Belly Fat : ಈ ವ್ಯಾಯಾಮಗಳನ್ನು ಮಾಡಿ, ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಿ

ಇತ್ತೀಚಿನ ದಿನಗಳಲ್ಲಿ, ತೂಕ ಹೆಚ್ಚಾಗುವುದು (Weight Gain) ಎಲ್ಲರಿಗೂ ಬಹಳ ದೊಡ್ಡ ಸಮಸ್ಯೆಯಾಗಿದೆ. ತೂಕ ಕಡಿಮೆ (Weight Loss) ಮಾಡಿಕೊಳ್ಳುವುದು ಎಂದರೆ ಒಂದು ಸವಾಲಿನಂತೆ ಕಾಣಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಹೊಟ್ಟೆಯ ಭಾಗದ ಕೊಬ್ಬನ್ನು (Belly Fat) ಕಡಿಮೆ ಮಾಡುವುದು ತುಂಬಾ ಕಷ್ಟಕರವಾದ ಕೆಲಸ. ಬಲೂನಿನಂತೆ ಕಾಣಿಸುವ ಹೊಟ್ಟೆಯ ಕೊಬ್ಬು ಎಷ್ಟೆಲ್ಲಾ ಮುಜುಗರವನ್ನುಂಟು ಮಾಡುತ್ತದೆ. ದೇಹದ ಅಂದ ಹಾಳುಮಾಡುವುದರ ಜೊತೆಗೆ, ಆರೋಗ್ಯವನ್ನು ಹದಗೆಡಿಸುತ್ತದೆ. ಅದಕ್ಕಾಗಿ ಇಲ್ಲಿ ಹೊಟ್ಟೆಯ ಭಾಗದ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ವ್ಯಾಯಾಮ (Exercise) ಗಳನ್ನು ಹೇಳಿದ್ದೇವೆ. ನೀವು ಇದನ್ನು ನಿಯಮಿತವಾಗಿ ಅನುಸರಿಸಿದರೆ, ಅದರ ಫಲಿತಾಂಶಗಳನ್ನು ಒಂದೆರಡು ವಾರಗಳಲ್ಲಿ ನೋಡಬಹುದು.

ಬರ್ಪಿ ವ್ಯಾಯಾಮ:
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬರ್ಪಿ ವ್ಯಾಯಾಮವು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಎದೆ, ಭುಜ ಮತ್ತು ಟ್ರೈಸ್ಪ್ಗಳನ್ನು ಬಲಪಡಿಸುತ್ತದೆ. ಅಲ್ಲದೆ ತೂಕ ಇಳಿಸಲು ಸಹಾಯ ಮಾಡುತ್ತದೆ.

ಬರ್ಪಿ ವ್ಯಾಯಾಮ ಹೀಗೆ ಮಾಡಿ :
ಈ ವ್ಯಾಯಾಮ ಮಾಡಲು ಮೊದಲು ಎದ್ದು ನಿಲ್ಲಿ
ನಂತರ ಮೊಣಕಾಲನ್ನು ಬಗ್ಗಿಸಿ, ಸ್ಕ್ವಾಟ್‌ ಪೊಸಿಷನ್‌ (Squat Position) ಗೆ ಬನ್ನಿ
ಕೈಗಳನ್ನು ನೆಲಕ್ಕೆ ಇರಿಸಿ, ಕಾಲಗಳನ್ನು ಹಿಂದಕ್ಕೆ ಸರಿಸಿ.
ನಂತರ ಕಾಲುಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ತಳ್ಳಿರಿ.
ಪಾದಗಳನ್ನು ಮತ್ತು ಕೈಗಳನ್ನು ಹತ್ತಿರ ತನ್ನಿ, ಜಿಗಿದು ಎದ್ದು ನಿಲ್ಲಿ.
ಈ ವ್ಯಾಯಾಮನ್ನು 10 ನಿಮಿಷಗಳ ವರೆಗೆ ಪುನರಾವರ್ತಿಸಿ.
ಇದು ಹೊಟ್ಟೆಯ ಭಾಗದ ಕೊಬ್ಬನ್ನು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿಯಾಗಿದೆ.

ಹಿಲ್‌ ಟಚ್‌ ವ್ಯಾಯಾಮ :
ಇದು ಕೂಡ ಹೊಟ್ಟೆಯ ಭಾಗದ ಕೊಬ್ಬು ಕರಗಿಸಲು ಬಹಳ ಸುಲಭದ ವ್ಯಾಯಾಮವಾಗಿದೆ.

ಹಿಲ್‌ ಟಚ್‌ ವ್ಯಾಯಾಮ ಹೀಗೆ ಮಾಡಿ :
ನಿಮ್ಮ ಮೊಣಕಾಲುಗಳನ್ನು ಬಾಗಿಸಿ ನೆಲದ ಮೇಲೆ ಮಲಗಿ. ನಂತರ ಕುತ್ತಿಗೆಯನ್ನು ಸ್ವಲ್ಪ ಎತ್ತಿ, ಎಡಗಡೆ ಸ್ವಲ್ಪ ಬಾಗಿ ನಿಮ್ಮ ಪಾದವನ್ನು ಮುಟ್ಟಿ. ಹಾಗೆ ಬಲಗಡೆಯೂ ಮಾಡಿ. ಇದು ಸೊಂಟದ ಎರಡೂ ಬದಿಗಳಲ್ಲಿ ಶೇಖರಣೆಗೊಂಡಿರುವ ಕೊಬ್ಬನ್ನು ಸುಡುತ್ತದೆ. 20 ಸಲ ಪುನರಾವರ್ತಿಸಿ.

ಇದನ್ನೂ ಓದಿ : Avoid Fruits In Cough : ನಿಮ್ಮ ಮಕ್ಕಳು ಅತಿಯಾಗಿ ಕೆಮ್ಮುತ್ತಿದ್ದರೆ ಈ ಹಣ್ಣುಗಳಿಂದ ದೂರವಿಡಿ

ಇದನ್ನೂ ಓದಿ : Home Remedies For Heartburn : ಊಟವಾದ ತಕ್ಷಣ ಕಾಣಿಸಿಕೊಳ್ಳುವ ಎದೆಯುರಿಗೆ ಇಲ್ಲಿದೆ ಮನೆಮದ್ದುಗಳು

(Belly Fat exercises. Effective tips for reducing weight)

Comments are closed.