ಸೀದುಹೋದ ಕುಕ್ಕರ್ ಪಳಪಳ ಹೊಳೆಯಲು ಇಲ್ಲಿದೆ 3 ಅದ್ಭುತ ಟ್ರಿಕ್ಸ್‌

ಸೀದುಹೋದ ಪ್ರೆಶರ್ ಕುಕ್ಕರ್ ಅನ್ನು ಸುಲಭವಾಗಿ ಹೇಗೆ ಸ್ವಚ್ಛಗೊಳಿಸಬಹುದು ನೋಡಿ.

ಸೀದುಹೋದ ಪ್ರೆಶರ್ ಕುಕ್ಕರ್ ಅನ್ನು ಸುಲಭವಾಗಿ ಹೇಗೆ ಸ್ವಚ್ಛಗೊಳಿಸಬಹುದು ನೋಡಿ.

ದಿನನಿತ್ಯದ ಅಡಿಗೆಗೆ ಪ್ರೆಶರ್ ಕುಕ್ಕರ್ ನ ಬಳಕೆ ಸರ್ವೇ ಸಾಮಾನ್ಯ. ಕೆಲವೊಮ್ಮೆ ಆತುರದಲ್ಲಿ ಗ್ಯಾಸ್ ಉರಿ ದೊಡ್ಡದು ಮಾಡಿಡುತ್ತೇವೆ. ಈ ಕಾರಣದಿಂದ ಕುಕ್ಕರ್ ನ ತಳಭಾಗ ಕಪ್ಪಾಗಬಹುದು. ಅಲ್ಲದೇ ಅನ್ನ, ತರಕಾರಿ, ಬೇಳೆ ಬೇಯಿಸುವಾಗ ತಳ ಹಿಡಿದು ಕಪ್ಪಾಗಬಹುದು. ಹೀಗಿರುವಾಗ ನಮ್ಮ ಆರೋಗ್ಯ ಹಾಗೂ ಭದ್ರತೆ ಉದ್ದೇಶದಿಂದ ಇದನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನಮಗೆ ಸವಾಲಿನ ಕೆಲಸವೇ ಹೌದು. ಈ ಸವಾಲುಗಳ ನಡುವೆ ಸುಲಭವಾಗಿ ಪ್ರೆಶರ್ ಕುಕ್ಕರನ್ನು ಸ್ವಚ್ಛವಾಗಿರಿಸಿಕೊಳ್ಳಲು ಯಾವುದೇ ದುಬಾರಿ ಕ್ಲೀನರ್ ಗಳ ಅಗತ್ಯವಿಲ್ಲದೇ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಿ ಸ್ವಚ್ಛಗೊಳಿಸಿ ಕೊಳ್ಳಲು ಉತ್ತಮ ಪರಿಣಾಮಕಾರಿ ಸಲಹೆ ಇಲ್ಲಿದೆ.

ವಿಧಾನ 1:- ಅಡಿಗೆ ಸೋಡಾ ಮತ್ತು ಪಾತ್ರೆ ತೊಳೆಯುವ ದ್ರವ.
ಈ ವಿಧಾನ ಸ್ಟೀಲ್ ಹಾಗೂ ಅಲ್ಯುಮಿನಿಯಂ ಕುಕ್ಕರ್ ತೊಳೆಯಲು ಅತ್ಯುತ್ತಮ ವಿಧಾನ. ಪ್ರೆಶರ್ ಕುಕ್ಕರ್ ನ ಸುಟ್ಟು ಕಪ್ಪಾದ ಭಾಗ ಮುಳುಗುವಷ್ಟು ನೀರು ತುಂಬಿಸಿ 2-3 ಚಮಚ ಅಡಿಗೆ ಸೋಡಾ ಹಾಗೂ 2-3 ಚಮಚ ಪಾತ್ರೆ ತೊಳೆಯುವ ದ್ರವ ಸೇರಿಸಿ ಅದನ್ನು ಮಾಧ್ಯಮ ಉರಿಯಲ್ಲಿ 15 ರಿಂದ 20 ನಿಮಿಷ ಕುದಿಸಿ ನಂತರ ತಣ್ಣಗಾಗಿಸಿ ಸ್ಕ್ರಬ್ ಮಾಡಿದರೆ ಸುಲಭವಾಗಿ ಕಲೆ ಹೋಗುತ್ತದೆ.

ವಿಧಾನ 2 :- ವಿನೆಗರ್.
ವಿನೆಗರ್ ಗಟ್ಟಿಯಾದ ಕೊಳೆಯನ್ನು ಸಡಿಲಗೊಳಿಸುವ ಜೊತೆಗೆ ವಾಸನೆಯನ್ನೂ ಹೋಗಿಸುತ್ತದೆ. ಕುಕ್ಕರ್ ಗೆ 1ಕಪ್ ನೀರು ಹಾಗೂ ಅರ್ದ ಕಪ್ ವಿನೆಗರ್ ಸೇರಿಸಿ ಕಡಿಮೆ ಉರಿಯಲ್ಲಿ ಕೆಲ ನಿಮಿಷಗಳ ಕಾಲ ಬಿಸಿ ಮಾಡಿ ಆಗ ಸುಟ್ಟ ಮಸಿ ಸಡಿಲವಾಗುತ್ತದೆ. ತಣ್ಣಗಾದ ನಂತರ ನಿಧಾನವಾಗಿ ಸ್ಕ್ರಬ್ ಮಾಡಿ.

ವಿಧಾನ 3 :- ಉಪ್ಪು ಹಾಗೂ ಆಲೂಗಡ್ಡೆ.
ಇದು ಸಾಧ್ಯವೇ ಎಂದೆನಿಸಬಹುದು. ಆದರೆ ಇದು ಅತ್ಯಂತ ಪರಿಣಾಮಕಾರಿ ವಿಧಾನ. ಆಲೂಗಡ್ಡೆಯನ್ನು ಅರ್ಧ ಕತ್ತರಿಸಿ ಅದರ ಮೇಲೆ ಹರಳು ಉಪ್ಪನ್ನು ಹಾಕಿ ಕುಕ್ಕರ್ ನ ಕಪ್ಪಾದ ಭಾಗ ಉಜ್ಜಿ ತೊಳೆಯಿರಿ.

ವಿಧಾನ 4 :- ಅಡಿಗೆ ಸೋಡಾ ಮತ್ತು ಲಿಂಬು.
ಕುಕ್ಕರ್ ಸುಟ್ಟು ಕಪ್ಪಾದ ಭಾಗಕ್ಕೆ 1-2 ಚಮಚ ಸೋಡಾ ಹಾಗೂ ಅರ್ದ ಲಿಂಬು ರಸ ಸೇರಿಸಿ ಉಜ್ಜಿ 10-15 ನಿಮಿಷ ಹಾಗೇ ಬಿಟ್ಟು ನಂತರ ನಿಧಾನವಾಗಿ ಸ್ಕ್ರಬ್ ಮಾಡಿ.

ಪ್ರಮುಖ ಸಲಹೆಗಳು.

  1. ಕೊಳೆಯನ್ನು ಸಡಿಲಗೊಳಿಸಲು ಸ್ಕ್ರಬ್ ಮಾಡುವ ಮೊದಲು ಕುಕ್ಕರನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡಿ.
  2. ಕುಕ್ಕರನ್ನು ತೊಳೆಯುವಾಗ ಶಿಳ್ಳೆ ಹಾಗೂ ರಬ್ಬರ್ ಗ್ಯಾಸ್ಕೆಟ್ ನ್ನು ತೆಗೆದು ಸ್ವಚ್ಛಗೊಳಿಸಿ.
  3. ತುಂಬಾ ಗಟ್ಟಿಯಾದ ಸ್ಕ್ರಬ್ಬರ್ ಬಳಸುವುದನ್ನು ತಪ್ಪಿಸಿ. ಏಕೆಂದರೆ ಅವು ಅದರ ಮೇಲ್ಮೈನ್ನು ಹಾನಿಗೊಳಿಸುತ್ತದೆ.
  4. ಸ್ವಚ್ಛಗೊಳಿಸಿದ ಕುಕ್ಕರನ್ನು ತಲೆಕೆಳಗಾಗಿ ಒಣಗಿಸಿ ಇದರಿಂದ ತೇವಾಂಶ ಉಳಿಯುವುದಿಲ್ಲ.
Scroll to Top