Toll plaza free highways : ಟೋಲ್ ಪ್ಲಾಜಾಗಳಿಗೆ ಶೀಘ್ರದಲ್ಲೇ ಕೊಕ್ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇನ್ಮುಂದೆ ಬ್ಯಾರಿಯರ್ ಫ್ರೀ ಸಂಚಾರ
ಫಾಸ್ಟ್ಯಾಗ್ ವ್ಯವಸ್ಥೆಗಿಂತಲೂ ಸುಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. ಈ ವರ್ಷದ ಡಿಸೆಂಬರ್ ತಿಂಗಳಿನಿಂದಲೇ ಈ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಪ್ಲಾಜಾಗಳು ಮಾಯವಾಗಲಿವೆ.

Toll plaza free highways : ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನನಿತ್ಯ ಸಂಚರಿಸುವವರಿಗೆ ಮಾತ್ರ ಟೋಲ್ ಪ್ಲಾಜಾ ವ್ಯವಸ್ಥೆ ಎಷ್ಟು ಕಿರಿಕಿರಿ ಎಂಬುದರ ಅರಿವಿರುತ್ತದೆ. ಇದೇ ಕಾರಣದಿಂದಲೇ ಕೇಂದ್ರ ಸರಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇನ್ಮುಂದೆ ಟೋಲ್ ಪ್ಲಾಜಾಗಳಿಗೆ ಕೋಕ್ ನೀಡಲಿದೆ.
ಟೋಲ್ ಕಟ್ಟುವ ಕಾರಣಕ್ಕೆ ಗಂಟೆಗಟ್ಟಲೇ ಟ್ರಾಫಿಕ್ ಜಾಂನಲ್ಲಿ ಸಮಯ ವ್ಯರ್ಥ ಮಾಡುವುದು ಮಾತ್ರವಲ್ಲದೇ, ಟೋಲ್ ಪ್ಲಾಜಾಗಳಲ್ಲಿ ಇರುವ ಸಂಚಾರ ದಟ್ಟಣೆ ಕೂಡ ಮತ್ತೊಂದು ತಲೆನೋವಾಗಿದೆ. ಅಲ್ಲಲ್ಲಿ ಟೋಲ್ ಪ್ಲಾಜಾಗಳ ಸಿಬ್ಬಂದಿ ದುರ್ವರ್ತನೆ ತೋರಿದ ಘಟನೆಗಳೂ ಬೆಳಕಿಗೆ ಬರುತ್ತಲೇ ಇದೆ. ಈ ಎಲ್ಲಾ ಕಿರಿಕಿರಿಗಳಿಗೆ ತಿಲಾಂಜಲಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲಿಯೇ ತಡೆರಹಿತ ಟೋಲ್ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಫಾಸ್ಟ್ಯಾಗ್ ವ್ಯವಸ್ಥೆಗಿಂತಲೂ ಸುಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. ಈ ವರ್ಷದ ಡಿಸೆಂಬರ್ ತಿಂಗಳಿನಿಂದಲೇ ಈ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಪ್ಲಾಜಾಗಳು ಮಾಯವಾಗಲಿವೆ.
Also Read : ಜೀವನಾಂಶ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು : ವಿವಾಹ ನಂತರ ಜನಿಸಿದ ಕಂದಮ್ಮನಿಗೂ ನಿಯಮ ಅನ್ವಯ
ಅಂದಹಾಗೆ ಟೋಲ್ ಪ್ಲಾಜಾಗಳನ್ನು ತೆಗೆದ ಮಾತ್ರಕ್ಕೆ ಟೋಲ್ ಶುಲ್ಕ ಕೂಡ ಮಾಯವಾಗುತ್ತೆ ಎಂದುಕೊಳ್ಳುವಂತಿಲ್ಲ. ಏಕೆಂದರೆ ಕೇಂದ್ರ ಸರ್ಕಾರವು ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ನಿಮ್ಮ ವಾಹನದಲ್ಲಿ ನೀವು ಪ್ರಯಾಣಿಸಿದ ಕಿಲೋಮೀಟರ್ನ್ನು ಜಿಪಿಎಸ್ ಮೂಲಕ ಟ್ರ್ಯಾಕ್ ಮಾಡಿ, ಹಣ ಕಡಿತ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೈಸ್ಪೀಡ್ ಕ್ಯಾಮರಾಗಳನ್ನು ಶೀಘ್ರದಲ್ಲೇ ಅಳವಡಿಸಲಾಗುತ್ತಿದ್ದು, ಈ ಕ್ಯಾಮರಾಗಳು ನಂಬರ್ ಪ್ಲೇಟ್ನ್ನು ಸ್ಕ್ಯಾನ್ ಮಾಡಿ ಟೋಲ್ ಶುಲ್ಕ ನಿರ್ಧರಿಸಲಿವೆ.
Also Read : ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ : 2 ಪರ್ಸೆಂಟ್ ತುಟ್ಟಿ ಭತ್ಯೆ ಹೆಚ್ಚಳಕ್ಕೆ
ನಿಮ್ಮ ಫಾಸ್ಟ್ಟ್ಯಾಗ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಕಡಿತಗೊಳ್ಳಲಿದೆ. ಇದರಿಂದ ನೀವು ಹೆದ್ದಾರಿಯಲ್ಲಿ ವೇಗವಾಗಿ ವಾಹನ ಚಲಾವಣೆ ಮಾಡಬಹುದಾಗಿದೆ.
ಯಾವುದೇ ಸಮಯ ವ್ಯರ್ಥವಾಗುವುದಿಲ್ಲ. ಟೋಲ್ ಪ್ಲಾಜಾ ಸಿಬ್ಬಂದಿಯ ಕಾರ್ಯವನ್ನು ಹೈ ಸ್ಪೀಡ್ ಕ್ಯಾಮರಾಗಳು ನಿರ್ವಹಿಸಲಿದ್ದು, ವಾಹನ ಸವಾರರಿಗೆ ಟೋಲ್ ಕಿರಿಕಿರಿ ತಪ್ಪಲಿದೆ.
toll plaza free highways india gps satellite toll collection update



