ಬೆಳ್ಳಿಯ ನಾಗಲೋಟಕ್ಕೆ ಬ್ರೇಕ್: ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಇಳಿಕೆ ಕಂಡ ಬಿಳಿ ಲೋಹ
Silver Crash: ಚಿನ್ನಕ್ಕೆ ಪೈಪೋಟಿ ನೀಡಿ ಏರುತ್ತಲೇ ಸಾರ್ವಕಾಲಿಕ ದಾಖಲೆ ಬೆರೆದಿದ್ದ ಬೆಳ್ಳಿ ಎರಡು ದಿನಗಳಲ್ಲಿ ಮಹಾಕುಸಿತವನ್ನು ಕಂಡಿದೆ. ಚಿನ್ನದ ನಂತರದ ಖರೀದಿಯಲ್ಲಿರುವ ಬೆಳ್ಳಿ ಜನಸಾಮಾನ್ಯರ ನಿದ್ದೆಗಡಿಸಿತ್ತು. ಒಂದು ತಿಂಗಳಿನಲ್ಲಿ ಮೂರು ಪಟ್ಟು ಹೆಚ್ಚು ದರ ಏರಿಸಿಕೊಂಡು ಒಂದು ಕೆಜಿಗೆ 4,10,000 ರೂಪಾಯಿ ತಲುಪಿದ್ದ ಬೆಳ್ಳಿ ಶನಿವಾರ ಮಾರುಕಟ್ಟೆಯಲ್ಲಿ 2,91,000 ರೂ. ಕ್ಕೆ ಇಳಿದಿದೆ. ಕೈಗಾರಿಕೆಗಳಲ್ಲಿ ಹೆಚ್ಚು ಬಳಕೆ ಆಗುತ್ತಿದ್ದರಿಂದ ಬೆಳ್ಳಿ ಸರ್ವಕಾಲಿಕ ಗರಿಷ್ಠ ದರ ತಲುಪಿತ್ತು. ಚಿನ್ನದ ಖರೀದಿ ದೂರ ಎಂಬಂತಹ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಬೆಳ್ಳಿಯ ಖರೀದಿಗೂ ಯೋಚಿಸುವಂತಹ ಪರಿಸ್ಥಿತಿ ಉಂಟಾಗಿದೆ.
ಶನಿವಾರ ಒಂದೇ ದಿನಕ್ಕೆ ಬೆಳ್ಳಿ ಬರೋಬ್ಬರಿ 45,000 ರೂಪಾಯಿ ಇಳಿಕೆಯಾಗಿದೆ. ನಿನ್ನೆ ಶುಕ್ರವಾರೂ ಸಹ ಬೆಳ್ಳಿಯ ದರ ಇಳಿಕೆಯಾಗಿತ್ತು. ಒಟ್ಟಾರೆಯಾಗಿ ಬೆಳ್ಳಿ ಎರಡು ದಿನಗಳಲ್ಲಿ ಒಂದು ಲಕ್ಷ ರೂಪಾಯಿಗೂ ಅಧಿಕ ಕುಸಿದಿದೆ. ಒಂದು ತಿಂಗಳಿನಿಂದ ನಿರಂತರವಾಗಿ ಏರುಗತಿಯಲ್ಲೇ ಇದ್ದ ಬೆಳ್ಳಿ ಈಗ ಒಮ್ಮಿಂದೊಮ್ಮೆಲೇ ಇಳಿಕೆಯಾಗಿದೆ. ಬಿಳಿ ಲೋಹ ಏರಿಕೆಯಿಂದ ಅತೀ ಕಡಿಮೆ ಸಮಯದಲ್ಲಿ ಅಧಿಕ ಲಾಭ ಪಡೆದುಕೊಂಡಿದ್ದ ಹೂಡಿಕೆದಾರರೆಲ್ಲ ಕಳೆದ ಎರಡು ಬಾರಿಯ ಇಳಿಕೆಯಿಂದಾಗಿ ನಷ್ಟ ಅನುಭವಿಸಿದ್ದಾರೆ.
ಇದನ್ನೂ ಓದಿ: ನಾಳೆ ಕೇಂದ್ರದಿಂದ ಬಜೆಟ್ ಮಂಡನೆ : ಮಧ್ಯಮವರ್ಗಗಳ ಆಶೋತ್ತರಗಳಿಗೆ ಸಿಗಲಿದ್ಯಾ ಸ್ಪಂದನೆ
ನಾಳೆ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು ಬೆಳ್ಳಿಯ ದರಕ್ಕೆ ಸಂಬಂಧಿಸಿದಂತೆ ನಿರೀಕ್ಷೆ ಹೆಚ್ಚಿಸಿದೆ. ಆರ್ಥಿಕ ತಜ್ಞರ ಪ್ರಕಾರ ಅಂದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಬದಲಾವಣೆಗಳಾಗಲಿವೆ ಹಾಗೂ ಅದರ ಮೇಲಿನ ಹೂಡಿಕೆಯ ಬಗ್ಗೆಯೂ ಒಂದಿಷ್ಟು ನಿರ್ಧಾರ ಕೈಗೊಳ್ಳಲು ಸಾಧ್ಯವಾಗಬಹುದು ಎನ್ನಲಾಗಿದೆ.



