ವಿದ್ಯಾರ್ಥಿನಿ ಮೇಲೆ ಜೂನಿಯರ್ ವಿದ್ಯಾರ್ಥಿಯಿಂದ ಅತ್ಯಾ*ಚಾರ : ವಿದ್ಯಾರ್ಥಿ ಅರೆಸ್ಟ್

Bengaluru Student Raped : ಬೆಂಗಳೂರು : ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಶೌಚಾಲಯಕ್ಕೆ ಎಳೆದೊಯ್ದ ಅದೇ ಕಾಲೇಜಿನ ಆಕೆಯ ಜ್ಯೂನಿಯರ್ ವಿದ್ಯಾರ್ಥಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಅಲ್ಲದೇ ಆಕೆಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆಯು ರಾಜ್ಯ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ನಡೆದಿದೆ.
ಈ ಕುರಿತು ಹನುಮಂತನಗರ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾಳೆ. ಸಂತ್ರಸ್ತ ವಿದ್ಯಾರ್ಥಿನಿಯನ್ನು ಕಾಲೇಜಿನ ಶೌಚಾಲಯದ ಬಳಿ ಎಳೆದೊಯ್ದ ಆರೋಪಿ ಜೀವನ್ ಗೌಡ ಎಂಬಾತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಠಾಣಾ ಪೊಲೀಸರು ಆರೋಪಿ ಜೀವನಗೌಡನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ಟೋಬರ್ 10ರಂದು ಈ ಘಟನೆ ಸಂಭವಿಸಿದ್ದು ಅಂದು ಕಾಲೇಜಿಗೆ ಹಾಜರಾಗಿದ್ದ ಸಂತ್ರಸ್ತೆಯು ಊಟದ ವಿರಾಮದ ಸಂದರ್ಭದಲ್ಲಿ ಆರೋಪಿ ಜೀವನ್ ಗೌಡನಿಂದ ಕೆಲವು ವಸ್ತುಗಳನ್ನು ಪಡೆದುಕೊಳ್ಳುವವಳಿದ್ದಳು.
ಇದನ್ನೂ ಓದಿ: ಕರುಳು ಹಿಂಡುತ್ತೆ ಸಾವಿಗೂ ಮುನ್ನ ಪಾಪಿ ಪತಿಗೆ ಕೃತಿಕಾ ರೆಡ್ಡಿ ಕಳುಹಿಸಿದ ಸಂದೇಶ : ಏನದು ಮೆಸೇಜ್ ?
ಅಂತೆಯೇ ಆತನನ್ನು ಭೇಟಿಯಾದ ಸಂದರ್ಭದಲ್ಲಿ ನಿನ್ನ ಬಳಿ ಸ್ವಲ್ಪ ಮಾತನಾಡಬೇಕು ಬಾ ಎಂದು ಆಕೆಯನ್ನು ಜೀವನ್ 7ನೇ ಮಹಡಿಯಲ್ಲಿರುವ ಪಿಜಿ ಬ್ಲಾಕ್ಗೆ ಕರೆದೊಯ್ದಿದ್ದಾನೆ. ಅಲ್ಲದೇ ಆಕೆಯನ್ನು ಚುಂಬಿಸಲು ಮುಂದಾಗಿದ್ದಾನೆ.
ಜೀವನ್ ಗೌಡನ ತಪ್ಪು ಇರಾದೆಯನ್ನು ಅರಿತ ಸಂತ್ರಸ್ತೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾಳೆ. ಆದರೆ ಆರನೇ ಮಹಡಿಯವರೆಗೂ ಆಕೆಯನ್ನು ಅಟ್ಟಿಸಿಕೊಂಡು ಬಂದ ಆರೋಪಿ ಜೀವನ್ ಗೌಡ ಬಲವಂತವಾಗಿ ಆಕೆಯನ್ನು ಶೌಚಾಲಯದ ಒಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ವಿರೋಧಿಸಿದ್ದಕ್ಕೆ ಮೂತ್ರ ಕುಡಿಸಿದ ಪಾಪಿಗಳು
ಪುರುಷರ ಶೌಚಾಲಯದಲ್ಲಿ ಸಂತ್ರಸ್ತೆಯ ಬಳಿ ಅಸಹಜ ಲೈಂಗಿಕ ಕ್ರಿಯೆಗೆ ಜೀವನ್ ಗೌಡ ಪೀಡಿಸಿದ್ದಾನೆ. ಅಲ್ಲದೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.ಈ ವಿಚಾರವನ್ನು ವಿದ್ಯಾರ್ಥಿನಿ ಆಪ್ತ ಸ್ನೇಹಿತರು ಹಾಗೂ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಬಳಿಕ ಹನುಮಂತನಗರ ಪೊಲೀಸ್ ಠಾಣೆಗೆ ತೆರಳಿ ವಿದ್ಯಾರ್ಥಿನಿ ಆರೋಪಿ ವಿರುದ್ಧ ದೂರು ನೀಡಿದ್ದಾಳೆ.
Bengaluru Student Raped Inside Campus, A junior student of a famous college in has been accused of raping a senior female student



