Cleaning Tips: ಚಳಿಗಾಲ ಮುಗಿಯುತ್ತಾ ಬಂದಿದೆ. ಚಳಿಗಾಲದ ದಿನಗಳಲ್ಲಿ ಚಳಿಯಿಂದ ಬಿಚ್ಚಗಿರಿಸಿಕೊಳ್ಳಲು ಭಾರವಾದ ರಜಾಯಿಗಳನ್ನು ಬಳಕೆ ಮಾಡಿರುತ್ತೇವೆ. ಚಳಿಗಾಲ ಕಳೆದು ಬೇಸಿಗೆ ಬಂದಂತೆ ಅವುಗಳನ್ನು ಸ್ವಚ್ಛಗೊಳಿಸಿ ಮತ್ತೆ ಮುಂದಿನ ಚಳಿಗಾಲಕ್ಕಾಗಿ ಜೋಪಾನವಾಗಿಡುವುದು ಅಷ್ಟೇ ಮುಖ್ಯವಾಗಿದೆ. ಭಾರವಾದ ಕಂಬಳಿ, ರಜಾಯಿಗಳನ್ನು ಡ್ರೈಕ್ಲೀನ್‌ಗೆ ಕೊಡುವವರೇ ಹೆಚ್ಚು. ಇದರಿಂದ ಅನಾವಶ್ಯಕ ಖರ್ಚು ಹೆಚ್ಚು. ಸರಿಯಾದ ವಿಧಾನ, ಒಂದಿಷ್ಟು ಸಲಹೆಗಳನ್ನು ಪಾಲಿಸಿದರೆ ಲಾಂಡ್ರಿಯಲ್ಲಿ ಒಗೆದಷ್ಟೇ ನೀಟಾಗಿ ಒಗೆಯಬಹುದು. ನಿಮ್ಮ ಮನೆಯಲ್ಲಿರುವ ವಾಷಿಂಗ್ ಮಷಿನ್ನಿಂದ ಸುಲಭವಾಗಿ ಅವುಗಳನ್ನು ಸ್ವಚ್ಛಗೊಳಿಸಿ ಹೊಸತರಂತೆ ಇಡಬಹುದು. ಹೇಗೆ ? ಇಲ್ಲಿದೆ ಓದಿ.
ಭಾರವಾದ ರಜಾಯಿಗಳನ್ನು ವಾಷಿಂಗ್ ಮಷಿನ್‌ನಲ್ಲಿ ತೊಳೆಯುವುದು ಹೇಗೆ?
ಭಾರವಾದ ರಜಾಯಿಗಳನ್ನು ತೊಳೆಯಲು ಕೇವಲ 5 ಸ್ಟೆಪ್ ಪಾಲಿಸಿದರೆ ಸಾಕು.
- ರಜಾಯಿಯ ಧೂಳು ಜಾಡಿಸಿ: ರಜಾಯಿಯನ್ನು ವಾಷಿಂಗ್ ಮಷಿನ್‌ಗೆ ಹಾಕುವ ಮೊದಲು ಅದರ ಮೇಲೆ ಇರುವ ಧೂಳನ್ನು ಜಾಡಿಸಿ.
- ಸರಿಯಾದ ಮೋಡ್ ಆರಿಸಿ: ವಾಷಿಂಗ್ ಮಷಿನ್‌ನಲ್ಲಿ ರಜಾಯಿ ಒಗೆಯುವಾಗ ಸರಿಯಾದ ಮೋಡ್ ಸೆಟ್ ಮಾಡುವುದು ಮುಖ್ಯವಾಗಿದೆ. ನಿಮ್ಮ ಮಷಿನ್‌ನಲ್ಲಿರುವ ವುಲನ್ ಮೋಡ್ ಅಥವಾ ಲೈಟ್ ಲೋಡ್ ಮೋಡ್ ಅನ್ನು ಆಯ್ದುಕೊಳ್ಳಿ.
- ಡಿಟರ್ಜಂಟ್‌ನ ಆಯ್ಕೆ: ಚಳಿಗಾಲದಲ್ಲಿ ಬಳಸಿದ ರಜಾಯಿಗಳನ್ನು ಒಗೆಯಲು ಯಾವಾಗಲೂ ಲಿಕ್ವಿಡ್ ಡಿಟರ್ಜಂಟ್ ಆಯ್ದುಕೊಳ್ಳಿ.
- ನೀರಿನ ತಾಪಮಾನ: ರಜಾಯಿಯ ಬಣ್ಣ ಮತ್ತು ಹೊಸತನವನ್ನು ಕಾಪಾಡಿಕೊಳ್ಳಲು ಯಾವಾಗಲೂ ತಣ್ಣಿರಿನಲ್ಲಿಯೇ ತೊಳೆಯಿರಿ. ಬಿಸಿ ನೀರು ಬಳಸಿದರೆ ಬಣ್ಣ ಹೋಗಿ ಮಸಕಾಗುವ ಸಾಧ್ಯತೆಯಿರುತ್ತದೆ.
- ಒಣಗಿಸುವ ವಿಧಾನ: ತೊಳೆದ ನಂತರ ರಜಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ. ಬಿಸಿಲಿನಲ್ಲಿ ಒಣಗಿಸುವುದರಿಂದ ಕೆಟ್ಟ ವಾಸನೆಯಾಗದಂತೆ, ಹೊಸತರಂತೆ ಇರಲು ಸಹಾಯ ಮಾಡುತ್ತದೆ.
ರಜಾಯಿಯನ್ನು ಬಳಸುವ ಸರಿಯಾದ ವಿಧಾನ
ರಜಾಯಿಗಳನ್ನು ಸರಿಯಾಗಿ ಬಳಕೆ ಮಾಡದೇ ಇದ್ದರೆ ಅದು ಬಹಳ ಬೇಗ ಹಾಳಾಗುತ್ತದೆ. ದುಬಾರಿ ದರ ಕೊಟ್ಟು ಖರೀದಿಸಿದ ರಜಾಯಿ ಕೆಲವೇ ದಿನಗಳಲ್ಲಿ ಹಾಳಾಗುತ್ತದೆ. ಅದಕ್ಕಾಗಿ ರಜಾಯಿಗಳನ್ನು ಕಾಲಕಾಲಕ್ಕೆ ಬಿಸಿಲಿನಲ್ಲಿ ಒಣಗಿಸಿ. ಸೂರ್ಯನ ಬೆಳಕು ಬ್ಯಾಕ್ಟೀರಿಯಾ ಮತ್ತು ವಾಸನೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಸ್ವಚ್ಛವಾಗಿದ್ದರೆ ಅದರಿಂದ ಯಾವುದೇ ಅಲರ್ಜಿ, ಸೋಂಕು ಹರಡುವುದಿಲ್ಲ.

