ಜೀವನಾಂಶ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು : ವಿವಾಹ ನಂತರ ಜನಿಸಿದ ಕಂದಮ್ಮನಿಗೂ ನಿಯಮ ಅನ್ವಯ

ವ್ಯಕ್ತಿಯೊಬ್ಬ ತನ್ನ ಜೈವಿಕ ಮಗು ಅಲ್ಲದ ಮಗುವಿಗೆ ಜೀವನಾಂಶ ಪಾವತಿಸಬೇಕೆಂದೇನಿಲ್ಲ. ಮಗು ವಿವಾಹದ ಬಳಿಕ ಜನಿಸಿದ್ದರೂ ಸಹ ಈ ನಿಯಮ ಅನ್ವಯಿಸಲಿದೆ.

ವಿವಾಹದ ಬಳಿಕ ಮಗು ಜನಿಸಿದ್ದರೂ ಡಿಎನ್​ಎ ವರದಿ ಸಾಬೀತಾಗದೇ ಹೋದಲ್ಲಿ ಆ ಮಗುವಿಗೆ ತಂದೆ ಜೀವನಾಂಶ ಕೊಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. 2016ರಲ್ಲಿ ವಿವಾಹವಾಗಿದ್ದ ದಂಪತಿ ನಡುವೆ ವೈಮನಸ್ಯ ಉಂಟಾದ ಹಿನ್ನೆಲೆಯಲ್ಲಿ ಮಹಿಳೆಯು ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ – 2005’ರ ಅಡಿಯಲ್ಲಿ ತನಗೆ ಹಾಗೂ ತನ್ನ ಮಗಳಿಗೆ ಮಧ್ಯಂತರ ಜೀವನಾಂಶ ನೀಡುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು.

ವಿಚಾರಣೆಯ ವೇಳೆ ತಂದೆಯು, ಆ ಮಗುವಿನ ಜೈವಿಕ ತಂದೆ ನಾನಲ್ಲ ಎಂದು ಹೇಳಿದ್ದು, ಪತಿಯು ಮಗುವಿನ ಪಿತೃತ್ವವನ್ನು ಪ್ರಶ್ನಿಸಿ ಡಿಎನ್​ಎ ಪರೀಕ್ಷೆಗೆ ವಿನಂತಿಸಿದ್ದರು. ಈ ಸಂಬಂಧ ನ್ಯಾಯಮೂರ್ತಿಗಳಾದ ಸಂಜಯ್​ ಕರೋಲ್​ ಹಾಗೂ ಎನ್​.ಕೋಟೆಶ್ವರ ಸಿಂಗ್​ ನೇತೃತ್ವದ ಪೀಠವು ಮಹತ್ವದ ಆದೇಶ ನೀಡಿದೆ.

ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ದಂಪತಿ ದುರಂತ ಅಂತ್ಯ..! ರಾಜ್ಯ ರಾಜಧಾನಿಯಲ್ಲಿ ದಂಪತಿ ನಿಗೂಢ ಸಾವು

ವ್ಯಕ್ತಿಯೊಬ್ಬ ತನ್ನ ಜೈವಿಕ ಮಗು ಅಲ್ಲದ ಮಗುವಿಗೆ ಜೀವನಾಂಶ ಪಾವತಿಸಬೇಕೆಂದೇನಿಲ್ಲ. ಮಗು ವಿವಾಹದ ಬಳಿಕ ಜನಿಸಿದ್ದರೂ ಸಹ ಈ ನಿಯಮ ಅನ್ವಯಿಸಲಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112ರ ಅಡಿಯಲ್ಲಿ ದಂಪತಿ ಒಟ್ಟಾಗಿ ಇರುವಾಗ ಜನಿಸಿದ ಮಗು ತಂದೆಯಿಂದಲೇ ಜನಿಸಿರಬೇಕು. ಆದರೆ ಡಿಎನ್​ಎ ವರದಿಯು ತಂದೆಯು ಜೈವಿಕ ತಂದೆ ಎಂದು ಸಾಬೀತುಪಡಿಸಲು ವಿಫಲವಾದಲ್ಲಿ ಆಗ ಜೀವನಾಂಶ ಕೊಡಬೇಕು ಎಂದಿಲ್ಲ ಎಂದು ಕೋರ್ಟ್ ಹೇಳಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories