್ಣಗಳನ್ನು ಒಬ್ಬರಿಗೊಬ್ಬರು ಹಚ್ಚಿ ಸಂಭ್ರಮಿಸುವ ಹಬ್ಬ ಹೋಳಿ. ಕೇವಲ ಬಣ್ಣ ಹಚ್ಚಿ ಸಂಭ್ರಮಿಸಿದರೆ ಸಾಕಾ? ಬಣ್ಣದ ಜೊತೆಗೆ ಸಿಹಿಯ ಮಾಧುರ್ಯವನ್ನು ಹಂಚಿದರೆ ಹಬ್ಬಕ್ಕೊಂದು ಅರ್ಥವಿರುತ್ತದೆ.
ಹಬ್ಬ ಎಂದ ಕೂಡಲೇ ಏನಾದರೂ ಒಂದು ಸಿಹಿ ತಯಾರಿಸುವುದು ರೂಢಿ. ಆದರೆ ಪ್ರತಿಸಲದಂತೆ ಸಕ್ಕರೆ, ಕೊಬ್ಬರಿ ಪುಡಿಯಿಂದ ಕರ್ಜಿಕಾಯಿಯನ್ನು ತಯಾರಿಸುವ ಬದಲಿಗೆ ಬೆಲ್ಲದ ಪುಡಿ, ಡ್ರೈಫ್ರೂಟ್ಸ್, ಕೊಬ್ಬರಿ ಪುಡಿ ಸೇರಿಸಿ ಈ ವರ್ಷ ಸ್ವಲ್ಪ ಢಿಫರೆಂಟ್ ಆಗಿ, ಆರೋಗ್ಯಪೂರ್ಣವಾಗಿ ಸಿಹಿ ತಯಾರಿಸುವ ಯೋಚನೆಯಿದ್ದರೆ ಡ್ರೈ ಫ್ರೂಟ್ಸ್ ಕರ್ಜಿಕಾಯಿ ತಯಾರಿಸಬಹುದು.
ಡ್ರೈ ಫ್ರೂಟ್ಸ್ ಕರ್ಜಿಕಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಮೈದಾ ಅಥವಾ ಗೋಧಿಹಿಟ್ಟು – 2 ಕಪ್
ತುಪ್ಪ – 1/4 ಕಪ್
ನೀರು – ಹಿಟ್ಟನ್ನು ನಾದಲು
ಸ್ಟಫಿಂಗ್‌ಗಾಗಿ (ಹೂರಣಕ್ಕಾಗಿ)
ಕೊಬ್ಬರಿ ಪುಡಿ – 1 ಕಪ್
ಬೆಲ್ಲದ ಪುಡಿ – 3/4 ಕಪ್
ಚಿಕ್ಕದಾಗಿ ಕತ್ತರಿಸಿದ ಡ್ರೈಫ್ರೂಟ್ಸ್ – 3–4 ಚಮಚ
ಒಣದ್ರಾಕ್ಷಿ – 1 ಚಮಚ
ಏಲಕ್ಕಿ ಪುಡಿ – 1 ಚಮಚ
ಕರಿಯಲು ಎಣ್ಣೆ
ಇದನ್ನೂ ಓದಿ: ಆರೋಗ್ಯದ ವರ್ಧನೆಗೆ ಬೆಸ್ಟ್ ಟೊಮೆಟೊ ಸೂಪ್: ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ
ಕರ್ಜಿಕಾಯಿ ತಯಾರಿಸುವ ವಿಧಾನ
- ಮೊದಲಿಗೆ ಒಂದು ದೊಡ್ಡ ಪ್ಯಾನ್ ತೆಗದುಕೊಂಡು ತುಪ್ಪ ಹಾಕಿ ಕರಗಿಸಿ. ಅದಕ್ಕೆ ಹಿಟ್ಟನ್ನು ಸೇರಿಸಿ. ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಅದಕ್ಕೆ ಮೇಲಿನಿಂದ ಸ್ವಲ್ಪ ಎಣ್ಣೆಯನ್ನು ಸವರಿ. ಒದ್ದೆ ಬಟ್ಟೆಯನ್ನು ಅದರ ಮೇಲೆ ಮುಚ್ಚಿ 20–30 ನಿಮಿಷಗಳ ಕಾಲ ಮುಚ್ಚಿಡಿ.
- ಈಗ ಒಂದು ಪಾತ್ರೆಗೆ ತುರಿದ ಒಣ ಕೊಬ್ಬರಿ, ಡ್ರೈಫ್ರೂಟ್ಸ್, ಒಣ ದ್ರಾಕ್ಷಿ, ಬೆಲ್ಲದ ಪುಡಿ, ಏಲಕ್ಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಹೂರಣ ತಯಾರಿಸಿಕೊಳ್ಳಿ.
- ನಂತರ ಇನ್ನೊಮ್ಮೆ ಹಿಟ್ಟನ್ನು ಚೆನ್ನಾಗಿ ನಾದು ಕೊಳ್ಳಿ. ಚಿಕ್ಕ ಉಂಡೆಯನ್ನು ತೆಗೆದುಕೊಂಡು ಪೂರಿಯಂತೆ ಲಟ್ಟಿಸಿ. ಕರ್ಜಿಕಾಯಿ ಅಚ್ಚಿನ ಮೇಲೆ ಅದನ್ನು ಇಟ್ಟು 1 ಚಮಚ ಹೂರಣವನ್ನು ಹಾಕಿ. ಅಚ್ಚನ್ನು ಬಿಗಿಯಾಗಿ ಮುಚ್ಚಿ. ಇದೇ ರೀತಿ ಎಲ್ಲ ರೀತಿಯ ಕರ್ಜಿಕಾಯಿಯನ್ನು ತಯಾರಿಸಿಕೊಳ್ಳಿ.
- ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಕಾಯಿಸಿ. ಒಂದೊಂದೇ ಕರ್ಜಿಕಾಯಿಯನ್ನು ಗೋಲ್ಡನ್ ಬಣ್ಣ ಬರುವವರೆಗೆ ಕರಿಯಿರಿ. ರುಚಿಯಾದ ಹಾಗೂ ಅಷ್ಟೇ ಆರೋಗ್ಯಪೂರ್ಣವಾದ ಕರ್ಜಿಕಾಯಿ ತಯಾರಿಸಿ.



