Rohit Sharma breaks MS Dhoni record : ಧೋನಿ ದಾಖಲೆ ಮುರಿದ ರೋಹಿತ್, ಪಾಕ್ ರೆಕಾರ್ಡ್ ಸರಿಗಟ್ಟಿದ ಭಾರತ; ಒಂದೇ ಪಂದ್ಯದಲ್ಲಿ ಎರಡು ದಾಖಲೆ

ತಿರುವನಂತಪುರ: ದಕ್ಷಿಣ ಆಫ್ರಿಕಾ ವಿರುದ್ಧ ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಭಾರತ 8 ವಿಕೆಟ್’ಗಳಿಂದ ಸುಲಭವಾಗಿ ಗೆದ್ದುಕೊಂಡಿದೆ.ಹರಿಣಗಳ ವಿರುದ್ಧದ ಗೆಲುವಿನೊಂದಿಗೆ ಭಾರತ ತಂಡ ಪಾಕಿಸ್ತಾನದ ಹೆಸರಲ್ಲಿದ್ದ ದಾಖಲೆಯೊಂದನ್ನು ಉಡೀಸ್ ಮಾಡಿದ್ರೆ, ಎಂ.ಎಸ್ ಧೋನಿ ( MS Dhoni ) ಅವರ ದಾಖಲೆಯನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma MS Dhoni) ಪುಡಿಗಟ್ಟಿದ್ದಾರೆ.

ಗ್ರೀನ್ ಫೀಲ್ಡ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ, (India Vs South Africa T20 series) ಭಾರತದ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 106 ರನ್’ಗಳನ್ನಷ್ಟೇ ಕಲೆ ಹಾಕಿತ್ತು. 107 ರನ್’ಗಳ ಸುಲಭ ಗುರಿಯ ಮುಂದೆ 17 ರನ್ನಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಉಪನಾಯಕ ಕೆ.ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಆಸರೆಯಾಗಿದ್ದರು. ಈ ಜೋಡಿ ಮುರಿಯದ 3ನೇ ವಿಕೆಟ್’ಗೆ 93 ರನ್ ಸೇರಿಸಿ ಭಾರತಕ್ಕೆ 8 ವಿಕೆಟ್’ಗಳ ಭರ್ಜರಿ ಗೆಲುವು ತಂದುಕೊಟ್ಟಿತ್ತು.

ಆ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಂದೇ ವರ್ಷ ಅತೀ ಹೆಚ್ಚು ಗೆಲುವುಗಳನ್ನು ದಾಖಲಿಸಿದ ಹಿರಿಮೆಗೆ ಭಾರತ ತಂಡ ಪಾತ್ರವಾಗಿದ್ದುಸ, ಪಾಕಿಸ್ತಾನದ ವಿಶ್ವದಾಖಲೆಯನ್ನು ಸರಿಗಟ್ಟಿದೆ. 2022ರಲ್ಲಿ ಆಡಿದ 27 ಟಿ20 ಪಂದ್ಯಗಳಲ್ಲಿ ಭಾರತ 20ರಲ್ಲಿ ಗೆದ್ದಿದೆ. ಇದು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ತಂಡವೊಂದು ದಾಖಲಿಸಿರುವ ಅತೀ ಹೆಚ್ಚು ಗೆಲುವುಗಳು. 2021ರಲ್ಲಿ ಪಾಕಿಸ್ತಾನ ಕೂಡ 20 ಗೆಲುವುಗಳನ್ನು ದಾಖಲಿಸಿತ್ತು. ಅಕ್ಟೋಬರ್ 2ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯವನ್ನು ಭಾರತ ಗೆದ್ದಲ್ಲಿ, ಪಾಕಿಸ್ತಾನದ ದಾಖಲೆಯನ್ನು ಪುಡಿಗಟ್ಟಿ ಹೊಸ ವಿಶ್ವದಾಖಲೆ ನಿರ್ಮಿಸಲಿದೆ.

ಧೋನಿ ದಾಖಲೆ ಮುರಿದ ರೋಹಿತ್ (Rohit Sharma MS Dhoni)

ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟಿ20 ಗೆಲುವಿನೊಂದಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ಎಂ.ಎಸ್ ಧೋನಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಟಿ20 ಗೆಲುವುಗಳನ್ನು ಕಂಡ ಭಾರತೀಯ ನಾಯಕನೆಂಬ ದಾಖಲೆಯನ್ನು ರೋಹಿತ್ ಬರೆದಿದ್ದಾರೆ. ಈ ವರ್ಷ 21 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ 16 ಗೆಲುವುಗಳನ್ನು ಕಂಡಿದ್ದಾರೆ. ಇದರೊಂದಿಗೆ ಒಂದೇ ವರ್ಷ 15 ಗೆಲುವುಗಳನ್ನು ಕಂಡಿದ್ದ ಮಾಜಿ ನಾಯಕ ಎಂ.ಎಸ್ ಧೋನಿ ಅವರ ಭಾರತೀಯ ದಾಖಲೆ ಪತನಗೊಂಡಿದೆ.

2022ರಲ್ಲಿ ಭಾರತದ ಟಿ20 ಗೆಲುವುಗಳು
Vs ವೆಸ್ಟ್ ಇಂಡೀಸ್, 6 ವಿಕೆಟ್ ಗೆಲುವು: ಫೆಬ್ರವರಿ 16; ಕೋಲ್ಕತಾ
Vs ವೆಸ್ಟ್ ಇಂಡೀಸ್, 8 ರನ್ ಗೆಲುವು: ಫೆಬ್ರವರಿ 18; ಕೋಲ್ಕತಾ
Vs ವೆಸ್ಟ್ ಇಂಡೀಸ್, 17 ರನ್ ಗೆಲುವು: ಫೆಬ್ರವರಿ 20; ಕೋಲ್ಕತಾ
Vs ಶ್ರೀಲಂಕಾ, 62 ರನ್ ಗೆಲುವು: ಫೆಬ್ರವರಿ 24; ಲಕ್ನೋ
Vs ಶ್ರೀಲಂಕಾ, 7 ವಿಕೆಟ್ ಗೆಲುವು: ಫೆಬ್ರವರಿ 26; ಧರ್ಮಶಾಲಾ
Vs ಶ್ರೀಲಂಕಾ, 6 ವಿಕೆಟ್ ಗೆಲುವು: ಫೆಬ್ರವರಿ 27; ಧರ್ಮಶಾಲಾ
Vs ದಕ್ಷಿಣ ಆಫ್ರಿಕಾ, 48 ರನ್ ಗೆಲುವು: ಜೂನ್ 14; ವಿಶಾಖಪಟ್ಟಣ
Vs ದಕ್ಷಿಣ ಆಫ್ರಿಕಾ, 82 ರನ್ ಗೆಲುವು: ಜೂನ್ 17; ರಾಜ್’ಕೋಟ್
Vs ಐರ್ಲೆಂಡ್, 7 ವಿಕೆಟ್ ಗೆಲುವು: ಜೂನ್ 26; ಡುಬ್ಲಿನ್
Vs ಐರ್ಲೆಂಡ್, 4 ರನ್ ಗೆಲುವು: ಜೂನ್ 28; ಡುಬ್ಲಿನ್
Vs ಇಂಗ್ಲೆಂಡ್, 50 ರನ್ ಗೆಲುವು: ಜುಲೈ 07; ಸೌಥಾಂಪ್ಟನ್
Vs ಇಂಗ್ಲೆಂಡ್, 49 ರನ್ ಗೆಲುವು: ಜುಲೈ 09; ಬರ್ಮಿಂಗ್’ಹ್ಯಾಮ್
Vs ವೆಸ್ಟ್ ಇಂಡೀಸ್, 68 ರನ್ ಗೆಲುವು: ಜುಲೈ 29; ತರೌಬ
Vs ವೆಸ್ಟ್ ಇಂಡೀಸ್, 7 ವಿಕೆಟ್ ಗೆಲುವು: ಆಗಸ್ಟ್ 02; ತರೌಬ
Vs ವೆಸ್ಟ್ ಇಂಡೀಸ್, 59 ರನ್ ಗೆಲುವು: ಆಗಸ್ಟ್ 06; ಲಾಡರ್’ಹಿಲ್
Vs ವೆಸ್ಟ್ ಇಂಡೀಸ್, 88 ರನ್ ಗೆಲುವು: ಆಗಸ್ಟ್ 07; ಲಾಡರ್’ಹಿಲ್
Vs ಪಾಕಿಸ್ತಾನ, 5 ವಿಕೆಟ್ ಗೆಲುವು: ಆಗಸ್ಟ್ 28; ದುಬೈ
Vs ಹಾಂಕಾಂಗ್, 40 ರನ್ ಗೆಲುವು: ಆಗಸ್ಟ್ 31; ದುಬೈ
Vs ಅಫ್ಘಾನಿಸ್ತಾನ, 101 ರನ್ ಗೆಲುವು: ಸೆಪ್ಟೆಂಬರ್ 08; ದುಬೈ
Vs ಆಸ್ಟ್ರೇಲಿಯಾ, 6 ವಿಕೆಟ್ ಗೆಲುವು: ಸೆಪ್ಟೆಂಬರ್ 23; ನಾಗ್ಪುರ
Vs ಆಸ್ಟ್ರೇಲಿಯಾ, 6 ವಿಕೆಟ್ ಗೆಲುವು: ಸೆಪ್ಟೆಂಬರ್ 25; ಹೈದರಾಬಾದ್
Vs ದಕ್ಷಿಣ ಆಫ್ರಿಕಾ, 8 ವಿಕೆಟ್ ಗೆಲುವು: ಸೆಪ್ಟೆಂಬರ್ 28; ತಿರುವನಂತಪುರ

ಇದನ್ನೂ ಓದಿ : Jasprit Bumrah out of T20 World Cup : ಟಿ20 ವಿಶ್ವಕಪ್’ನಿಂದ ಜಸ್‌ಪ್ರೀತ್ ಬುಮ್ರಾ ಔಟ್, ಭಾರತಕ್ಕೆ ಸಿಡಿಲಾಘಾತ

ಇದನ್ನೂ ಓದಿ : KL Rahul Latest Record : 11 ರಾಷ್ಟ್ರಗಳ ವಿರುದ್ಧ ಟಿ20 ಅರ್ಧಶತಕ; ಕ್ರಿಕೆಟ್ ಚರಿತ್ರೆಯಲ್ಲೇ ಅಪರೂಪದ ದಾಖಲೆ ಬರೆದ ಕೆ.ಎಲ್ ರಾಹುಲ್

indian cricket team captain rohit sharma breaks ms dhoni record

Comments are closed.