ಬೆಂಗಳೂರು ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್‌ : ಯುವತಿಗೆ ಪರಿಚಿತನಾಗಿದ್ದ ಡ್ರೈವರ್‌ !

ಬೆಂಗಳೂರು : ಪಾನಮತ್ತಳಾಗಿದ್ದ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಸಂತ್ರಸ್ತ ಯುವತಿ ಹಾಗೂ ಕ್ಯಾಬ್‌ ಡ್ರೈವರ್‌ ಮೊದಲೇ ಪರಿಚಿತರು ಅನ್ನೋದು ಇದೀಗ ಪೊಲೀಸರ ತನಿಖೆಯ ವೇಳೆಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಯುವತಿಯನ್ನು ಕ್ಯಾಬ್‌ ಡ್ರೈವರ್‌ ದೇವರಾಜ್‌ ಎಚ್‌ಎಸ್‌ಆರ್‌ ಲೇಔಟ್‌ನಿಂದ ಮುರುಗೇಶ ಪಾಳ್ಯಕ್ಕೆ ಕರೆ ತಂದಿದ್ದ. ಆದ್ರೆ ಯುವತಿಯ ಮನೆಯ ಬಳಿಯಲ್ಲಿಯೇ ಡ್ರೈವರ್‌ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದ ಜೀವನ್‌ ಭೀಮಾನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಆರೋಪಿ ವಿಚಾರಣೆಯ ವೇಳೆಯಲ್ಲಿ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಯುವತಿ ಹಾಗೂ ಕ್ಯಾಬ್‌ ಚಾಲಕ ದೇವರಾಜ್‌ ಯುವತಿ ತನಗೆ ಮೊದಲೇ ಪರಿಚಿತಳು ಅನ್ನೋ ಮಾಹಿತಿಯನ್ನು ನೀಡಿದ್ದಾನೆ. ಅಲ್ಲದೇ ಆಕೆಯನ್ನು ನಾನು ಈ ಹಿಂದೆ ಸಾಕಷ್ಟು ಬಾರಿ ಡ್ರಾಪ್‌ ಮಾಡಿದ್ದೇನೆ. ಈ ವೇಳೆಯಲ್ಲಿ ಇಬ್ಬರ ನಡುವೆ ಪರಿಚಯವಾಗಿತ್ತು, ಅಲ್ಲದೇ ಪರಸ್ಪರ ಪೋನ್‌ ನಂಬರ್‌ ಕೂಡ ಶೇರ್‌ ಮಾಡಿಕೊಂಡಿದ್ದೇವು ಅನ್ನೋ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾನೆ.

ಪರಿಚಯವಿದ್ದ ಕಾರಣದಿಂದಲೇ ಯುವತಿ ತನಗೆ ತಡರಾತ್ರಿ ಕರೆ ಮಾಡಿ ಡ್ರಾಪ್‌ ಮಾಡುವಂತೆ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಡ್ರಾಪ್‌ ಮಾಡಿದ್ದೇನೆ ಅಂತಾನೂ ಡ್ರೈವರ್‌ ದೇವರಾಜ್‌ ಪೊಲೀಸರ ಮುಂದೆ ಹೇಳಿಕೆಯನ್ನು ನೀಡಿದ್ದಾನೆ. ಆದರೆ ಯುವತಿ ಮನೆಯ ಸಮೀಪದಲ್ಲಿಯೇ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಅಂತಾ ಆರೊಪಿಸಿದ್ದಾಳೆ. ಇದೀಗ ಇಬ್ಬರು ಮೊದಲೇ ಪರಿಚಿತರು ಅನ್ನೋ ಅಂಶ ತಿಳಿಯುತ್ತಿದ್ದಂತೆಯೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ :  ನೀರು ಎಂದು ಆಸಿಡ್‌ ಕುಡಿದ ಯುವತಿ ! ಕ್ಯಾಶ್ಯೂ ಫಾಕ್ಟರಿ ಮಾಲೀಕನ ವಿರುದ್ದ ದಾಖಲಾಯ್ತು ದೂರು

ಇದನ್ನೂ ಓದಿ : ಹೆತ್ತ ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿದ ನೀಚ ಮಗ

( Big twist for raping young woman case , Cab Driver who was familiar with the young woman )

Comments are closed.