Love Jihad: ಸುರತ್ಕಲ್​ನಲ್ಲಿ ಲವ್​ ಜಿಹಾದ್​ ? ಮುಸ್ಲಿಂ ಧರ್ಮದ ಯುವಕನೊಂದಿಗೆ ಹಿಂದೂ ಯುವತಿ ಮದುವೆ

ಮಂಗಳೂರು : Love Jihad: ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ರಿಜಿಸ್ಟರ್​ ಮ್ಯಾರೇಜ್​ ಆಗಿದ್ದು ಈ ಸಂಬಂಧ ಕರಾವಳಿಯ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ. […]

Love Jihad in Suratkal Marriage of a Hindu girl with a Muslim boy

ಮಂಗಳೂರು : Love Jihad: ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ರಿಜಿಸ್ಟರ್​ ಮ್ಯಾರೇಜ್​ ಆಗಿದ್ದು ಈ ಸಂಬಂಧ ಕರಾವಳಿಯ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್​(Surathkal) ಪೊಲೀಸ್​ ಠಾಣೆಯಲ್ಲಿ ಯುವತಿಯ ಪೋಷಕರು ಪ್ರಕರಣ ಕೂಡ ದಾಖಲಿಸಿದ್ದಾರೆ.

ಕಾಸರಗೋಡಿನ ಮೀಪುಗುರಿ ಪ್ರದೇಶದ ನಿವಾಸಿಯಾಗಿರುವ ಹಿಂದೂ ಯುವತಿ ಹಾಗೂ ವಯನಾಡು ಮೂಲದ ಮಹಮ್ಮದ್​ ಮಿಲ್ದಾಜ್​ ಇಬ್ಬರೂ ಪರಸ್ಪರ ಪ್ರೀತಿಸಿ ಓಡಿ ಹೋಗಿ ರಿಜಿಸ್ಟರ್​ ಮದುವೆಯಾಗಿದ್ದು ಕರಾವಳಿ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸುರತ್ಕಲ್​ನ ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ ಮಹಮ್ಮದ್​ ಮಿಲ್ದಾಜ್​, ಸುರತ್ಕಲ್​ನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ಹಿಂದೂ ಯುವತಿಯನ್ನು ಪ್ರೀತಿಸಿದ್ದ ಎನ್ನಲಾಗಿದೆ.ಈಕೆ ಸುರತ್ಕಲ್​ನ ಪಿಜಿಯೊಂದರಲ್ಲಿ ವಾಸವಿದ್ದು ಜನವರಿ 31ರಂದೇ ಇವರಿಬ್ಬರು ವಯನಾಡಿಗೆ ತೆರಳಿ ರಿಜಿಸ್ಟರ್​ ಮ್ಯಾರೇಜ್​ ಮಾಡಿಕೊಂಡಿದ್ದಾರೆ. ಮದುವೆಯ ಬಳಿಕ ಯುವತಿಯು ಪೋಷಕರ ಸಂಪರ್ಕಕ್ಕೆ ಸಿಗದೇ ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

Also read: ಧರ್ಮಸ್ಥಳದ ಭಕ್ತಾದಿಗಳ ಗಮನಕ್ಕೆ : ವಸತಿ ಗೃಹಗಳ ಬುಕ್ಕಿಂಗ್​ ನೆಪದಲ್ಲಿ ಸೈಬರ್​ ವಂಚನೆ, ಆಡಳಿತ ಮಂಡಳಿಯಿಂದ ಎಚ್ಚರಿಕೆ

ಯುವತಿ ವಾಸವಿದ್ದ ಪಿಜಿಗೆ ಆಗಮಿಸಿದ ಪೋಷಕರು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆಕೆ ಫೆಭ್ರವರಿ 9ರಂದು ಪಿಜಿಯಿಂದ ಹೊರಟಿರುವ ವಿಡಿಯೋ ಸೆರೆಯಾಗಿದೆ. ಇದಾದ ಬಳಿಕ ಸುರತ್ಕಲ್​ ಪೊಲೀಸ್ ಠಾಣೆಯಲ್ಲಿ ಹಿಂದೂ ಯುವತಿಯ ಪೋಷಕರು ದೂರು ದಾಖಲಿಸಿದ್ದಾರೆ.

ಈ ಘಟನೆ ಸಂಬಂಧ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು ಕೂಡಲೇ ಇಬ್ಬರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Scroll to Top