ನಾಳೆಯಿಂದ ಹಾಲು, ಬೇಕರಿ ಉತ್ಪನ್ನ ಸಿಗಲ್ಲ : ಹೇಗಿರುತ್ತೆ ಕರ್ನಾಟಕ ಬಂದ್‌ ?

Milk and Bakery shops Close : ಬೆಂಗಳೂರು : ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ವರ್ತಕರಿಗೆ ತರಿಗೆ ನೋಟಿಸ್‌ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಸಣ್ಣ ವ್ಯಾಪಾರಿಗಳು ಮತ್ತು ಸಂಘಟನೆಗಳು ಜುಲೈ 23 ರಿಂದ 25 ರವರೆಗೆ ಹಂತ ಹಂತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದಿನಿಂದ ವರ್ತಕರ ಪ್ರತಿಭಟನೆ ಆರಂಭಗೊಂಡಿದೆ. ಜುಲೈ 23 ಮತ್ತು 24 ರಂದು ಹಾಲು, ಮೊಸರು, ಟೀ, ಕಾಫಿ ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ ಗ್ರಾಹಕರಿಗೆ ಎರಡು ದಿನಗಳ ಕಾಲ ಹಾಲಿನ ಉತ್ಪನ್ನಗಳು ಸಿಗೋದಿಲ್ಲ.

Milk and Bakery shops Close : ಕರ್ನಾಟಕ ಬಂದ್‌ಗೆ ಯಾವ ಸಂಘಟನೆಗಳ ಬೆಂಬಲ

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು (Karnataka Karmika Parishath) ಮತ್ತು ಕರ್ನಾಟಕ ರಾಜ್ಯ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ಯಮಗಳ ಸಂಘ (Karnataka State Association of Bakeries, Condiments and Small Enterprises) ನೇತೃತ್ವ ವಹಿಸಿವೆ.

ಇದನ್ನೂ ಓದಿ : ಬೈಂದೂರಿನಲ್ಲಿ ಆನ್‌ಲೈನ್ ವಂಚನೆ: ಜಿಮ್ ಟ್ರೈನರ್‌ನಿಂದ 61,013 ರೂ. ಸುಲಿಗೆ !

ಸಣ್ಣ ವ್ಯಾಪಾರ ಸಂಘಟನೆಗಳು, ಬೀದಿಬದಿ ವ್ಯಾಪಾರಿಗಳ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ತೆರಿಗೆ ನೋಟಿಸ್‌ಗಳಿಂದ ತೊಂದರೆಗೊಳಗಾದ 65,000ಕ್ಕೂ ಹೆಚ್ಚು ಅಂಗಡಿ ಮಾಲೀಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Milk and Bakery shops Close : ಜುಲೈ 25ಕ್ಕೆ ಕರ್ನಾಟಕ ಬಂದ್‌ ಆಗುತ್ತಾ?

ಪ್ರತಿಭಟನೆಯ ಅಂತಿಮ ಹಂತವಾಗಿ ಜುಲೈ 25 ರಂದು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ. ಇಂದು ಸಣ್ಣ ಅಂಗಡಿಗಳು, ಬೇಕರಿಗಳು, ಕಾಂಡಿಮೆಂಟ್ಸ್ ಅಂಗಡಿಗಳು, ಚಹಾ ಮತ್ತು ಕಾಫಿ ಮಳಿಗೆಗಳು ಸೇರಿದಂತೆ ಹೆಚ್ಚಿನ ವ್ಯಾಪಾರ ಸಂಸ್ಥೆಗಳು ಮುಚ್ಚಲಿವೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಂದು ಬೃಹತ್ ಪ್ರತಿಭಟನೆ ಮತ್ತು ಸಮಾವೇಶ ನಡೆಯಲಿದೆ.

ಪ್ರತಿಭಟನೆಯ ಹಂತಗಳು:

ಜುಲೈ 23 (ಇಂದು): ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸ್ಥಗಿತ. ಹಲವರು ಕಪ್ಪು ಪಟ್ಟಿ ಧರಿಸಿ ವ್ಯಾಪಾರ ಮಾಡಲಿದ್ದಾರೆ.

ಜುಲೈ 24 (ನಾಳೆ): ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸ್ಥಗಿತ ಮುಂದುವರಿಕೆ, ಜೊತೆಗೆ ಗುಟ್ಕಾ ಮತ್ತು ಸಿಗರೇಟ್ ಮಾರಾಟ ನಿಲ್ಲಿಸುವ ಸಾಧ್ಯತೆ.

ಇದನ್ನೂ ಓದಿ : ಉಡುಪಿ : ಫೇಸ್‌ಬುಕ್‌ ಜಾಹೀರಾತು ನಂಬಿ 3 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಜುಲೈ 25: ರಾಜ್ಯಾದ್ಯಂತ ಸಂಪೂರ್ಣ ಬಂದ್, ಅಂಗಡಿ ಮುಂಗಟ್ಟುಗಳು ಮುಚ್ಚಲಿವೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ.

ಅಗತ್ಯ ಸೇವೆಗಳಾದ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು, ಆಂಬುಲೆನ್ಸ್‌ಗಳು, ಇತ್ಯಾದಿಗಳಿಗೆ ಬಂದ್‌ನಿಂದ ವಿನಾಯಿತಿ ಇರಲಿದೆ.

ಸಾರ್ವಜನಿಕರು ಹಾಲಿನ ಉತ್ಪನ್ನಗಳ ಕೊರತೆಗೆ ಸಿದ್ಧರಾಗಿರುವುದು ಮತ್ತು ಜುಲೈ 25 ರಂದು ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.

Milk Bhooth and Bakery shops will close from tomorrow in Karnataka Kannada news

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories