ಬೆಂಗಳೂರಲ್ಲಿ 3000ಕ್ಕೂ ಅಧಿಕ ಕೊರೊನಾ ಸೋಂಕಿತರು ನಾಪತ್ತೆ…! ಪತ್ತೆಗೆ ಮುಂದಾದ ಪೊಲೀಸರು..!!!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಎರಡನೇ ಅಲೆಗೆ ಜನರು ತತ್ತರಿಸಿದ್ದಾರೆ. ಈ‌ ನಡುವಲ್ಲೇ ಬೆಂಗಳೂರಿನಲ್ಲಿ 3,000ಕ್ಕೂ ಅಧಿಕ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡರೂ ಕೂಡ ಜನರು ಮುಚ್ಚಿಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಸೋಂಕು ಗಂಭೀರ ಸ್ವರೂಪಕ್ಕೆ ಹೋದ ನಂತರದಲ್ಲಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿಯೇ ಸಮಸ್ಯೆ ಹೆಚ್ಚಳವಾಗುತ್ತಿದೆ. ಕೊನೆಯ ಕ್ಷಣದಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ರೂ ಫಲಕಾರಿ ಆಗುವು ದಿಲ್ಲ. ಹೀಗಾಗಿ ಜನರು ಕೊರೊನಾ ಸೋಂಕನ್ನು ಮುಚ್ಚಿಡಬಾರದು ಎಂದಿದ್ದಾರೆ.

ನಾಪತ್ತೆ ಆಗಿರುವ ಕೊರೊನಾ ಸೋಂಕಿತರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಕೊರೊನಾ ಟೆಸ್ಟ್ ವೇಳೆಯಲ್ಲಿ ನೀಡಿದ್ದ ವಿಳಾಸದಲ್ಲಿ ಯೂ ಸೋಂಕಿತರು ಇಲ್ಲ. ಹೀಗಾಗಿ ಪೊಲೀಸರು ಇದೀಗ ಕೊರೊನಾ ಸೋಂಕಿತರ ಪತ್ತೆಗೆ ಮುಂದಾಗಿದ್ದಾರೆ. ಮೊಬೈಲ್ ಸ್ವಿಚ್ ಮಾಡಿಕೊಂಡಿ ರುವ ಕೊರೊನಾ ಸೋಂಕಿತರು ಮೊಬೈಲ್ ಆನ್ ಮಾಡುವಂತೆ ಮನವಿ‌ ಮಾಡಿಕೊಂಡಿದ್ದಾರೆ.

Comments are closed.